ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಖರ್ಚು ವೆಚ್ಚ ಲೆಕ್ಕ ಬಹಿರಂಗ

Recommended Video

      2014ರಿಂದ 2018ರವರೆಗೆ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ತಗುಲಿದ ವೆಚ್ಚ? | Oneindia Kannada

      ನವದೆಹಲಿ, ಜುಲೈ 20: ನರೇಂದ್ರ ಮೋದಿ ಅವರು 2014ರ ಜೂನ್​ನಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನಿಯಾಗಿ ಸುಮಾರು 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರಧಾನಿಯವರ ಈ ವಿದೇಶ ಪ್ರವಾಸಗಳಿಗೆ 1,484 ಕೋಟಿ ರೂ. ವೆಚ್ಚವಾಗಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. ಮುಂಗಾರು ಅಧಿವೇಶನದ ಅವಧಿಯಲ್ಲಿ ಈ ಪ್ರಶ್ನೆ ಎದುರಾಗಿದ್ದು ಹಾಗೂ ಉತ್ತರ ಸಿಕ್ಕಿರುವುದು ವಿಶೇಷ.

      ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಸುಮಾರು 1022.42 ಕೋಟಿ ರೂ. ಪ್ರಧಾನಿ ಪ್ರಯಾಣಿಸುವ ವಿಮಾನಗಳ ನಿರ್ವಹಣೆಗೆ ಖರ್ಚಾಗಿದೆ. ಅಲ್ಲದೆ 387.26 ಕೋಟಿ ರೂ. 2014ರ ಜೂ.15ರಿಂದ 2018ರ ಜೂನ್​ 10ರವರೆಗೆ ವಿದೇಶ ಪ್ರವಾಸಕ್ಕೆ ಬಳಸಿದ ಇತರ ವಿಮಾನಗಳ ವೆಚ್ಚಕ್ಕೆ ತಗುಲಿದೆ. ಹಾಗೆಯೇ ಹಾಟ್​ಲೈನ್​ನ ಒಟ್ಟೂ ವೆಚ್ಚ 9.12 ಕೋಟಿ ರೂ.ಗಳಾಗಿದೆ.

      ಅಲ್ಲದೆ ಸಚಿವ ವಿ.ಕೆ.ಸಿಂಗ್ ನೀಡಿದ ಮಾಹಿತಿಯಲ್ಲಿ 2017-18 ಹಾಗೂ 2018-19ರ ಅವಧಿಯಲ್ಲಿ ಹಾಟ್​ಲೈನ್​ಗೆ​ ವೆಚ್ಚವಾದ ಹಣ ಹಾಗೂ 2018-19ನೇ ಸಾಲಿನಲ್ಲಿ ಇತರ (ಬಾಡಿಗೆ) ವಿಮಾನಗಳಿಗೆ ತಗುಲಿದ ವೆಚ್ಚದ ಬಗ್ಗೆ ವಿವರವಿಲ್ಲ.

      PM Modis Foreign Travel Since 2014 Cost Rs. 1,484 Crore: Centre

      ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸುಮಾರು 42 ಪ್ರವಾಸಗಳ ಮೂಲಕ 84 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂಬುದು ಮಾಹಿತಿಯಲ್ಲಿ ಬಹಿರಂಗಗೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+