ರಕ್ಷಣಾ ಇಲಾಖೆ ಸಮಗ್ರ ಮಾಹಿತಿ ಪಡೆದ ಮೋದಿ
ನವದೆಹಲಿ, ಅ. 17 : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭಾರತದ ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. ಪಾಕಿಸ್ತಾನ ಮತ್ತು ಇತರೆ ದೇಶಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆಯೂ ಸೂಕ್ಷ್ಮವಾಗಿ ವಿವರಿಸಿದರು.
ಭೂ, ವಾಯು ಮತ್ತು ನೌಕಾಸೇನೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಸೈನ್ಯ ವಿದೇಶಿ ವೈರಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು. ರಕ್ಷಣಾ ಇಲಾಖೆ ಕಾರ್ಯತಂತ್ರಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.[ಭಾರತದ ವಾಯು ಸೇನೆಗೆ ಇನ್ನು 'ನಿರ್ಭಯ']

ರಕ್ಷಣಾ ಇಲಾಖೆ ಘಟಕಗಳಿಗೆ ಇನ್ನು ಹೆಚ್ಚಿನ ಅಧಿಕಾರ ನೀಡುವ ಕುರಿತಾಗಿ ಚರ್ಚೆ ನಡೆಯಿತು. ಗಡಿ ರೇಖೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಮೋದಿ ಸೂಚಿಸಿದರು. ಪಾಕಿಸ್ತಾನ ಗಡಿಯಲ್ಲಿ ಮಾಡುತ್ತಿರುವ ತಂಟೆ ಸಭೆಯಲ್ಲಿ ತೀವ್ರ ವಿಚಾರಕ್ಕೀಡಾಯಿತು.
ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ಹಾಜರಿದ್ದರು.[ಶ್ರಮೇವ ಜಯತೆ ಯೋಜನೆ ವಿಶೇಷವೇನು?]
ಶುಕ್ರವಾರ ಬೆಳಗ್ಗೆಯಷ್ಟೇ ನಿರ್ಭಯ್ ಕ್ಷಿಪಣಿಯನ್ನು ಒರಿಸ್ಸಾದಲ್ಲಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಮೊದಲು ಬಾಹ್ಯಾಕಾಶ ವಿಭಾಗದಲ್ಲಿ ಬೆರಗಾಗುವ ಸಾಧನೆ ಮಾಡಿದ ಭಾರತ ಇದೀಗ ರಕ್ಷಣಾ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿದೆ.
Delhi : PM Narendra Modi speaking at the combined commanders conference pic.twitter.com/YwnRdtGhAf
— ANI (@ANI_news) October 17, 2014 Delhi : PM Narendra Modi & Defence Minister arrives for the corps commanders conference pic.twitter.com/9Eywy8HBXk
— ANI (@ANI_news) October 17, 2014 











Click it and Unblock the Notifications