ಯೋಗ ದಿನ ಪ್ರಚಾರಕ್ಕೆ ಅಂತರ್ಜಾಲದ ನೆರವು
ನವದೆಹಲಿ, ಜೂ. 10: ವಿಶ್ವಸಂಸ್ಥೆಯ ಮಾನ್ಯತೆ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಗ ದಿನ ಹತ್ತಿರ ಬರುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದು ಸಾಮಾಜಿಕ ತಾಣಗಳ ಜತೆಗೆ ಅಂತರ್ಜಾಲದ ನೆರವನ್ನು ಪಡೆದುಕೊಳ್ಳುತ್ತಿದೆ.
ವಿದೇಶಾಂಗ ವ್ಯವಹಾರ ಖಾತೆ ಈ ಬಗ್ಗೆ ಮೈಕ್ರೋ ಸೈಟ್ ವೊಂದನ್ನು ಬಿಡುಗಡೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.21 ರಂದು ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ.[ಸೂರ್ಯ ನಮಸ್ಕಾರ ವಿರೋಧಿಗಳನ್ನು ಕೂಪಕ್ಕೆ ತಳ್ಳಿ: ಯೋಗಿ]
ಮೈಕ್ರೋ ಸೈಟ್ ನಲ್ಲಿ ಯೋಗಕ್ಕೆ ಸಂಬಂಧಿಸಿದ ವಿವಿಧ ಆಸನಗಳ ವಿಧಾನವನ್ನು ಪೋಸ್ಟ್ ಮಾಡಲಾಗಯತ್ತದೆ. ಜತೆಗೆ ಆಸನದ ಪ್ರಯೋನಜಗಳನ್ನು ಹೇಳಲಾಗಿದೆ. ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಬಹುದು.
A website that keeps you updated with #YogaDay programmes across the world. http://t.co/9WlZBPINVe
— Narendra Modi (@narendramodi) June 10, 2015
ಜೂ.21 ರಂದು ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾರತ-ಅಮೇರಿಕ ಸಂಸ್ಥೆಗಳ ಹಾಗೂ ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.[ಯೋಗ ದಿನಕ್ಕೆ ಸೋನಿಯಾಗೂ ಆಮಂತ್ರಣ]
ನರೇಂದ್ರ ಮೋದಿ ಯೋಗ ಮಾಡಲ್ಲ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಯೋಗ ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜಪಥದಲ್ಲಿ ಮೋದಿ ಯೋಗ ಪ್ರದರ್ಶನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
Shashankasana is the ideal Asana to practice to reduce stress and anger. #YogaDayhttps://t.co/Lx8cXfiswy
— Narendra Modi (@narendramodi) June 10, 2015