ಇಂಧನ ಮಿತ ಬಳಕೆ, ಚಿನ್ನ ಖರೀದಿಸದಂತೆ ನರೇಂದ್ರ ಮೋದಿ ಕರೆ: ಇದರ ಹಿಂದಿನ ಉದ್ದೇಶವೇನು?

ಹೈದರಾಬಾದ್: ಭಾರತೀಯರಿಗೆ ಮುಂದಿನ ಒಂದು ವರ್ಷ ಕಷ್ಟಕರವಾಗಿರಲಿದೆ. ಈ ಸಮಯದಲ್ಲಿ ನಾವು ಒಗ್ಗಟ್ಟಿನಿಂದ ಜವಾಬ್ದಾರಿ ಮತ್ತು ಸ್ವಾವಲಂಬನೆಯಿಂದ ಇದ್ದಲ್ಲಿ ದೇಶ ಇನ್ನಷ್ಟು ಬಲಿಷ್ಟವಾಗಲಿದೆ. ಅದಕ್ಕಾಗಿ ಕಡಿಮೆ ಇಂಧನ ಬಳಕೆ, ಮನೆಯಿಂದಲೇ ಕೆಲಸ ಮಾಡುವುದು, ಸ್ವದೇಶಿ ವಸ್ತುಗಳ ಬಳಸುವ ಮೂಲಕ ವಿದೇಶಿ ವಸ್ತುಗಳ ಅವಲಂಬನೆ ತಪ್ಪಿಸುವುದು ಅನಿವಾರ್ಯವೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿನಂತಿಸಿಕೊಂಡಿದ್ದಾರೆ.

ಭಾನುವಾರ ಹೈದರಾಬಾದ್‌ಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಅವರು ಈ ಗಂಭೀರ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ದೇಶವು ವಿದೇಶಿ ವಿನಿಮಯವನ್ನು ಉಳಿಸಲು ಮನೆಯಿಂದ ಕೆಲಸ ಮಾಡುವ ಪದ್ಧತಿಗೆ (Work Form Home)ಗೆ ಮರಳಬೇಕಿದೆ. ಕಾರಣ ಪಶ್ಚಿಮ ಏಷ್ಯಾ ರಾಷ್ಟ್ರಗಳ ಯುದ್ಧಗಳು, ಅನಿಶ್ಚಿತತೆಯು ಇಂಧನ ಪೂರೈಕೆ ಸರಪಳಿ ಮೇಲೆ ಪ್ರಭಾವ ಉಂಟು ಮಾಡಿದೆ. ಅತೀವ ಇಂಧನ ಬಳಕೆಯನ್ನು ತಗ್ಗಿಸಬೇಕು. ಮದುವೆ ಇನ್ನಿತರ ಸಮಾರಂಭಗಳಿಗೆಂದು ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸದಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು.

PM Modi

ಇಂಧನ, ರಸಗೊಬ್ಬರ ಪೂರೈಕೆ ಸರಪಳಿ ಮೇಲೆ ಒತ್ತಡ

ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಪೆಟ್ರೋಲ್ ಮತ್ತು ರಸಗೊಬ್ಬರಗಳ ದರಗಳು ಅವ್ಯಾಹತವಾಗಿ ಏರಿಕೆ ಆಗಿದೆ. ಇವುಗಳ ಪೂರೈಕೆ ಸರಪಳಿಯ ಮೇಲೆ ಒತ್ತಡ ಉಂಟಾಗಿದೆ. ತಾತ್ಕಾಲಿಕವಾಗಿ ಬಿಕ್ಕಟ್ಟು ಎದುರಾಗಿದೆ. ಅದನ್ನು ನಿವಾರಿಸಲು ವಿವಿಧ ಸಂದರ್ಭಗಳನ್ನು ಎದುರಿಸಬೇಕಾಗಿದೆ. ಸಮಸ್ಯೆ ಪರಿಹಾರಾರ್ಥವಾಗಿದೆ ಇಂಧನ ಬಳಕೆ, ವಿದೇಶಿ ವಿಸ್ತುಗಳ ಖರೀದಿ, ಚಿನ್ನ ಖರೀದಿ ಮಾಡದಂತೆ ನಮೋ ಸಲಹೆ ನೀಡಿದ್ದಾರೆ.

Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್, ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತ
Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್, ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತ

ಐದು ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ 'ನಾವು ಮನೆಯಿಂದ ಕೆಲಸ, ಆನ್‌ಲೈನ್ ಮೂಲಕ ಸಭೆ, ವೀಡಿಯೋ ಕಾನ್ಫ್‌ರೆನ್ಸ್ ಹೆಚ್ಚಾಗಿ ಅಳವಡಿಸಿಕೊಂಡಿದ್ದೆವು. ಅವುಗಳಿಗೆ ನಾವು ಒಗ್ಗಿಕೊಂಡಿದ್ದೆವು. ಇಂದು ಮರಳಿ ಆ ಪದ್ಧತಿಗಳನ್ನು ಅನುರಿಸುವ ಅಗತ್ಯವಿದೆ. ದೇಶದ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಡು ಅವುಗಳಿಗೆ ಆದ್ಯತೆ ನೀಡಬೇಕೆಂದು ಅವರು ಹೇಳಿದರು.

ಚಿನ್ನ ಆಮದಿಗೆ ಅಧಿಕ ವಿದೇಶಿ ವೆಚ್ಚ

ಒಂದು ವರ್ಷದವರೆಗೆ ಮದುವೆಗಳಿಗೆ ಚಿನ್ನ ಖರೀದಿಸಬೇಡಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ. ಏಕೆಂದರೆ ಚಿನ್ನದ ಆಮದು ಭಾರಿ ವಿದೇಶಿ ವಿನಿಮಯವನ್ನು ವೆಚ್ಚ ಮಾಡುತ್ತದೆ. ಇರಾನ್ ಯುದ್ಧದ ನಂತರ ಕಚ್ಚಾ ಮತ್ತು ಅನಿಲ ಆಮದು ವೆಚ್ಚವು ಹಲವು ಪಟ್ಟು ಹೆಚ್ಚಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಲ್ಲಿದೆ ಎಂದು ಅವರು ವಿವರಿಸಿದರು.

ಭಾರತವು ಕಚ್ಚಾ ಮತ್ತು ಅನಿಲ ಆಮದು ಮಾಡಿಕೊಳ್ಳಲು ಹೆಚ್ಚಿನ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿದೆ. ಈ ಸನ್ನಿವೇಶದಲ್ಲಿ ಚಿನ್ನದ ಆಮದುಗಳ ಮೇಲಿನ ಖರ್ಚು ವಿದೇಶಿ ವಿನಿಮಯ ಮೀಸಲುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಭಾರತೀಯ ಇನ್ನೂ ಕೆಲವು ತಿಂಗಳ ಕಾಲ ಚಿನ್ನ ಖರೀದಿಸಬಾರದು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಮಿತಿಯೊಳಗೆ ಬಳಸುವುದು ಒಳಿತು. ಜೊತೆಗೆ ಆದಷ್ಟು ಮನೆಯಿಂದ ಕೆಲಸ ಮಾಡಲು ಆದ್ಯತೆ ನೀಡುವುದು ಬಹಳ ಮುಖ್ಯವೆಂದು ಅವರು ತಿಳಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಅವರು ಬೆಂಗಳೂರಿನ ಭೇಟಿ ಸಂದರ್ಭದಲ್ಲಿ ಬಿಜೆಪಿಯಿಂದ ಅಭಿನಂದನೆ ಸ್ವೀಕರಿಸಿದರು. ಜೊತೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+