Narendra Modi: ಮೋದಿ 3ನೇ ಬಾರಿಗೆ ಆಯ್ಕೆಯಾದರೆ ಭಾರತದ ಆರ್ಥಿಕತೆ...
ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಬಂದೇ ಬಿಡ್ತು. ಮುಂದಿನ ವರ್ಷ ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಬಿಜೆಪಿ ಸತತ 3ನೇ ಬಾರಿಗೆ ಗೆಲ್ಲುವ ಗುರಿ ಹೊಂದಿದ್ದರೆ, ವಿಪಕ್ಷಗಳ ಒಕ್ಕೂಟ ಬಿಜೆಪಿ ವಿರುದ್ಧ ತೊಡೆತಟ್ಟಲು ಸಂಘಟಿತವಾಗಿದೆ. ಆದ್ರೆ ಈ ಹೊತ್ತಲ್ಲೇ ಪ್ರಧಾನಿ ಮೋದಿ ಮಹತ್ವ ಘೋಷಣೆ ಹೊರಡಿಸಿದ್ದು, ಪ್ರಧಾನಿ ಹೇಳಿಕೆ ಸಂಚಲನ ಸೃಷ್ಟಿಸಿದೆ.
2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, 2019ರಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ದಾಖಲೆ ಪ್ರಮಾಣದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಆದರೆ ಈ ಬಾರಿ 2024ರ ಚುನಾವಣೆ ಒಂದಷ್ಟು ಟಫ್ ಅಂತಾ ಹೇಳಲಾಗುತ್ತಿರುವ ಹೊತ್ತಲ್ಲೇ ಬಿಜೆಪಿ ಮೈಕೊಡವಿ ನಿಂತಿದೆ. ಅದ್ರಲ್ಲೂ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ಪದೇ ಪದೆ ಗುಡುಗುತ್ತಿದ್ದಾರೆ. ಈಗ ಆರ್ಥಿಕತೆಯ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಚಾಲೆಂಜ್ ಹಾಕಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ನೀಡಿರುವ ಆ ಹೇಳಿಕೆ ಯಾವುದು? ಮುಂದೆ ಓದಿ.

3ನೇ ಬಾರಿಗೆ ಗೆದ್ದರೆ ಭಾರತ ಬಲಿಷ್ಠ!
ಹೌದು, ಪ್ರಧಾನಿ ನರೇಂದ್ರ ಮೋದಿ 2024ರ ಲೋಕಸಭೆ ಚುನಾವಣೆಗೆ ಮುನ್ನ ಮತ್ತೊಮ್ಮೆ ಅಭಿವೃದ್ಧಿಯ ಮಂತ್ರ ಪಠಿಸಿದ್ದಾರೆ. ನನ್ನ 3ನೇ ಅವಧಿಯಲ್ಲಿ ಭಾರತವು ಪ್ರಪಂಚದ ಮೂರು ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಲಿದ್ದು, ದೊಡ್ಡ ಹೆಸರು ಪಡೆಯುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ದೆಹಲಿ ಪ್ರಗತಿ ಮೈದಾನದಲ್ಲಿ ನಡೆದ ಜಾಗತಿಕ ವಸ್ತು ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಅಭಿಮಾನಿಗಳು ಇದನ್ನು ನಮೋ 3.0 ಎಂದು ಬಣ್ಣಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.
PM Sri @narendramodi Ji guarantees India's spot in the top 3 global economies.#ModiThirdTermpic.twitter.com/jgl2GDsJlv
— Shobha Karandlaje (@ShobhaBJP) July 26, 2023
ಟ್ವಿಟ್ಟರ್‌ನಲ್ಲಿ ಸೃಷ್ಟಿಯಾದ ಟ್ರೆಂಡ್!
ಅಂದಹಾಗೆ ಪ್ರಧಾನಿ ಮೋದಿ ಅಭಿಮಾನಿಗಳು ಈ ಹೇಳಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಮಾಡುತ್ತಿದ್ದು #ModiThirdTerm ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಜೊತೆಗೆ ಲೋಕಸಭೆ ಚುನಾವಣೆಗೆ ಹೊಸ ಅಸ್ತ್ರವೂ ಸಿಕ್ಕಂತಾಗಿದೆ. ಇನ್ನು ತಮ್ಮ ಭಾಷಣದಲ್ಲಿ ಪಿಎಂ ಮೋದಿ, 2014ರಿಂದ ಭಾರತೀಯರು ಅಭಿವೃದ್ದಿಗೆ ಸಾಕ್ಷಿಯಾಗಿದ್ದಾರೆ. ಆದ್ರೆ ಕೆಲವ್ರಿಗೆ ಅಭಿವೃದ್ಧಿ ಮತ್ತು ಉತ್ತಮ ಕೆಲಸಗಳನ್ನು ಕಂಡರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ. ಈ ಮೂಲಕವೇ ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಅತ್ತ ವಿಪಕ್ಷಗಳು ಒಕ್ಕೂಟ ರಚಿಸಿ ಬಿಜೆಪಿ ವಿರುದ್ಧ ತೊಡೆ ತಟ್ಟಿವೆ. ಇತ್ತ ಬಿಜೆಪಿ ಕೂಡ ತಮ್ಮ ಹಳೇ ದೋಸ್ತಿಗಳ ಜೊತೆಗೆ ಕೈಜೋಡಿಸಿ ರಣತಂತ್ರ ಹೆಣೆಯುತ್ತಿದೆ.
ಇದೇ ವೇಳೆ, ಭಾರತ ಮುಂದಿನ 25 ವರ್ಷದಲ್ಲಿ ಬಡತನ ಮುಕ್ತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗುತ್ತೆ. ಜಿಡಿಪಿ ಆಧಾರದಲ್ಲಿ ಐಎಂಎಫ್ ವರದಿ ನೀಡಿದಂತೆ ಭಾರತ ಈಗ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದಿದ್ದಾರೆ ಪ್ರಧಾನಿ ಮೋದಿ. 2024ರ ಮೇನಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರದ ಎರಡನೇ ಅವಧಿ ಕೊನೆಗೊಳ್ಳಲಿದೆ. ಇತ್ತೀಚೆಗೆ ಎಸ್‌ಬಿಐ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿರುವಂತೆ ಭಾರತ 2027ರ ವೇಳೆಗೆ ವಿಶ್ವದ 3ನೇ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಲಿದೆಯಂತೆ. ಈಗ ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆ ಹಲ್‌ಚಲ್ ಎಬ್ಬಿಸಿದೆ.












Click it and Unblock the Notifications