ಇಂದು ಇಡೀ ಭಾರತ ಮೈ ಭೀ ಚೌಕಿದಾರ್ ಎನ್ನುತ್ತಿದೆ : ಮೋದಿ

ಬೆಂಗಳೂರು, ಮಾರ್ಚ್ 20 : 'ಮೈ ಭೀ ಚೌಕಿದಾರ್' ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಸಿಬ್ಬಂದಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳು ಮೇ ಭೀ ಚೌಕಿದಾರ್ ಅಭಿಯಾನವನ್ನು ಲೇವಡಿ ಮಾಡುತ್ತಿವೆ.

ಬುಧವಾರ ಸಂಜೆ ನರೇಂದ್ರ ಮೋದಿ ಅವರು ದೇಶದ ಭದ್ರತಾ ಸಿಬ್ಭಂದಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. 'ನಾಮ್ ಧಾರ್‌ಗಳು ಕಾಮ್‌ ಧಾರ್‌ಗಳಿಗೆ ಅಪಮಾನ ಮಾಡುತ್ತಿದ್ದಾರೆ' ಎಂದು ಮೋದಿ ಸಂವಾದದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಾದ್ಯಂತ ಸುಮಾರು 25 ಲಕ್ಷ ಭದ್ರತಾ ಸಿಬ್ಬಂದಿಗಳು ಪ್ರಧಾನ ಮಂತ್ರಿಗಳ ಜೊತೆಗಿನ ರೆಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

PM Narendra Modi interaction with security guards highlights

ಸಂವಾದದ ಮುಖ್ಯಾಂಶಗಳು

* ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಕೆಲವು ತಿಂಗಳುಗಳಿಂದ ಚೌಕಿದಾರರ ವಿರುದ್ಧ ಕೆಲವರು ಅಭಿಯಾನ ನಡೆಸುತ್ತಿದ್ದಾರೆ. ನಿಮ್ಮನ್ನು ಅಪಮಾನಿಸಲು ಅವರು ಬಳಸುತ್ತಿರುವ ಭಾಷೆಯನ್ನು ಗಮನಿಸಿ ಎಂದರು.

* ಕೆಲವು ದಿನಗಳಿಂದ ನೀವು ಗಮನಿಸಿರಬಹುದು. ಟಿವಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಚರ್ಚೆ ನಡೆಯುತ್ತಿದೆ. ಇಂದು ಇಡೀ ಭಾರತ 'ಮೈ ಭೀ ಚೌಕಿದಾರ್' ಎಂದು ಹೇಳುತ್ತಿದೆ.

* ಪ್ರಪಂಚದ ಹಲವು ಭಾಷೆಗಳಲ್ಲಿ ಚೌಕಿದಾರ್ ಪದವನ್ನು ಅರ್ಥಮಾಡಿಕೊಳ್ಳಬಹುದು. ಅವರು ಈ ಪದವನ್ನು ತಮ್ಮ ಶಬ್ದಕೋಶದಲ್ಲಿ ಸೇರಿಸಿಕೊಳ್ಳಲಿ.

* ಯಾರಾದರೂ ನಮ್ಮನ್ನು ಚೌಕಿದಾರ್ ಎಂದು ಕರೆದರೆ ನಾವು ಗಾಬರಿಗೊಳ್ಳುವ ಅಗತ್ಯವಿಲ್ಲ. ನಮ್ಮ ಆತ್ಮಗೌರವವನ್ನು ನಾವು ಉಳಿಸಿಕೊಳ್ಳೋಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+