ಇಸ್ರೋದ ಮತ್ತೊಂದು ಸಾಧನೆ, ನರೇಂದ್ರ ಮೋದಿ ಶ್ಲಾಘನೆ

Subscribe to Oneindia Kannada

ಚೆನ್ನೈ, ಏಪ್ರಿಲ್, 28: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ದಿನಕ್ಕೊಂದು ಸಾಧನೆ ಮಾಡುತ್ತಿದೆ. ಗುರುವಾರ ಸಹ ಅಂಥದ್ದೇ ಒಂದು ಮೈಲಿಗಲ್ಲು ಸ್ಥಾಪನೆ ಮಾಡಿದೆ.

ಐಆರ್ ಎನ್ ಎಸ್ ಎಸ್ ಸರಣಿಯ 7ನೇ ಹಾಗೂ ಅಂತಿಮ ಐಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಉಡಾವಣೆ ಮಾಡಲಾಗಿದ್ದು ಸುರಕ್ಷಿತವಾಗಿ ಕಕ್ಷೆ ತಲುಪಿದೆ ಎಂದು ಇಸ್ರೋ ತಿಳಿಸಿದೆ.

isro

ಪ್ರಾದೇಶಿಕ ಮಾರ್ಗಸೂಚಿ ವ್ಯವಸ್ಥೆಗೆ ನೆರವಾಗಲಿರುವ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಉಡಾವಣೆ ಮಾಡಲಾಗಿದೆ. ಭಾರತ ಈ ತನಕ ಒಟ್ಟು ಆರು ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ಬೇರೆ ಗ್ರಹಕ್ಕೆ ಮಾನವ ತೆರಳುವ ಕಾಲ ದೂರವಿಲ್ಲ. ನಮ್ಮ ವಿಜ್ಞಾನಿಗಳಿಂದಲೇ ಅಂಥ ಸಾಧನೆ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಬರುವ ಮೇ ತಿಂಗಳಲ್ಲಿ ಇಡೀ ಒಂದೇ ರಾಕೆಟ್ ಬಳಸಿ ಇಸ್ರೋ 22 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಲು ಇಸ್ರೋ ಸಿದ್ಧತೆ ಮಾಡಿಕೊಂಡಿದೆ. ಇವುಗಳಲ್ಲಿ ಮೈಕ್ರೋ ಹಾಗೂ ನ್ಯಾನೋ ಉಪಗ್ರಹಗಳು ಸೇರಿವೆ. ಅತಿ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿದ ಸಾಧನೆ ಮೆರೆದ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಳಿ ರಷ್ಯಾ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೆರವು ಕೇಳಿಕೊಂಡು ಬರುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Thursday, April 28 hailed the successful launch of PSLV-C33 carrying 7th navigation satellite IRNSS-1G to complete the landmark mission for a regional navigational system, saying it will help not only India but also fellow SAARC nations. "First and foremost I want to congratulate all ISRO scientists and the entire team. I also congratulate the people of India," Modi said in a televised address. "In space science, our scientists have achieved many accomplishments...The world will know it as Navic," he said.
Please Wait while comments are loading...