ಸೋನಿಯಾ ಆರೋಗ್ಯ ಚೇತರಿಕೆಗೆ ಮೋದಿ ಪ್ರಾರ್ಥನೆ: ಏನಾಯ್ತು ಮೇಡಂಗೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 3: ಅನಾರೋಗ್ಯಕ್ಕೀಡಾಗಿರುವ ಎಐಐಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ.

ವಾರಣಾಸಿಯಲ್ಲಿ ಸೋನಿಯಾ ಗಾಂಧಿ, ಅನಾರೋಗ್ಯಕ್ಕೀಡಾಗಿದ್ದಾರೆಂದು ತಿಳಿದುಬಂತು, ಅವರ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆಂದು ಮೋದಿ ಟ್ವೀಟ್ ಮಾಡಿದ್ದಾರೆ. (ಪ್ರಿಯಾಂಕ ಗಾಂಧಿಗೆ ಮಹತ್ವದ ಜವಾಬ್ದಾರಿ)

pm-modi-prays-through-twitter-for-sonia-gandhi-quick-recovery

ನೆಹರೂ- ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರಪ್ರದೇಶದ ಇತ್ತೀಚಿನ ಹಲವು ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ತೀರಾ ಕಳಪೆಯಾಗಿರುವ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳಿಗಿಂತ ಮುನ್ನ ಚುನಾವಣಾ ಪ್ರಚಾರಕ್ಕೆ ಮಂಗಳವಾರ (ಆ 2) ರೋಡ್ ಶೋ ಮೂಲಕ ಚಾಲನೆ ನೀಡಲಾಗಿತ್ತು.

ಈ ಹಿನ್ನಲೆಯಲ್ಲಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ರೋಡ್ ಶೋ ಆಯೋಜಿಸಿತ್ತು. ಸೋನಿಯಾ ಗಾಂಧಿ, ರಾಜ್ ಬಬ್ಬರ್, ಶೀಲಾ ದೀಕ್ಷಿತ್ ಸೇರಿದಂತೆ ಪಕ್ಷದ ಪ್ರಮುಖರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

ರೋಡ್ ಶೋ ಮಧ್ಯದಲ್ಲಿಯೇ ಸೋನಿಯಾ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅಲ್ಲಿಂದ ತುರ್ತಾಗಿ ದೆಹಲಿಗೆ ನಿರ್ಗಮಿಸಿದ್ದರು. ಸೋನಿಯಾ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸೋನಿಯಾ ಹಠಾತ್ ಅನಾರೋಗ್ಯದಿಂದ, ಅವರು ಕಾಶೀ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ರದ್ದಾಗಿದೆ.

ಸೋನಿಯಾ ಗಾಂಧಿ ನವದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Narendra Modi prays for AICC President Sonia Gandhi's quick recovery and good health through twitter. Sonia Gandhi suffering from viral fever.
Please Wait while comments are loading...