ವಾಜಪೇಯಿ ನಿವಾಸಕ್ಕೆ ತೆರಳಿ ಶುಭಹಾರೈಸಿದ ಮೋದಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 25: ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ಸೋಮವಾರ ಕ್ರಿಸ್ಮಸ್ ದಿನದಂದು 93ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಶುಭಹಾರೈಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಪರಿಚಯ

ನವದೆಹಲಿಯ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಶುಭ ಹಾರೈಸಿ ಮೋದಿ ಅವರು ಕೆಲ ಕಾಲ ವಾಜಪೇಯಿ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ 2014ರಲ್ಲಿ ವಾಜಪೇಯಿ ಹಾಗೂ ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತರತ್ನ ಘೋಷಿಸಿದ್ದರು. ವಾಜಪೇಯಿ ಅವರ ಹುಟ್ಟುಹಬ್ಬ ದಿನವನ್ನು 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತದೆ.

PM Modi wishes Atal Bihari Vajpayee on his birthday

ಸಜ್ಜನ ರಾಜಕಾರಣಿ, ಅಜಾತಶತ್ರು ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಬೇಕು ಎಂಬುದು ಮೋದಿ ಅವರ ಬಹು ದಿನಗಳ ಕನಸಾಗಿತ್ತು.

1996ರಲ್ಲಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ 13 ದಿನಗಳ ಅಧಿಕಾರ ನಡೆಸಿತ್ತು. ವಾಜಪೇಯಿ ಅವರು ದೇಶದ 11ನೇ ಪ್ರಧಾನಿಯಾದರು. ನಂತರ 1998 ರಿಂದ 2004ರ ತನಕ ವಾಜಪೇಯಿ ಅವರು ಪೂರ್ಣ ಅಧಿಕಾರ ಅವಧಿ ಕಂಡ ಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಎನಿಸಿದರು.

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Modi Narendra Modi has wished former PM Atal Bihari Vajpayee on his birthday. “Birthday greetings to our beloved Atal Ji. His phenomenal as well as visionary leadership made India more developed and further raised our prestige at the world stage. I pray for his good health”, the Prime Minister said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