• search

ಸಿಕ್ಕಿಂನ ಮೊದಲ, ಭಾರತದ ನೂರನೇ ವಿಮಾನ ನಿಲ್ದಾಣ ಪ್ರಧಾನಿ ಲೋಕಾರ್ಪಣೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಪಾಕ್ಯೊಂಗ್ (ಸಿಕ್ಕಿಂ), ಸೆಪ್ಟೆಂಬರ್ 24: ಭಾರತದ ವಿಮಾನ ಯಾನ ಭೂಪಟದಲ್ಲಿ ಸಿಕ್ಕಿಂಗೂ ಸ್ಥಾನ ಸಿಕ್ಕಂತಾಗಿದೆ. ಈ ವರೆಗೆ ದೇಶದ ಸಿಕ್ಕಿಂನಲ್ಲಿ ಮಾತ್ರ ವಿಮಾನ ನಿಲ್ದಾಣ ಇರಲಿಲ್ಲ. ಅಲ್ಲಿಗೆ ಬಹಳ ಹತ್ತಿರದ ವಿಮಾನ ನಿಲ್ದಾಣವು ನೂರಿಪ್ಪತ್ತೈದು ಕಿಲೋಮೀಟರ್ ದೂರದ ಪಶ್ಚಿಮ ಬಂಗಾಲದ ಬಾಗ್ದೋಗ್ರದಲ್ಲಿತ್ತು.

  ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಗೆ ಮೂವತ್ತು ಕಿ.ಮೀ. ದೂರದಲ್ಲಿರುವ ಪಾಕ್ಯೊಂಗ್ ವಿಮಾನ ನಿಲ್ದಾಣವನ್ನು ಸೋಮವಾರ (ಸೆಪ್ಟೆಂಬರ್ 24) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಹತ್ತು ವರ್ಷಗಳ ಹಿಂದೆ ವಿಮಾನ ನಿಲ್ದಾಣ ಆರಂಭದ ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿತ್ತು. 990 ಎಕರೆ ವ್ಯಾಪ್ತಿಯಲ್ಲಿ ಈ ವಿಮಾನ ನಿಲ್ದಾಣ ಇದೆ.

  ಸಚಿತ್ರ ವರದಿ : 10 ಕೋಟಿ ಬಡವರಿಗೆ ಆಶಾಕಿರಣವಾದ 'ಮೋದಿ ಕೇರ್'

  ಸಮುದ್ರ ಮಟ್ಟಕ್ಕಿಂತ 4,500 ಅಡಿ ಎತ್ತರದಲ್ಲಿ, ಬಹಳ ಸುಂದರವಾಗಿ ನಿರ್ಮಾಣ ಆಗಿರುವ ಈ ವಿಮಾನ ನಿಲ್ದಾಣವು ಎಂಜಿನಿಯರಿಂಗ್ ತಂತ್ರಜ್ಞಾನದ ಸಮರ್ಥ ಬಳಕೆಗೆ ಒಂದು ಉದಾಹರಣೆ ಎಂದು ಶ್ಲಾಘಿಸಲಾಗುತ್ತಿದೆ. ಈ ವಿಮಾನ ನಿಲ್ದಾಣವು ಅಕ್ಟೋಬರ್ ನಿಂದ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ. ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆಯು ಅಕ್ಟೋಬರ್ 4ರಂದು ಕೋಲ್ಕತ್ತಾದಿಂದ ಪಾಕ್ಯೊಂಗ್ ಗೆ ಮೊದಲ ವಿಮಾನ ಹಾರಾಟ ನಡೆಸಲಿದೆ.

  PM Narendra Modi inaugurates Sikkim’s Pakyong airport

  ಸದ್ಯಕ್ಕೆ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಗೆ ಹೋಗಬೇಕು ಅಂದರೆ ಪಶ್ಚಿಮ ಬಂಗಾಲದ ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ತೆರಳಬೇಕು. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ 'ಉಡಾನ್' ಯೋಜನೆಗೆ ಪಾಕ್ಯೊಂಗ್ ವಿಮಾನ ನಿಲ್ದಾಣವನ್ನು ಸೇರಿಸಲಾಗಿದೆ. ಈ ವಿಮಾನ ನಿಲ್ದಾಣದ ಮೂಲಕ ಸಿಕ್ಕಿಂನ ಪ್ರವಾಸೋದ್ಯಮ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಮೋದಿಯ ಬುಲೆಟ್‌ ಟ್ರೇನ್‌ಗೆ ಕೆಂಪು ಬಾವುಟ ತೋರಿಸಿದ ರೈತರು

  ಮಾರ್ಚ್ 5ರಂದು ಭಾರತೀಯ ವಾಯು ಸೇನೆಯ ಡಾರ್ನಿಯರ್ 228 ನಿಂದ ಈ ವಿಮಾನ ನಿಲ್ದಾಣದಿಂದ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಯಿತು. ಮಾರ್ಚ್ 10ರಂದು ಸ್ಪೈಸ್ ಜೆಟ್ ನಿಂದ 78 ಸೀಟು ಸಾಮರ್ಥ್ಯದ ಬೊಂಬಾರ್ಡಿಯರ್ Q400 ವಿಮಾನವನ್ನು ಕೋಲ್ಕತ್ತಾದಿಂದ ಪಾಕ್ಯೊಂಗ್ ಗೆ ಹಾರಾಟ ನಡೆಸಲಾಯಿತು.

  PM Narendra Modi inaugurates Sikkim’s Pakyong airport

  ಅಂದಹಾಗೆ, ಪಾಕ್ಯೊಂಗ್ ಭಾರತದ 100ನೇ ಕಾರ್ಯನಿರತ ವಿಮಾನ ನಿಲ್ದಾಣ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Pakyong airport, about 30km from the state capital Gangtok has put Sikkim on India’s aviation map. Until now, Sikkim was the only state in the country which did not have an airport, the nearest one being in West Bengal’s Bagdogra, 125 km away.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more