PM Modi's Independence Day Speech Highlights: ಹೆಲ್ತ್‌ಕಾರ್ಡ್, ಶೀಘ್ರದಲ್ಲೇ ಕೊರೊನಾಗೆ ತ್ರಿವಳಿ ಲಸಿಕೆ

ನವದೆಹಲಿ, ಆಗಸ್ಟ್ 15: 74ನೇ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಮಾತನಾಡಿದರು.
ಮೋದಿ ಭಾಷಣದ ಪ್ರಮುಖಾಂಶಗಳು

-ಎಷ್ಟು ದಿನಗಳವರೆಗೆ ಕಚ್ಚಾ ವಸ್ತುಗಳನ್ನು ರಫ್ತು ಮಾಡಿ, ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು, ಇದಕ್ಕೊಂದು ಅಂತ್ಯ ಬೇಕಿದೆ, ಆತ್ಮ ನಿರ್ಭರ ಭಾರತದಡಿ ದೇಶವನ್ನು ಸ್ವಾವಲಂಬಿಯಾಗಿಸಲು ಪಣ ತೊಡಬೇಕಿದೆ.

PM Narendra Modis Independence Day Speech Highlights In Kannada

-ಆತ್ಮ ನಿರ್ಭರ ಭಾರತ ಎನ್ನುವುದು 130 ಕೋಟಿ ಜನರ ಮಂತ್ರವಾಗಿದೆ
-ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾರತ ನಂಬಿದೆ. ನಾವು ಆರ್ಥಿಕತೆ ಮತ್ತು ಅಭಿವೃದ್ಧಿ ಕಡೆಗೆ ಗಮನಹರಿಸುವಾಗ ಮಾನವೀಯತೆಯನ್ನು ಬಿಡಬಾರದು
-ಕೆಲವು ತಿಂಗಳ ಹಿಂದೆ ಎನ್ 95 ಮಾಸ್ಕ್ ಆಮದು ಮಾಡಿಕೊಳ್ಳಲಾಗುತ್ತಿತ್ತು, ಉದ್ಯಮಿಗಳ ಸಹಕಾರದಿಂದ ಈಗ ನಮ್ಮಲ್ಲೇ ತಯಾರಿಸಿ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
-ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ-ಕೊರೊನಾದಿಂದ ವಿಶ್ವದ ಆರ್ಥಿಕತೆ ಸ್ಥಬ್ಧವಾಗಿದೆ,ಆದರೆ ಭಾರತ ಆತ್ಮ ನಿರ್ಭರ ಭಾರತ ಇದೊಂದು ಅವಕಾಶವೆಂದು ತಿಳಿದಿವೆ, ಸಮಗ್ರ ವಿಶ್ವಕ್ಕೂ ಭಾರತ ತನ್ನ ಕೊಡುಗೆ ನೀಡುವ ಸಂದರ್ಭ ಬಂದಿದೆ.
-ವಿಶ್ವಕ್ಕೆ ಭಾರತವು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಆದರೆ ನಮ್ಮಲ್ಲಿರುವ ಕಚ್ಚಾ ವಸ್ತುಗಳಿಗೆ ಪಕ್ಕಾ ರೂಪ ನೀಡಿ ರಫ್ತು ಮಾಡುವ ಕೌಶಲ್ಯ ತೋರಬೇಕಿದೆ.
-ಭಾರತದ ಗಡಿಯಲ್ಲಿ 1 ಲಕ್ಷ ಎನ್‌ಸಿಸಿ ಕೆಡೆಟ್ಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ, ಹೆಣ್ಣುಮಕ್ಕಳಿಗೆ ಆಧ್ಯತೆ.
-ಶತಕಗಳ ಕಾಲ ವಿವಾದದ ಸುಳಿಯಲ್ಲಿದ್ದ ರಾಮ ಮಂದಿರ ವಿಚಾರವು ಶಾಂತಿಪೂರ್ವಕವಾಗಿ ಬಗೆಹರಿದಿದೆ ದೇಶದ ಜನ ನಡೆದುಕೊಂಡ ರೀತಿಯು ಭವಿಷ್ಯದಲ್ಲಿ ಮಾದರಿಯಾಗಿ ದಾಖಲಾಗಿರಲಿದೆ.
-ಜಮ್ಮು ಕಾಶ್ಮೀರದಲ್ಲಿ ಶೀಘ್ರವೇ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳಲಿದ್ದು, ಜನರಿಂದ ಆಯ್ಕೆಯಾದ ಸರ್ಕಾರ ಕಾರ್ಯ ನಿರ್ವಹಿಸಲಿವೆ.
-ಭಾರತದಲ್ಲಿ ಸುಮಾರು 1300 ದ್ವೀಪಗಳನ್ನು ಗುರುತಿಸಲಾಗಿದ್ದು, ಅದರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಲಾಗುತ್ತಿದೆ.
-ಎಲ್‌ಎಸಿಯಿಂದ ಎಲ್‌ಒಸಿವರೆಗೂ ನಮ್ಮೆಡೆಗೆ ದೃಷ್ಟಿ ಹಾಯಿಸಿಲು ಯತ್ನಿಸಿದವರಿಗೆ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ.
-ಇವತ್ತಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ

-ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳ ಪ್ರಯೋಗ ನಡೆಯುತ್ತಿದ್ದು, ವಿಜ್ಞಾನಿಗಳ ಹಸಿರು ನಿಶಾನೆ ಸಿಕ್ಕ ಕೂಡಲೇ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ

-ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಿದ್ದಾರೆ, ಬಡತನದಿಂದಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ
-ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್‌ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ
-ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ
-ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತದೆ ಒಂದೇ ರೀತಿಯ ಶಿಕ್ಷಣ ಪಡೆಯುತ್ತಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+