ಕೇಂದ್ರದ ಯೋಜನೆ, ರೈತರಿಗೂ ಆನ್‌ಲೈನ್ ಮಾರುಕಟ್ಟೆ

Subscribe to Oneindia Kannada

ನವದೆಹಲಿ, ಏಪ್ರಿಲ್, 13: : ಕೇಂದ್ರದ ಎನ್ ಡಿಎ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಆನ್ ಲೈನ್ ಅಡಿಯಲ್ಲಿ ತರಲು ಅಧಿಕಾರಕ್ಕೆ ಬಂದಾಗಿನಿಂದ ಶ್ರಮವಹಿಸುತ್ತಿದೆ. ಇದೀಗ ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಮತ್ತು ಉತ್ತಮ ಮಾರುಕಟ್ಟೆ ಅವಕಾಶ ಒದಗಿಸುವ ಏಕೀಕೃತ ಆನ್‌ಲೈನ್‌ ಕೃಷಿ ಮಾರುಕಟ್ಟೆಗೆ ಏಪ್ರಿಲ್ 14 ರಂದು ಅಧಿಕೃತ ಚಾಲನೆ ದೊರೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರಾಥಮಿಕವಾಗಿ ಈ ಆನ್‌ಲೈನ್‌ ವೇದಿಕೆ ದೇಶದ 585 ಸಗಟು ಮಾರುಕಟ್ಟೆ ಹಾಗೂ ಮಂಡಿಗಳನ್ನು ಒಳಗೊಂಡಿರುತ್ತದೆ. 200 ಕೋಟಿ ರು. ವೆಚ್ಚದ ವ್ಯವಸ್ಥೆ ಆರಂಭಕ್ಕೆ 2015 ರ ಜುಲೈನಲ್ಲಿ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತ್ತು.[ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ ನೇಪಥ್ಯಕ್ಕೆ ಸರಿದದ್ಯಾಕೆ?]

modi

ಸಮತೋಲಿತ ಪ್ರಮಾಣದಲ್ಲಿ ರಸಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆಯುವುದು ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ದೃಷ್ಟಿಯಿಂದ ಜಾರಿಗೆ ತಂದ ಮಣ್ಣಿನ ಫಲವತ್ತತೆ ಸಂರಕ್ಷಣೆ ಕಾರ್ಡ್‌ಗಳನ್ನು 2017ರ ಮಾರ್ಚ್‌ 31ರ ಒಳಗೆ 14 ಕೋಟಿ ರೈತರಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೈತರ ಬೆಳೆಗೆ ಸರಿಯಾದ ಬೆಲೆ ದೊರೆಯಬೇಕು. ದಲ್ಲಾಳಿಗಳ ಕಾಟದಿಂದ ಕೃಷಿ ವ್ಯವಸ್ಥೆ ಮುಕ್ತವಾಗಬೇಕು ಎಂಬ ಕಾರಣದಿಂದ ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime Minister Narendra Modi will launch this week an online national agricultural products market platform that will integrate 585 wholesale markets across India. The launching of e-platform for marketing of agriculture products is being done with the aim to provide more options to farmers to sell their produce and is part of implementation of the roadmap for doubling income of the farmers by 2022.
Please Wait while comments are loading...