SVAMITVA: 5 ಮಿಲಿಯನ್ ಸ್ವಾಮಿತ್ವ ಕಾರ್ಡ್ ವಿತರಣೆ: 2026ಕ್ಕೆ ಕೋಟಿ ಕಾರ್ಡ್ ಗುರಿ..
ನವದೆಹಲಿ, ಡಿಸೆಂಬರ್ 26: ದೇಶದ ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲಿನ ಆಸ್ತಿಗಳ ಮೌಲೀಕರಣ ಹಾಗೂ ಗುರುತಿಸುವಿಕೆಗಾಗಿ ಡ್ರೋನ್ ಆಧಾರಿತ ಸಮೀಕ್ಷೆ ನಡೆಸಿದ್ದ 'ಸ್ವಾಮಿತ್ವ' (SVAMITVA) ಯೋಜನೆ ಭಾಗವಾಗಿ ಪ್ರಾಪರ್ಟಿ ಕಾರ್ಡ್ ವಿತರಣೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ (ಡಿ.25) ಒಟ್ಟು 05 ಮಿಲಿಯನ್ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯ ಗುರಿ, ಉದ್ದೇಶಗಳ ಮಾಹಿತಿ ಇಲ್ಲಿದೆ.
ಗ್ರಾಮೀಣ ಭಾಗದ ಆಸ್ತಿಗಳ ಮೌಲೀಕರಣ ಮಾತ್ರವಲ್ಲದೇ, ಜನರು ತಮ್ಮ ಆಸ್ತಿಯನ್ನು ಸಾಲದ ವಿರುದ್ಧ ಮೇಲಾಧಾರವಾಗಿ ಬಳಕೆ ಅನುಕೂಲವಾಗುವಂತೆ ಈ ಸ್ವಾಮಿತ್ವ ಯೋಜನೆ ಜಾರಿಗೆ ತರಲಾಗಿದೆ. ಅದರಡಿಯಲ್ಲಿಯೇ ಪ್ರಧಾನಮಂತ್ರಿಗಳು ದೇಶದ ಒಟ್ಟು 1.37 ಲಕ್ಷ ಸ್ವಾಮಿತ್ವ ಪ್ರಾಪರ್ಟಿ ಕಾರ್ಡ್‌ಗಳನ್ನು ಅರ್ಹರಿಗೆ ನಾಳೆ ಡಿಸೆಂಬರ್ 27ರಂದು ಶುಕ್ರವಾರ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಿದ್ದಾರೆ.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು (MoPR) ಸರ್ಕಾರ ಗುರಿಯನ್ನು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರವು 2026ರ ಮಾರ್ಚ್ ತಿಂಗಳೊಳಗೆ 21.9 ಮಿಲಿಯನ್ 'ಸ್ವಾಮಿತ್ವ' ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡುವ ಗುರಿ ಹೊಂದಿದೆ. ಯೋಜನೆ ಅನುಷ್ಠಾನದ ಆರಂಭಿಕ ಹಂತದಲ್ಲಿ ಪ್ರಧಾನಿಯವರು 1.37 ಕೋಟಿ ಪ್ರಾಪರ್ಟಿ ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಸಚಿವಾಲಯದ ಯೂನಿಯನ್ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ತಿಳಿಸಿದ್ದಾರೆ.
ಡಿಸೆಂಬರ್ 27 ರಂದು ದೇಶದ ಒಟ್ಟು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50,000 ಗ್ರಾಮಗಳು ಸೇರಿದಂತೆ ಒಟ್ಟು 5.8 ಮಿಲಿಯನ್ ಸ್ವಾಮಿತ್ವ ಕಾರ್ಡ್‌ಗಳು ವಿತರಣೆ ಆಗಲಿವೆ. ಕೇಂದ್ರವು ಇದೇ ಯೋಜನೆಯಡಿ ಈವರೆಗೆ 13.7 ಮಿಲಿಯನ್ ಕಾರ್ಡ್ ವಿತರಣೆ ಮಾಡಿದೆ ಎಂದರು.
ಯೋಜನೆಯ ಉದ್ದೇಶ
ಈ ಸ್ವಾಮಿತ್ವ ಯೋಜನೆಯು 2020ರ ಏಪ್ರಿಲ್ನಲ್ಲಿ ಆರಂಭವಾಯಿತು. ಗ್ರಾಮೀಣ ಭಾಗದ ಆಸ್ತಿಗಳಿಗೆ ಕಂದಾಯ ದಾಖಲೆಗಳಲ್ಲಿ ಹಕ್ಕುಗಳ ದಾಖಲೆಗಳನ್ನು (RoR) ರಚಿಸುವ ಗುರಿ ಹೊಂದಿದೆ. ದೇಶದಲ್ಲಿ ಭೂಮಿ/ಆಸ್ತಿಯ ಮಾಲೀಕತ್ವ ಸ್ಪಷ್ಟವಾಗಿಲ್ಲದ ಕಾರಣ ಈ ಸ್ವಾಮಿತ್ವ ಯೋಜನೆ ಜಾರಿ ಮಾಡಲಾಗಿದೆ.
ಭೂಮಿಯ ಮಾಲೀಕತ್ವ, ಹಕ್ಕು ಸ್ಪಷ್ಟವಾಗಿಲ್ಲದಿದ್ದರೆ ಅಂತಹ ಮಾಲೀಕರಿಗೆ ಸಾಲು ಸಿಗುವುದು ಕಷ್ಟ ಸಾಧ್ಯ ಇದೆ. ಹೀಗಾಗಿ ಹಣಕಾಸು ಸಂಸ್ಥೆಯು ಶೀಘ್ರ ಸಾಲ ಮಂಜೂರಾತಿಗೆ ಅವಕಾಶ ನೀಡಲು ಸಹಕಾರಿಯಾಗುವಂತೆ, ಜನರ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗುವಂತೆ, ಕ್ರೆಡಿಟ್ ಲಿಂಕ್‌ಗಳಿಲ್ಲದೆ ಆಸ್ತಿಯ ಮೌಲೀಕರಣ ಉದ್ದೇಶದಿಂದ ಸಮೀಕ್ಷೆ ಮಾಡಿ ಕಾರ್ಡ್ ವಿತರಿಸಲಾಗುತ್ತಿದೆ.
ಡ್ರೋನ್ ಮತ್ತು ಜಿಐಎಸ್ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ಭೂಮಿಯನ್ನು ಗುರುತಿಸುವ ಯೋಜನೆ ಇದಾಗಿದೆ. ಸುಮಾರು 344,868 ಗ್ರಾಮಗಳನ್ನು ಈ ಯೋಜನೆಯಡಿ ಒಳಗೊಳ್ಳುವ ಗುರಿ ಹೊಂದಿದ್ದೇವೆ. ಸಮೀಕ್ಷೆ ನಡೆಸಲಾಗಿದೆ. ಸದ್ಯ ಯೋಜನೆ ಕಾರ್ಡ್ ವಿತರಣೆ, ಪ್ರಚಾರ ಕಾರ್ಯ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.












Click it and Unblock the Notifications