ಪ್ರಧಾನಿ ಭೇಟಿಗೂ ಮುನ್ನ ಮಧ್ಯಪ್ರದೇಶದಾದ್ಯಂತ ಕಾಣಿಸಿಕೊಂಡ 'ಫೋನ್ ಪೇ ಮಾಮಾ' ಪೋಸ್ಟರ್: 'ಪೇಸಿಎಂ' ಕ್ಯಾಂಪೇನ್ ಸ್ಪೂರ್ತಿ
ಭೋಪಾಲ್, ಜೂನ್ 26: ಕರ್ನಾಟಕದಲ್ಲಿ ಯಶಸ್ವಿ ಭ್ರಷ್ಟಾಚಾರ ವಿರೋಧಿ ಅಭಿಯಾನದಿಂದ ಕಾಂಗ್ರೆಸ್ ಲಾಭ ಮಾಡಿರುವುದು ನಮಗೆಲ್ಲ ತಿಳಿದೇ ಇದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ 'ಪೇಸಿಎಂ' ಕ್ಯಾಂಪನ್ ಬಿಜೆಪಿಗೆ ಡ್ಯಾಮೇಜ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮಧ್ಯಪ್ರದೇಶ ಕಾಂಗ್ರೆಸ್ ಸ್ಫೂರ್ತಿ ಪಡೆದುಕೊಂಡಿದ್ದು, ರಾಜ್ಯದಲ್ಲಿ ಇದೇ ರೀತಿಯ ಅಭಿಯಾನಕ್ಕೆ ಚಾಲನೆ ನೀಡಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಗುರಿಯಾಗಿಸಿಕೊಂಡು ಅಭಿಯಾನ ನಡೆಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಗಂಭೀರವಾದ ಕಮೀಷನ್ ಆರೋಪಗಳನ್ನು ಮಾಡಲಾಗಿತ್ತು.

ಇದರ ಪರಿಣಾಮಕಾರಿ 'PayCM' ಮತ್ತು '40 ಪರ್ಸೆಂಟ್ ಸರ್ಕಾರ'ದಂತಹ ಅಭಿಯಾನಗಳನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತು. ಈ ಅಭಿಯಾನಗಳ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕುವಲ್ಲಿ ಯಶಸ್ವಿಯಾಯಿತು.
ಇದೇ ರೀತಿಯ ತಂತ್ರಗಳನ್ನು ಬಳಸಿಕೊಳ್ಳಲು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಮುಂದಾಗಿದೆ. ಬಿಜೆಪಿ ವಿರುದ್ಧ 50 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.
ग्वालियर की सड़कों पर शिवराज का भ्रष्टाचार
— MP Congress (@INCMP) June 26, 2023
50% लाओ, फ़ोन पे काम कराओ
मध्यप्रदेश की जनता जानती है,
50% कमीशनखोरों को पहचानती है। pic.twitter.com/JXtZY60Dwc
ಮಧ್ಯಪ್ರದೇಶದ ಪ್ರಮುಖ ನಗರಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವ ಚಿತ್ರಗಳನ್ನು ಒಳಗೊಂಡಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದರೊಂದಿಗೆ ಕ್ಯೂಆರ್ ಕೋಡ್ ನೀಡಲಾಗಿದೆ. ಅದರಲ್ಲಿ 'ಫೋನ್ ಪೇ ಮಾಮಾ' ಎಂದು ಬರೆಯಲಾಗಿದೆ. ಹೆಚ್ಚುವರಿಯಾಗಿ, ಪಕ್ಷವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಕ್ರಿಯವಾಗಿ ಪ್ರಚಾರ ಮಾಡುತ್ತಿದೆ.

ಸ್ಪಷ್ಟನೆ ನೀಡಿದ ಫೋನ್ ಪೇ ಕಂಪನಿ
ಮಧ್ಯಪ್ರದೇಶದ '50% ಕಮಿಷನ್ ಸರ್ಕಾರ' ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳೊಂದಿಗೆ PhonePe ಸಂಬಂಧ ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಕಂಪನಿ ಹೇಳಿದೆ. ಕಂಪನಿಯು ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳೊಂದಿಗೆ ರಾಜಕೀಯ ಸಂಬಂಧವನ್ನು ಕಂಪನಿ ಹೊಂದಿಲ್ಲ ಎಂದು PhonePe ವಕ್ತಾರರು ತಿಳಿಸಿದ್ದಾರೆ.
PhonePe objects to the unauthorized usage of its brand logo, by any third party, be it political or non-political. We are not associated with any political campaign or party.
— PhonePe (@PhonePe) June 26, 2023
ಉಚಿತ ಯೋಜನೆ ಘೋಷಣೆ
ಕರ್ನಾಟಕದಂತೆಯೇ ಮಧ್ಯ ಪ್ರದೇಶದಲ್ಲಿ ಉಚಿತ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಜೂನ್ 12 ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮಧ್ಯಪ್ರದೇಶ ಚುನಾವಣೆಗೆ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಈ ವೇಳೆ, ಐದು ಪ್ರಮುಖ ಚುನಾವಣಾ ಭರವಸೆಗಳನ್ನು ಅಧಿಕೃತವಾಗಿ ಘೋಷಿಸಿದರು. ಮಾಸಿಕ 1,500 ರೂಪಾಯಿ ಆರ್ಥಿಕ ಯೋಜನೆ, 500 ರೂಪಾಯಿ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್, ಹಳೆಯ ಪಿಂಚಣಿ ಯೋಜನೆ ಪುನಶ್ಚೇತನ ಮತ್ತು 100 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೇರಿದಂತೆ ಐದು ಭರವಸೆಗಳನ್ನು ನೀಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶದಲ್ಲೂ ಗೆಲುವನ್ನು ಸಾಧಿಸುವ ಉನ್ಮಾದದಲ್ಲಿದೆ. ಅಲ್ಲಿನ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.












Click it and Unblock the Notifications