ಪ್ರತಿ ಮನೆಗೂ ವಿದ್ಯುತ್ ಸಂಪರ್ಕ, ಸೌಭಾಗ್ಯ ಯೋಜನೆಯ ಗುರಿ
ನವದೆಹಲಿ, ಸೆಪ್ಟೆಂಬರ್ 25 : ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)' ಘೋಷಣೆ ಮಾಡಿದರು. ದೇಶದ ಪ್ರತಿ ಮನೆಗೂ ವಿದ್ಯುತ್ ಸೌಲಭ್ಯ ಕಲ್ಪಿಸುವುದು ಯೋಜನೆಯ ಗುರಿಯಾಗಿದೆ.
ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ಉರ್ಜಾ ಭವನವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 'ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)' ಘೋಷಣೆ ಮಾಡಿದರು.

ಯೋಜನೆ ಅನ್ವಯ ಪ್ರತಿಯೊಂದು ಮನೆಗೆ 5 ಎಲ್ಇಡಿ ಬಲ್ಪ್, ಫ್ಯಾನು, ಬ್ಯಾಟರಿ ವಿತರಣೆ ಮಾಡಲಾಗುತ್ತದೆ. 2019ರ ಮಾರ್ಚ್ 31ರೊಳಗೆ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
Will launch Saubhagya Yojana & inaugurate Deendayal Urja Bhawan. Programme starts at 6:30 PM. Watch on your phones. https://t.co/TYuxNNJfIf pic.twitter.com/hViDMYva5P
— Narendra Modi (@narendramodi) September 25, 2017
ಸೌಭಾಗ್ಯ 16,320ರೂ. ಮೊತ್ತದ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನ ನೀಡಲಿದೆ. ರಾಜ್ಯಗಳು ಶೇ 30ರಷ್ಟು ಅನುದಾನ ನೀಡಬೇಕು. ಸಾಲದ ಮೂಲಕ ಉಳಿದ ಶೇ 10ರಷ್ಟು ವೆಚ್ಚವನ್ನು ಭರಿಸಲಾಗುತ್ತದೆ.
2011ರ ಜನಗಣತಿ ಪ್ರಕಾರ ಈ ಯೋಜನೆಗೆ ಅರ್ಹರು ಯಾರು? ಎಂದು ಗುರುತಿಸಲಾಗುತ್ತದೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 500 ರೂ.ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
Rs. 16,000 crore will be spent to bring a monumental change in the lives of the poor: PM @narendramodi at the launch of #Saubhagya Yojana
— PMO India (@PMOIndia) September 25, 2017
ಎಪಿಎಲ್ ಕುಟುಂಬಗಳು ವಿದ್ಯುತ್ ಸಂಪರ್ಕ ಒದಗಿಸಲು ಪಾವತಿ ಮಾಡಬೇಕಾದ ಹಣವನ್ನು 10 ಕಂತುಗಳ ವಿದ್ಯುತ್ ಬಿಲ್‌ನಲ್ಲಿ ಪಡೆಯಲಾಗುತ್ತದೆ. ಮನೆಯಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸುವ ಅರ್ಜಿಯನ್ನು ವಿತರಣೆ ಮಾಡಲಾಗುತ್ತದೆ.
ಗ್ರಾಮ ಪಂಚಾಯಿತಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಅರ್ಜಿಗಳನ್ನು ವಾಪಸ್ ಪಡೆಯವುದು, ಬಿಲ್ ನೀಡುವುದು, ಬಿಲ್ ಪಾವತಿ ಮುಂತಾದ ಕೆಲಸಗಳಿಗೆ ಸಹಾಯ ಮಾಡಲಿವೆ.
ಮೋದಿ ಮಾಡಿದ ಭಾಷಣದ ಮುಖ್ಯಾಂಶಗಳು
* ಬಡವರ ಉದ್ಧಾರ ನಮ್ಮ ಸರ್ಕಾರದ ಧ್ಯೇಯ. ಯಾವ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲವೋ ಆ ಕುಟುಂಬಕ್ಕೆ ವಿದ್ಯುತ್ ನೀಡುವುದು ನಮ್ಮ ಉದ್ದೇಶ
* ಈ ಯೋಜನೆಯನ್ನಯ ಜಾರಿಗೆ ತರುವ ಮೂಲಕ ನಾವು 16000 ಕೋಟಿ ಹಣವನ್ನು ಬಡವರ ಅಭಿವೃದ್ಧಿಗಾಗಿ ನಾವು ವೆಚ್ಚ ಮಾಡುತ್ತಿದ್ದೇವೆ.
* ಮೂರು ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳಿಂದಾಗಿ ಈ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ












Click it and Unblock the Notifications