Putin India Visit: ರಷ್ಯಾ ಅಧ್ಯಕ್ಷರಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಪಿಎಂ ಮೋದಿ
ರಾಷ್ಟ್ರ ರಾಜಧಾನಿ ನವದೆಹಲಿ ಇದೀಗ ಸಂಭ್ರಮದಲ್ಲಿ ಮಿಂದು ಎದ್ದಿದೆ, ಭಾರತದ ಆಪ್ತ ರಾಷ್ಟ್ರ ರಷ್ಯಾ ಅಧ್ಯಕ್ಷರ ಆಗಮನ ಹಿನ್ನೆಲೆ ಪ್ರಪಂಚದ ಕೇಂದ್ರ ಬಿಂದುವಾಗಿದೆ ದೆಹಲಿ. ಹೀಗಿದ್ದಾಗ ಹಲವು ಪ್ರಮುಖ ಒಪ್ಪಂದಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಇಂದು ಪಿಎಂ ಮೋದಿ ಅವರ ಜೊತೆ ಚರ್ಚಸಿ, ಸಹಿ ಹಾಕಲು ಸಜ್ಜಾಗಿದ್ದಾರೆ. ಇಷ್ಟೆಲ್ಲಾ ಪ್ರಮುಖ ವಿಚಾರಗಳ ಜೊತೆಗೆ ಮತ್ತಷ್ಟು ವಿಶೇಷ ಸಂಗತಿಗಳು ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿ ಸಮಯದಲ್ಲಿ ಗಮನ ಸೆಳೆಯುತ್ತಿದೆ. ಅದರಲ್ಲೂ ರಷ್ಯಾ ಅಧ್ಯಕ್ಷರಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಪಿಎಂ ಮೋದಿ, ಈ ನೆಲದ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ರಷ್ಯಾ ಅಧ್ಯಕ್ಷರ ಭಾರತ ಭೇಟಿ ಇಡೀ ಪ್ರಪಂಚದ ಗಮನ ಸೆಳೆಯುತ್ತಿದ್ದು, ರಷ್ಯಾ & ಭಾರತ ನಡುವೆ ಪ್ರಮುಖ ಸಭೆಗಳು ಇಂದು ನಡೆಯಲಿವೆ. ಚೀನಾ ಹಾಗೂ ಪಾಕಿಸ್ತಾನ ಈ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಲ್ಲದೇ ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳ ನಾಯಕರಿಗೆ ಪುಟಿನ್ ಭಾರತ ಭೇಟಿ ಪ್ರಮುಖ ವಿಷಯವಾಗಿದೆ. ಉಕ್ರೇನ್ ಕೂಡ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಪುಟಿನ್ ಅವರ ಭಾರತ ಭೇಟಿ ಬಗ್ಗೆ ಕುತೂಹಲ ಹೊಂದಿದ್ದು, ಈಗ ಎರಡು ದೇಶಗಳ ಮಧ್ಯೆ ನಡೆಯುವ ಒಪ್ಪಂದದ ಬಗ್ಗೆ ತಿಳಿಯಲು ಕಾಯುತ್ತಿದೆ. ಈ ಸಮಯದಲ್ಲೇ ರಷ್ಯಾ ಅಧ್ಯಕ್ಷರಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಪಿಎಂ ಮೋದಿ ಅವರ ನಿರ್ಧಾರ ಪ್ರಶಂಸೆಗೆ ಪಾತ್ರವಾಗಿದೆ.

ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ
ಭಾರತದ ರಾಜಧಾನಿ ದೆಹಲಿ ಪ್ರತಿಷ್ಠಿತ ಹೋಟೆಲ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ರಾತ್ರಿಯನ್ನ ಕಳೆದಿದ್ದಾರೆ. ಈ ಕಾರಣಕ್ಕೆ ಹೋಟೆಲ್‌ನಲ್ಲಿ ಭಾರಿ ಭದ್ರತೆ ಏರ್ಪಡಿಸಿ, ದೆಹಲಿ ಸುತ್ತ ಹದ್ದಿನ ಕಣ್ಣು ಇಡಲಾಗಿತ್ತು. ವಿಶೇಷವಾದ ಕೋಣೆ ಕೂಡ ಪುಟಿನ್ ಅವರಿಗೆ ಸಿಕ್ಕಿತ್ತು, ಐಷಾರಾಮಿ ಹೋಟೆಲ್‌ನಲ್ಲಿ ಪುಟಿನ್ ಅವರ ಜೊತೆ ಬರುವ ರಷ್ಯಾ ಅಧಿಕಾರಿಗಳಿಗೆ ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಇಂದು ವಿಶೇಷ ಔತಣ ಕೂಡ ಏರ್ಪಡಿಸಲಾಗಿದೆ, ಇದರ ಜೊತೆಗೆ ವಿಶೇಷ ಚರ್ಚೆಗಳು ಕೂಡ ಈ ದಿನ ನಡೆಯಲಿವೆ. ರಕ್ಷಣಾತ್ಮಕ ಒಪ್ಪಂದಗಳಿಗೆ ರಷ್ಯಾ ಮತ್ತು ಭಾರತ ಇಂದು ಸಹಿ ಹಾಕಲಿವೆ. ಈ ಕಾರಣಕ್ಕೆ ಹಲವು ಪ್ರಮುಖ ಒಪ್ಪಂದಗಳಿಗೆ ಇಂದು ಅಂತಿಮ ರೂಪುರೇಷೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಪಾಶ್ಚಿಮಾತ್ಯ ದೇಶಗಳಿಗೆ ಖಡಕ್ ಸಂದೇಶ?
ಒಟ್ನಲ್ಲಿ ಭಾರತ ಮತ್ತು ರಷ್ಯಾ ನಡುವಿನ ಇಂದಿನ ಚರ್ಚೆ ಪಾಶ್ಚಿಮಾತ್ಯ ದೇಶಗಳಿಗೆ ಖಡಕ್ ಆಗಿ ಒಂದು ಮೆಸೇಜ್ ಕೊಡುವುದು ಗ್ಯಾರಂಟಿ. ಯಾಕಂದ್ರೆ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಹಾಳು ಮಾಡಲು ಪ್ರಯತ್ನಿಸುತ್ತಿರುವ ಪಾಶ್ಚಿಮಾತ್ಯ ದೇಶಗಳಿಗೆ, ಎರಡೂ ದೇಶಗಳ ಸಂಬಂಧವನ್ನ ಯಾರೂ ಮುರಿಯಲು ಆಗಲ್ಲ ಎಂಬ ಸಂದೇಶ ಇಲ್ಲಿಂದಲೇ ರವಾನೆ ಆಗುವುದು ಗ್ಯಾರಂಟಿ ಆಗಿದೆ ಎನ್ನಬಹುದು. ಹೀಗಾಗಿ ಪುಟಿನ್ ಮತ್ತು ಪಿಎಂ ಮೋದಿ ಅವರ ನಡುವಿನ ಚರ್ಚೆ ಭಾರಿ ಭರ್ಜರಿ ಕುತೂಹಲ ಕೆರಳಿಸಿದೆ.












Click it and Unblock the Notifications