PM Modi: ಪ್ರಧಾನಿ ಮೋದಿ ವಿರುದ್ಧ ಜನ ರೊಚ್ಚಿಗೆದ್ದರಾ?

ಪ್ರಧಾನಿ ನರೇಂದ್ರ ಮೋದಿ ತುಂಬಾ ಸಿಂಪಲ್, ಅವರ ರಾಜಕೀಯ ಕೂಡ ಸಿಂಪಲ್ ಅಂತಾ ಅವರ ಅಭಿಮಾನಿಗಳು & ಬೆಂಬಲಿಗರು ಹೇಳುತ್ತಾರೆ. ಆದರೆ ಇಂದು ಮುಂಬೈ ನಗರದಲ್ಲಿ, ವ್ಯತಿರಿಕ್ತ ಘಟನೆ ನಡೆದಿದೆ. ಪ್ರಧಾನಿ ಮೋದಿ ಅವರ ಭರ್ಜರಿ ಚುನಾವಣಾ ರೋಡ್ ಶೋ ಕಾರಣಕ್ಕೆ ಲಕ್ಷಾಂತರ ಜನ ಮುಂಬೈ ನಗರದಲ್ಲಿ ನರಳಾಡಿಬಿಟ್ಟರು. ಅಲ್ಲದೆ ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರ ರೋಡ್ ಶೋ ಬಗ್ಗೆಯೂ ಆಕ್ರೋಶ ಹೊರಹಾಕಿದರು. ವಿಡಿಯೋ ನೋಡಲು ಮುಂದೆ ಓದಿ.

ಅಂದಹಾಗೆ ಇಲ್ಲಿ ಆಗಿದ್ದು ಏನು ಅಂದ್ರೆ, 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಬಿಜೆಪಿ & ಎನ್‌ಡಿಎ ಮೈತ್ರಿ ಅಭ್ಯರ್ಥಿಗಳ ಪರವಾಗಿ ನೆರೆ ರಾಜ್ಯ ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರದಲ್ಲಿ ರೋಡ್ ಶೋ ನಡೆಸಿದರು. ಹೀಗೆ ಪ್ರಚಾರ ಕಾರ್ಯ ನಡೆಸಲು ಶಿವಸೇನೆ ಸೇರಿದಂತೆ ಬಿಜೆಪಿ ಮಿತ್ರ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದವು.

PM Modi s Mumbai Roadshow Metro Suspended Roads Closed And People Are Frustrated

ಆದರೆ ಮುಂಬೈ ನಗರದಲ್ಲಿ ಆಗಿದ್ದೇ ಬೇರೆ, ಪ್ರಧಾನಿ ಮೋದಿ ಅವರ ರೋಡ್ ಶೋ ಹಿನ್ನೆಲೆ ಮುಂಬೈ ನಗರದಲ್ಲಿ ಹಲವು ರಸ್ತೆಗಳು ಬಂದ್ ಆಗಿದ್ದವು, ಹಾಗೇ ಮೆಟ್ರೋ ಸೇವೆಗೆ ಕೂಡ ಕಂಟಕ ಎದುರಾಗಿತ್ತು. ಆಗ ಜನರು ರೊಚ್ಚಿಗೆದ್ದರು ಎಂಬ ಆರೋಪ ಕೇಳಿಬಂದಿದ್ದು, ಜನ ಆಕ್ರೋಶ ಹೊರಹಾಕುತ್ತಾ ಮೆಟ್ರೋ ನಿಲ್ದಾಣದಲ್ಲಿ ಪರದಾಡಿದ ವಿಡಿಯೋಗಳನ್ನ ನೋಡಲು ಮುಂದೆ ಓದಿ.

ಪ್ರಧಾನಿ ರೋಡ್ ಶೋ ಸಮಸ್ಯೆ?

ಹೀಗೆ ಪ್ರಧಾನಿ ಮೋದಿ ಅವರ ರೋಡ್ ಶೋ ಕಾರಣಕ್ಕೆ ವೆರ್ಸೋವಾ ಟು ಘಾಟ್‌ಕೋಪರ್ ಮಾರ್ಗ 1ರ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಇದರಿಂದ ಸಾವಿರಾರು ಜನ ನರಳಾಡಿದರು ಅಲ್ಲದೆ, ವೆರ್ಸೋವಾ, ಅಂಧೇರಿ, ಘಾಟ್‌ಕೋಪರ್ ಪ್ರದೇಶಗಳಿಗೆ ತೆರಳಬೇಕಿದ್ದ ಜನ ಒದ್ದಾಡಿ ಪರದಾಡಿದರು. ಈ ಸಮಯದಲ್ಲಿ ಅಲ್ಲೇ ಇದ್ದ ಸ್ಥಳೀಯರು ಮೆಟ್ರೋ ಪ್ರಯಾಣಿಕರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿವೆ, ಇದೇ ರೀತಿ ರಸ್ತೆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಮುಂಬೈ ನಿವಾಸಿಗಳಿಗೆ ಕೂಡ ಒದ್ದಾಟವು ಎದುರಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ರೋಡ್ ಶೋ ಬಗ್ಗೆ ಪ್ರಶ್ನೆ

ಒಟ್ನಲ್ಲಿ ಚುನಾವಣೆ ಪ್ರಚಾರದ ಕಾರಣಕ್ಕೆ ಮುಂಬೈ ನಗರದ ಜನರು ಇಂದು ಒದ್ದಾಡಿಬಿಟ್ಟರು. ಮತ್ತೊಂದು ಕಡೆ ನಿನ್ನೆಯಷ್ಟೇ ಮುಂಬೈ ಮಹಾನಗರ ಭೀಕರ ಗಾಳಿ & ಮಳೆಗೆ ನಲುಗಿತ್ತು. ಅದ್ರಲ್ಲೂ ಘಾಟ್‌ಕೋಪರ್ ಪ್ರದೇಶದಲ್ಲಿ ದೊಡ್ಡ ಜಾಹೀರಾತು ಹೋರ್ಡಿಂಗ್ ಬಿದ್ದಿದ್ದರಿಂದ ಸುಮಾರು 16 ಜನ ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ನಡುವೆ ರಾಜಕೀಯ ಕಾರ್ಯಕ್ರಮ ಬೇಕಿತ್ತಾ? ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ಆಯೋಜನೆ ಮಾಡಬೇಕಿತ್ತಾ? ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+