ಹನುಮಂತಪ್ಪ ಆರೋಗ್ಯಕ್ಕಾಗಿ ಭಾರತೀಯರಿಂದ ಪ್ರಾರ್ಥನೆ

Posted By:
Subscribe to Oneindia Kannada

ಬೆಂಗಳೂರು, ಫೆ. 09: ಸಿಯಾಚಿನ್ ನ ನಿರ್ಗಲ್ಲಿನಲ್ಲಿ ಸಿಲುಕಿದ್ದ ಕರ್ನಾಟಕ ಮೂಲದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ಚೇತರಿಕೆಗಾಗಿ ಇಡೀ ಭಾರತ ಪ್ರಾರ್ಥನೆ ಸಲ್ಲಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಪ್ರಾರ್ಥನೆ ಸಲ್ಲಿಸುವವರ ಜತೆಗೂಡಿದ್ದಾರೆ. [ಹುತಾತ್ಮ ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ]

ಹಿಮರಾಶಿಯಲ್ಲಿ ಪವಾಡ ರೀತಿಯಲ್ಲಿ ಬದುಕುಳಿದಿದ್ದ ಯೋಧ ಹನುಮಂತಪ್ಪ ಅವರ ದೇಹಾರೋಗ್ಯ ಪರಿಸ್ಥಿತಿ ಬಗ್ಗೆ ಸದ್ಯಕ್ಕೆ ಏನು ಹೇಳಲಾಗದು. ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ. ಮುಂದಿನ 48 ಗಂಟೆಗಳು ತುಂಬಾ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರ್ ಆರ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.[ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

ಕರ್ನಾಟಕದ ಧಾರವಾಡ ಜಿಲ್ಲೆಯ ಬೆಟದೂರು ಗ್ರಾಮದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರು 19ನೇ ಮದ್ರಾಸ್ ರೆಜಿಮೆಂಟ್ ಗೆ ಸೇರಿದವರು. ಫೆಬ್ರವರಿ 03 ರಂದು ಹಿಮಪಾತಕ್ಕೆ ಸಿಲುಕಿ 30 ಅಡಿ ಆಳದ ಹಿಮರಾಶಿಯಲ್ಲು ಹುದುಗಿ ಹೋಗಿದ್ದರು. ಫೆ. 9 ರಂದು ರಕ್ಷಣೆ ಮಾಡಲಾಯಿತು. [ಹನುಮಂತಪ್ಪ ಆರೋಗ್ಯ ವಿಚಾರಿಸಿದ ಮೋದಿ]

ಸಮುದ್ರಮಟ್ಟದಿಂದ 19,600 ಅಡಿ ಎತ್ತರದ ಪ್ರದೇಶದಲ್ಲಿ ಮೈನಸ್ 25 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಪ್ಪ ಅವರ ಆರೋಗ್ಯ ಸುಧಾರಣೆಗಾಗಿ ಟ್ವೀಟ್ ಗಳು ಹರಿದು ಬಂದಿವೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಾರ್ಥನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಾರ್ಥನೆ

ಬೆಟದೂರಿನ ಯೋಧ ಹನುಮಂತಪ್ಪ ಅವರ ಆರೋಗ್ಯ ಸುಧಾರಣೆಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾರ್ಥಿಸಿದ್ದಾರೆ. ಹನುಮಂತಪ್ಪ ಅವರ ತಾಯಿ ಬಸಮ್ಮ, ಪತ್ನಿ ಮಹಾದೇವಿ, ಒಂದೂವರೆ ವರ್ಷ ಹೆಣ್ಣುಮಗು ಹಾಗೂ ಕೆಲ ಸಂಬಂಧಿಕರು ದೆಹಲಿಗೆ ತೆರಳಿದ್ದಾರೆ. ನನ್ನ ಮಗ ಕನಸಿನಲ್ಲಿ ಬಂದು ನಾನು ಬದುಕಿದ್ದೇನೆ ಎಂದು ಹೇಳುತ್ತಿದ್ದ ಎಂದು ಬಸಮ್ಮ ಪ್ರತಿಕ್ರಿಯಿಸಿದ್ದಾರೆ.

ದೇವರಿದ್ದಾನೆ ಎಂಬುದು ಸಾಬೀತಾಗಿದೆ

ಸಿಯಾಚಿನ್ ಪವಾಡ: ದೇವರಿದ್ದಾನೆ ಎಂಬುದು ಸಾಬೀತಾಗಿದೆ. ವೀರ ಯೋಧ ಹನುಮಂತಪ್ಪನಿಗಾಗಿ ಪ್ರಾರ್ಥಿಸೋಣ.

ಪಾಕಿಸ್ತಾನದಿಂದಲೂ ಪ್ರಾರ್ಥನೆ

ಭಾರತೀಯ ಯೋಧ ಹನುಮಂತಪ್ಪ ಆರೋಗ್ಯ ಚೇತರಿಕೆಗಾಗಿ ಪಾಕಿಸ್ತಾನದಿಂದಲೂ ಪ್ರಾರ್ಥನೆ ಸಲ್ಲಿಕೆಯಾಗಿದೆ.

ಯೋಧ ಹನುಮಂತಪ್ಪ ಭೇಟಿ ಮಾಡಿದ ಮೋದಿ

ಯೋಧ ಹನುಮಂತಪ್ಪ ಕಾಣಲು ಆರ್ಮಿ ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ಮೋದಿ

ಸಿಂಗಪುರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ

ಭಾರತೀಯ ವೈದ್ಯರನ್ನು ನಂಬುವುದಿಲ್ಲ, ದಯವಿಟ್ಟು ಸಿಂಗಪುರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ

ರಕ್ಷಣಾ ಕಾರ್ಯಾಚರಣೆ ಚಿತ್ರಗಳು

ರಕ್ಷಣಾ ಕಾರ್ಯಾಚರಣೆ ಚಿತ್ರಗಳನ್ನು ಟ್ವೀಟ್ ಮಾಡಿದ ಶಿವ್ ಅರೂರ್

ಲ್ಯಾನ್ಸ್ ನಾಯಕ್ ಹನುಮಂತಪ್ಪ ಬಗ್ಗೆ ಪಿಐಬಿ

ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದಿಂದ ಹನುಮಂತಪ್ಪ ಅವರ ಆರೋಗ್ಯದ ಸ್ಥಿತಿ ಗತಿ ಬಗ್ಗೆ ಅಧಿಕೃತ ಪ್ರಕಟಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi and Army Chief Dalbir Singh Suhag joined the nation in praying for Lance Naik Hanumanthappa, who miraculously survived below 30 feet of snow on the icy slopes of Siachen Glacier.
Please Wait while comments are loading...