ಯೋಧ ಹನುಮಂತಪ್ಪ ಆರೋಗ್ಯ ವಿಚಾರಿಸಿದ ಮೋದಿ

ನವದೆಹಲಿ, ಫೆಬ್ರವರಿ 09 : ದೆಹಲಿಯ ಆರ್.ಆರ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕದ ಯೋಧ ಹನುಮಂತಪ್ಪ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಹಿಂದಿನ ಸುದ್ದಿ : ಸಿಯಾಚಿನ್‌ನಲ್ಲಿ ಪವಾಡ ನಡೆದಿದ್ದು, ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ. ಆರು ದಿನಗಳಿಂದ 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಅವರನ್ನು ಸೋಮವಾರ ಪತ್ತೆ ಹಚ್ಚಲಾಗಿದೆ. ಅವರು ಕ್ಷೇಮವಾಗಿ ಮನೆಗೆ ಮರಳಲಿ ಎಂದು ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.[ದೆಹಲಿಗೆ ಹೊರಟ ಯೋಧ ಹನುಮಂತಪ್ಪ ಕುಟುಂಬದವರು]

'ಮಂಜಿನೊಳಗೆ ಸಿಲುಕಿದ್ದ ಹನುಮಂತಪ್ಪ ಅವರನ್ನು ರಕ್ಷಣೆ ಮಾಡಲಾಗಿದ್ದು, ಸಿಯಾಚಿನ್‌ನಿಂದ ದೆಹಲಿಯ ಆರ್.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ' ಎಂದು ಸೇನೆಯ ನಾರ್ತರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ತಿಳಿಸಿದ್ದಾರೆ. ಹನುಮಂತಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. [ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ಸಾವು]

ಹನುಮಂತಪ್ಪ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನವರು. ಹನುಮಂತಪ್ಪ ಬದುಕಿದ್ದಾರೆ ಎಂಬ ಸುದ್ದಿ ಕೇಳಿ ಪತ್ನಿ ಮತ್ತು ತಾಯಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ, ಅವರು ಕ್ಷೇಮವಾಗಿ ಮನೆಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. [ಹಿಮಪಾತಕ್ಕೆ ಎಚ್.ಡಿ.ಕೋಟೆಯ ಯೋಧ ಮಹೇಶ್ ಬಲಿ]

ಬುಧವಾರ ಹಿಮಪಾತ ಸಂಭವಿಸಿತ್ತು : ಫೆ.3ರಂದು ಮದ್ರಾಸ್ ರೆಜಿಮೆಂಟ್‌ಗೆ ಸೇರಿದ 10 ಯೋಧರು 19 ಸಾವಿರ ಅಡಿಗಳ ಎತ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾರೀ ಹಿಮಪಾತ ಸಂಭವಿಸಿತ್ತು. ಹಿಮದಲ್ಲಿ ಸಿಲುಕಿದ್ದವರ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಾಗಿತ್ತು. [ಪವಾಡ : ಕಠ್ಮಂಡುವಿನಲ್ಲಿ ನಾಲ್ಕು ತಿಂಗಳ ಮಗುವಿನ ರಕ್ಷಣೆ]

ಕರ್ನಾಟಕದ ಹಾಸನದ ತೇಜೂರಿನ ಟಿ.ಟಿ ನಾಗೇಶ್, ಮೈಸೂರಿನ ಎಚ್​.ಡಿ.ಕೋಟೆ ತಾಲೂಕಿನ ಪಿ.ಎನ್. ಮಹೇಶ್ ಮತ್ತು ಧಾರವಾಡದ ಹನುಮಂತಪ್ಪ ಕೊಪ್ಪದ ಅವರು ಈ ಹಿಮಪಾತದಲ್ಲಿ ಸಿಲುಕಿದ್ದರು. ಇವರ ಪೈಕಿ ನಾಗೇಶ್ ಮತ್ತು ಮಹೇಶ್ ಮೃತಪಟ್ಟಿದ್ದರು.[ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+