ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 15-17 ವರ್ಷದ ಶೇ.50ರಷ್ಟು ಮಂದಿಗೆ ಮೊದಲ ಡೋಸ್; ಮೋದಿ ಶ್ಲಾಘನೆ

|
Google Oneindia Kannada News

ನವದೆಹಲಿ, ಜನವರಿ 19: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯು ಶರವೇಗದಲ್ಲಿ ನಡೆಯುತ್ತಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ದಿಕ್ಕಿನಲ್ಲಿ 3 ಲಕ್ಷಕ್ಕೆ ಸನ್ನಿಹಿತವಾಗುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ 15 ರಿಂದ 18 ವರ್ಷದ ಶೇ.50ರಷ್ಟು ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ.

ಕಳೆದ ಜನವರಿ 3ರಂದು ಮೊದಲ ಬಾರಿಗೆ 15 ರಿಂದ 18 ವರ್ಷದವರಿಗೆ ಕೊವಿಡ್-19 ಲಸಿಕೆ ನೀಡುವುದಕ್ಕೆ ಆರಂಭಿಸಲಾಗಿದೆ. 15 ದಿನಗಳಲ್ಲೇ ಶೇ.50ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕೊರೊನಾವೈರಸ್ ಲಸಿಕೆ ಕಡ್ಡಾಯವಲ್ಲ, ಒತ್ತಾಯವೂ ಇಲ್ಲ: ಕೇಂದ್ರ ಸರ್ಕಾರಕೊರೊನಾವೈರಸ್ ಲಸಿಕೆ ಕಡ್ಡಾಯವಲ್ಲ, ಒತ್ತಾಯವೂ ಇಲ್ಲ: ಕೇಂದ್ರ ಸರ್ಕಾರ

"ಯುವ ಮತ್ತು ಯುವ ಭಾರತವು ದಾರಿ ತೋರಿಸುತ್ತಿದೆ!. ಇದು ಉತ್ತೇಜನಕಾರಿ ಸುದ್ದಿ. ನಾವು ಆವೇಗವನ್ನು ಉಳಿಸಿಕೊಳ್ಳೋಣ. ಲಸಿಕೆ ಹಾಕುವುದು ಮತ್ತು ಎಲ್ಲಾ ಕೊವಿಡ್-19 ಸಂಬಂಧಿತ ನಿಯಮಗಳನ್ನು ಗಮನಿಸುವುದು ಮುಖ್ಯವಾಗಿದೆ. ಒಟ್ಟಾಗಿ, ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತೇವೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

15-18 ವಯೋಮಾನದವರಿಗೆ ಮೊದಲ ಡೋಸ್

15-18 ವಯೋಮಾನದವರಿಗೆ ಮೊದಲ ಡೋಸ್

ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಶುರುವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು 15 ರಿಂದ 18 ವರ್ಷದವರಿಗೆ ಲಸಿಕೆ ನೀಡಲು ನಿರ್ಧರಿಸಿತು. ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನವರಿ 3ರಿಂದ ದೇಶದಲ್ಲಿ 15 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಘೋಷಿಸಿದರು. ಅಂದಿನಿಂದ ಜನವರಿ 18ರ ಅವಧಿಯಲ್ಲಿ ಈ ವಯೋಮಾನದ ಶೇ.50ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಅದನ್ನು ಅಂಕಿ-ಅಂಶಗಳಲ್ಲಿ ಹೇಳುವುದಾದರೆ 3,73,04,693 ಜನರಿಗೆ ಕೊವಿಡ್-19 ಮೊದಲ ಡೋಸ್ ಅನ್ನು ನೀಡಲಾಗಿದೆ.

15-17 ವರ್ಷದವರಿಗೆ ಕೊಡುವ ಕೊವಿಡ್-19 ಲಸಿಕೆ

15-17 ವರ್ಷದವರಿಗೆ ಕೊಡುವ ಕೊವಿಡ್-19 ಲಸಿಕೆ

ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡುವುದಕ್ಕೆ ನಾಲ್ಕೈದು ಕಂಪನಿಗಳ ಕೊವಿಡ್-19 ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ 15 ರಿಂದ 17 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡುವುದಕ್ಕೆ ಅನುಮತಿ ನೀಡಲಾಗಿದೆ. ದೇಶದಲ್ಲಿ ಈ ವಯೋಮಾನದವರಿಗೆ ಕೊರೊನಾವೈರಸ್ ಕಾರಣಕ್ಕೆ ಕೊವ್ಯಾಕ್ಸಿನ್ ಹೊರತಾಗಿ ಬೇರೆ ಯಾವ ಲಸಿಕೆಯನ್ನೂ ನೀಡಲಾಗುತ್ತಿಲ್ಲ.

ದೇಶದಲ್ಲಿ ಈವರೆಗೂ 158.88 ಕೋಟಿ ಡೋಸ್ ಲಸಿಕೆ ವಿತರಣೆ

ದೇಶದಲ್ಲಿ ಈವರೆಗೂ 158.88 ಕೋಟಿ ಡೋಸ್ ಲಸಿಕೆ ವಿತರಣೆ

ದೇಶದಲ್ಲಿ ಇದುವರೆಗೂ 158.88 ಕೋಟಿ ಡೋಸ್ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 76,35,229 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಜನವರಿ 18ರ ಅಂಕಿ-ಅಂಶಗಳ ಪ್ರಕಾರ, 1,58,88,47,554 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಎಷ್ಟು ಹಂತಗಳಲ್ಲಿ ಕೊವಿಡ್-19 ಲಸಿಕೆ ವಿತರಣೆ?

ಎಷ್ಟು ಹಂತಗಳಲ್ಲಿ ಕೊವಿಡ್-19 ಲಸಿಕೆ ವಿತರಣೆ?

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

ದೇಶದಲ್ಲಿ ಓಮಿಕ್ರಾನ್ ರೂಪಾಂತರ ಸೋಂಕಿನ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 3ರಿಂದ 15 ರಿಂದ 17 ವರ್ಷದ ಮಕ್ಕಳಿಗೂ ಕೊವಿಡ್-19 ಲಸಿಕೆ ವಿತರಿಸುವುದಕ್ಕೆ ಆರಂಭಿಸಲಾಗಿದೆ. ಇದರ ಜೊತೆಗೆ ಜನವರಿ 10ರಿಂದ ದೇಶದ ಆರೋಗ್ಯ ಕಾರ್ಯಕರ್ತರು ಹಾಗೂ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

English summary
PM Modi lauds first dose vaccination of over 50% of youngsters between 15-18 age group in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X