ಅಂತಾರಾಷ್ಟ್ರೀಯ ಯೋಗದಿನ: ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

Recommended Video

      International Yoga Day 2018 :ಯೋಗ ದಿನದಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದೇನು ? | Oneindia Kananda

      ಡೆಹ್ರಾಡೂನ್, ಜೂನ್ 21: ಜಗತ್ತನ್ನು ಒಂದುಗೂಡಿಸುವ ಒಂದು ಅತ್ಯುತ್ತಮ ಸಾಧನವಾಗಿ ಯೋಗ ಮಹತ್ವ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

      ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ನೆರೆದಿದ್ದ 55 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಗೆ, ಯೋಗದ ಮಹತ್ವ ತಿಳಿಸಿದರು. ಯೋಗಾಸನ ಮಾಡುವುದರೊಂದಿಗೆ ಮೋದಿ ವಿಶ್ವ ಯೋಗ ದಿನ ಆಚರಿಸಿದರು.

      "ಇಂದಿನ ವೇಗದ ಯುಗದಲ್ಲಿ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯಲು ಯೋಗ ಮಹತ್ವದ ಪಾತ್ರ ವಹಿಸಿದೆ. ಇದು ಶಾಂತಿಯತ್ತ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗವಾಗಿದೆ" ಎಂದರು.

      ಡೆಹ್ರಾಡೂನ್ ನಿಂದ ಡಬ್ಲಿನ್, ಶಾಂಗೈಯಿಂದ ಚಿಕಾಗೋ, ಜಕಾರ್ತಾದಿಂದ ಜೊಹಾನ್ಸ್ ಬರ್ಗ್ ವರೆಗೂ ಎಲ್ಲೆಲ್ಲೂ ಯೋಗ ಅಸ್ತಿತ್ವದಲ್ಲಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

      ಯೋಗ ಭವಿಷ್ಯದ ಆಶಾಕಿರಣ

      ಯೋಗ ಪುರಾತನ ಕಲೆಯಾಗಿದ್ದರೂ ಆಧುನಿಕ ಕಾಲಕ್ಕೂ ಪ್ರಸ್ತುತವಾಗಿದೆ. ಅದಕ್ಕೆಂದೇ ಅದು ಅಷ್ಟು ಸುಂದರವಾಗಿದೆ. ಅದು ನಮ್ಮ ಗತಕಾಲದ ವೈಭವವಾಗಿತ್ತು, ವರ್ತಮಾನದಲ್ಲೂ ನಮ್ಮ ಆಸ್ತಿಯಾಗಿದೆ ಜೊತೆಗೆ ಅದು ಭವಿಷ್ಯದ ಆಶಾಕಿರಣ- ಪ್ರಧಾನಿ ನರೇಂದ್ರ ಮೋದಿ

      ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ!

      ನಾವು ವೈಯಕ್ತಿಕವಾಗಿ ಎದುರಿಸುತ್ತಿರುವ ಮತ್ತು ನಮ್ಮ ಸಮಾಜ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಯೋಗ ಅತ್ಯುತ್ತಮ ಪರಿಹಾರ. ಇದೊಂದು ಪರಿಪೂರ್ಣ ಮಾರ್ಗ. ಭಾರತವು ಯೋಗದ ಅತ್ಯಂತ ಮೇಲ್ಪಂಕ್ತಿಯ ರಾಯಭಾರಿ- ಪ್ರಧಾನಿ ನರೇಂದ್ರ ಮೋದಿ

      ನಮ್ಮ ಸಂಸ್ಕೃತಿ ಮೇಲೆ ನಮಗಿರಲಿ ನಂಬಿಕೆ

      ಭಾರತವು ನಮ್ಮದೇ ನೆಲದಲ್ಲಿ ಹುಟ್ಟಿದ ಯೋಗವನ್ನು ಕಾಪಾಡುವಲ್ಲಿ, ಬೆಳೆಸುವಲ್ಲಿ ಮತ್ತಷ್ಟು ಪರಿಶ್ರಮ ವಹಿಸಬೇಕು. ನಾವು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇಟ್ಟುಕೊಳ್ಳಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನಾವೇ ಅನುಮಾನ ತೋರಿದರೆ ಈ ಜಗತ್ತು ನಮ್ಮನ್ನು ಹೇಗೆ ನಂಬುತ್ತದೆ?- ನರೇಂದ್ರ ಮೋದಿ

      55,000 ಯೋಗಾಸಕ್ತರು ಭಾಗಿ

      ಡೆಹ್ರಾಡೂನಿನಲ್ಲಿ ಜಿಟಿ ಜಿಟಿ ಮಳೆಯ ನಡುವೆಯೂ ನಡೆದ ಯೋಗ ದಿನಾಚರಣೆಯ ಸಂದರ್ಭದಲ್ಲಿ 55 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದು ವಿಶೇಷ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಭಾಗವಹಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. 2015 ರಲ್ಲಿ ವಿಶ್ವಸಂಸ್ಥೆ ಪ್ರಧಾನಿ ಮೋದಿಯವರೇ ಮನವಿ ಮಾಡಿಕೊಂಡು ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದ್ದರಿಂದ ಜಗತ್ತಿನಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+