ಲಕ್ಷಾಂತರ ಜನರ ಎದುರು ಅಣ್ಣಾಮಲೈಗೆ 6 ಬಾರಿ ಬೆನ್ನು ತಟ್ಟಿದ ಪ್ರಧಾನಿ ಮೋದಿ!
ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಭರ್ಜರಿ ಹವಾ ಇದೆ. ನಮ್ಮ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಕುಪ್ಪುಸಾಮಿ ಅವರು ದೊಡ್ಡ ಹೆಸರು ಸಂಪಾದಿಸಿದ್ದರು. ಅದರಲ್ಲೂ ಚಿಕ್ಕಮಗಳೂರು ಭಾಗದಲ್ಲಿ ಇವರ ಹೆಸರಿನ ಬದಲು, 'ಸಿಂಗಂ ಅಣ್ಣಾಮಲೈ' ಅಂತಾನೆ ಜನರು ಕರೆಯುತ್ತಿದ್ದರು. ಈಗ ಇದೇ ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಧಾನಿ ಮೋದಿ ಅವರಿಂದ ಬಹಿರಂಗವಾಗಿ ಬೆನ್ನು ತಟ್ಟಿಸಿಕೊಂಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ತೆರಳಿದ್ದರು. ತಮಿಳುನಾಡಿನ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಬೃಹತ್ ಯಾತ್ರೆ ಇಂದು ಕೊನೆಗೊಂಡಿದೆ. ಹೀಗೆ ರಾಜ್ಯವ್ಯಾಪಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕೆ. ಅಣ್ಣಾಮಲೈ ಅವರಿಗೆ ಪ್ರಧಾನಿ ಮೋದಿ ಅವರು ಸಾಥ್ ನೀಡಿದ್ದರು. ಈ ವೇಳೆ ವೇದಿಕೆ ಮೇಲೆ ಲಕ್ಷಾಂತರ ಜನರ ಎದುರು ಪ್ರಧಾನಿ ಮೋದಿ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ & ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಬೆನ್ನು ತಟ್ಟಿದರು. ಅಲ್ಲದೆ ಕೈಹಿಡಿದು ಅಣ್ಣಾಮಲೈ ಕಾರ್ಯಕ್ಕಾಗಿ ಭೇಷ್ ಎನ್ನುವಂತೆ ಕುಳಿತರು. ಆ ವಿಡಿಯೋ ಈಗ ವೈರಲ್ ಆಗುತ್ತಿದ್ದು, ವಿಡಿಯೋ ನೋಡಲು ಮುಂದೆ ಓದಿ.

