ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಪ್ರಧಾನಿ ಮೋದಿ ಅನಾವರಣಗೊಳಿಸಿದ ಭಾರತದ ನೌಕಾ ಧ್ವಜ 'ನಿಶಾನ್' ಹೇಗಿದೆ?

|
Google Oneindia Kannada News

ಕೊಚ್ಚಿನ್, ಸೆಪ್ಟೆಂಬರ್ 2: ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಹೊಸ ನೌಕಾ ಧ್ವಜ 'ನಿಶಾನ್' ಅನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದರು.

ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯು ಹೊಸ ನೌಕಾ ಧ್ವಜ 'ನಿಶಾನ್' ಅನ್ನು ಅನಾವರಣಗೊಳಿಸಿದರು. ನೌಕಾ ಧ್ವಜಗಳು ನೌಕಾ ಹಡಗುಗಳು ಅಥವಾ ರಚನೆಗಳು ರಾಷ್ಟ್ರೀಯತೆಯನ್ನು ಸೂಚಿಸುವ ಧ್ವಜವಾಗಿದೆ.

INS Vikrant : ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್INS Vikrant : ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್

ಪ್ರಸ್ತುತ ಭಾರತೀಯ ನೌಕಾ ಧ್ವಜವು ಸೇಂಟ್ ಜಾರ್ಜ್ ಕ್ರಾಸ್ ಅನ್ನು ಒಳಗೊಂಡಿದೆ. ಬಿಳಿ ಹಿನ್ನೆಲೆಯನ್ನು ಹೊಂದಿರುವ ಕೆಂಪು ಶಿಲುಬೆ. ಶಿಲುಬೆಯ ಒಂದು ಮೂಲೆಯಲ್ಲಿ, ದೇಶವು ಸ್ವಾತಂತ್ರ್ಯವನ್ನು ಪಡೆದಾಗ ಭಾರತೀಯ ಧ್ವಜವನ್ನು ಹಾಕಲಾಯಿತು, ಆ ಸ್ಥಳದಲ್ಲಿ ಯೂನಿಯನ್ ಜ್ಯಾಕ್ ಅನ್ನು ಬದಲಾಯಿಸಲಾಗಿದೆ.

PM Narendra Modi unveils new ensign of Indian Navy at Kochi

ಹಲವು ಬಾರಿ ಬದಲಾಗಿರುವ ನೌಕಾಧ್ವಜ:

ಭಾರತವು ಸ್ವಾತಂತ್ರ್ಯ ಪಡೆದ ನಂತರದಲ್ಲಿ ಹಲವು ಬಾರಿ ಭಾರತೀಯ ನೌಕಾ ಧ್ವಜವು ಬದಲಾವಣೆಯಾಗಿದೆ. 2001ರಲ್ಲಿ ಮಾತ್ರ ಸೇಂಟ್ ಜಾರ್ಜ್ ಕ್ರಾಸ್ ಅನ್ನು ಹೊರತೆಗೆಯಲಾಯಿತು. ಭಾರತೀಯ ನೌಕಾಪಡೆ ಚಿಹ್ನೆಯನ್ನು ಧ್ವಜದ ಎದುರು ಮೂಲೆಯಲ್ಲಿ ಸೇರಿಸಲಾಯಿತು. ಶಿಲುಬೆಯ ಛೇದಕದಲ್ಲಿ ಭಾರತದ ಲಾಂಛನವನ್ನು ಸೇರಿಸುವುದರೊಂದಿಗೆ 2004 ರಲ್ಲಿ ಮತ್ತೆ ಶಿಲುಬೆಯನ್ನು ಹಾಕಲಾಯಿತು.

ಐಎನ್‌ಎಸ್ ವಿಕ್ರಾಂತ್‌ಗೆ ಪ್ರಧಾನಿ ಚಾಲನೆ:

ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಯುದ್ಧನೌಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

ಶುಕ್ರವಾರ ಕೊಚ್ಚಿನ್ ಪ್ರದೇಶದಲ್ಲಿ ನಡೆದ ಐಎನ್ಎಸ್ ವಿಕ್ರಾಂತ್ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ಹಲವು ಕೇಂದ್ರ ಸಚಿವರು ಸಹ ಭಾಗವಹಿಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೌಕಾಯಾನ ಸಚಿವ ಸರ್ಬಾನಂದ ಸೋನೋವಾಲ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎರ್ನಾಕುಲಂ ಸಂಸದ ಹಿಬಿ ಈಡನ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ನೌಕಾಪಡೆಯ ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಇದ್ದರು.

English summary
PM Narendra Modi unveils new ensign of Indian Navy at Kochi. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X