ಕೆ. ಅಣ್ಣಾಮಲೈ ಮುಂದಿನ ಸಿಎಂ?
ಬಿಜೆಪಿ ಈಗಾಗಲೇ ಇಡೀ ದೇಶದಲ್ಲಿ ತನ್ನ ಹವಾ ಇಟ್ಟಿದೆ, ಆದರೆ ದಕ್ಷಿಣ ಭಾರತ ಬಿಜೆಪಿಗೆ ಇನ್ನೂ ಸಂಪೂರ್ಣ ಒಲಿದು ಬಂದಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಪ್ರಮುಖ ರಾಜ್ಯವಾಗಿ ತಮಿಳುನಾಡಿನಲ್ಲಿ ಗೆಲುವು ದಾಖಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದರಲ್ಲೂ ಕೆ. ಅಣ್ಣಾಮಲೈ ಅವರು ಈಗಾಗಲೇ ತಮಿಳುನಾಡಿನ ಪೂರ್ತಿ ಬೃಹತ್ ಯಾತ್ರೆ ಮಾಡಿ, ಈಗಿನ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಮಯದಲ್ಲಿ ಯಾತ್ರೆ ಕೊನೇ ಹಂತ ತಲುಪಿದಾಗ ಖುದ್ದು ಪ್ರಧಾನಿ ಮೋದಿ ಅವರೇ ಆಗಮಿಸಿ ಸಂಚಲನ ಸೃಷ್ಟಿಸಿದ್ದಾರೆ. ಅಲ್ಲದೆ ಅಣ್ಣಾಮಲೈ ಅವರ ಕಾರ್ಯಕ್ಕೆ ಬೆನ್ನುತಟ್ಟಿದ್ದಾರೆ.
ಡಿಎಂಕೆ ಸರ್ಕಾರದ ವಿರುದ್ಧ ಆರೋಪ
ಈ ವೇಳೆ ಪ್ರಧಾನಿ ಮೋದಿ ಅವರು 'ಇಂಡಿಯಾ' ಒಕ್ಕೂಟದ ವಿರುದ್ಧ ವಾಗ್ದಾಳಿಯ ನಡೆಸಿ ಬೇಸರ ಹೊರಹಾಕಿದರು 'ಇಂಡಿಯಾ ಬಣ ಸೋಲು ಒಪ್ಪಿಕೊಂಡಿದೆ ಆದ್ರೂ ತಮಿಳುನಾಡು ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. 10 ವರ್ಷದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಹಿಂದೆಂದಿಗಿಂತ ಹೆಚ್ಚು ಅನುದಾನ ನೀಡಿದೆ. ಸಬ್ ಕಾ ಸಾಥ್ - ಸಬ್ ಕಾ ವಿಕಾಸ್ ಅಡಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಗಮನಹರಿಸಿದೆ.' ಎಂದಿದ್ದಾರೆ ಪ್ರಧಾನಿ ಮೋದಿ. ಈ ಮೂಲಕ, ಇದೀಗ ತಮಿಳುನಾಡು ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
I can watch this endlessly 👌#VendumMeendumModi pic.twitter.com/UZ9VGWAyOd
— C T Ravi 🇮🇳 ಸಿ ಟಿ ರವಿ (@CTRavi_BJP) February 27, 2024
ಎಂಜಿಆರ್, ಜಯಲಲಿತಾಗೆ ನಮನ
ಹಾಗೇ ಇದೇ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಪ್ರಯೋಗ ಮಾಡಿದ ಪ್ರಧಾನಿ ಮೋದಿ ಅವರು, 'ಎಂಜಿಆರ್ ಅವರ ನಂತರ ಈ ರಾಜ್ಯಕ್ಕಾಗಿ ತಮ್ಮನ್ನು ಮುಡಿಪಾಗಿ ಇಟ್ಟಿದ್ದವರು ಎಂದರೆ 'ಅಮ್ಮ' ಜಯಲಲಿತಾ. ಜನರ ಕಲ್ಯಾಣಕ್ಕಾಗಿ ಅವರು ಇಡೀ ಜೀವನವೇ ಸವೆಸಿದ್ದಾರೆ.' ಎಂದರು ಪ್ರಧಾನಿ ಮೋದಿ.

ಈ ಮೂಲಕವಾಗಿ ತಮಿಳುನಾಡಿನಲ್ಲಿ ಈಗ ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷಕ್ಕೆ ಗುದ್ದು ಕೊಟ್ಟರು ಪ್ರಧಾನಿ ಮೋದಿ. ಹಾಗೇ ಅಣ್ಣಾಮಲೈ ಅವರ ಕಾರ್ಯಕ್ಕೆ ಕೂಡ ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಸಿಗುತ್ತಿದೆ. ಹೀಗಾಗಿ ಮುಂದೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಅಣ್ಣಾಮಲೈ ಅವರಿಗೆ ಸಿಎಂ ಪಟ್ಟಾ ಗ್ಯಾರಂಟಿನಾ? ಅನ್ನೋ ಚರ್ಚೆಗಳು ಈಗ ಹುಟ್ಟಿಕೊಂಡಿವೆ.












Click it and Unblock the Notifications