ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ

By Mahesh
|
Google Oneindia Kannada News

ಬೆಂಗಳೂರು, ಫೆ.11: ಸಿಯಾಚಿನ್ ನ ನಿರ್ಗಲ್ಲಿನಲ್ಲಿ ಸಿಲುಕಿದ್ದ ಕರ್ನಾಟಕ ಮೂಲದ ಯೋಧ ಹನುಮಂತಪ್ಪ ಕೊಪ್ಪದ್ ಅವರು ಹುತಾತ್ಮರಾಗಿದ್ದಾರೆ. ಪವಾಡ ರೀತಿಯಲ್ಲಿ ಪತ್ತೆಯಾಗಿದ್ದ ಹನುಮಂತಪ್ಪ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲಿ ಗುರುವಾರ ಬೆಳಗ್ಗೆ 11.45ಕ್ಕೆ ಇಹ ಲೋಕ ತ್ಯಜಿಸಿದ್ದಾರೆ. ಹನುಮಂತಪ್ಪ ಅವರ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಕಂಬನಿಗೆರೆಯಲಾಗಿದೆ. ಈ ನಡುವೆ ತಮಿಳುನಾಡಿನ ಕಿಡಿಗೇಡಿ ಗುಂಪಿನ ಟ್ವೀಟ್ ವೊಂದು ವಿವಾದಕ್ಕೆ ಕಾರಣವಾಗಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದ ರಾಜ್ಯಪಾಲ ವಿ.ಆರ್.ವಾಲ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.[ಯೋಧ ಹನುಮಂತಪ್ಪನ ಬೆಟದೂರಿನಲ್ಲಿ ಸ್ಮಶಾನ ಮೌನ]

ಫೆಬ್ರವರಿ 03ರಂದು ಸಂಭವಿಸಿದ ಭಾರೀ ಹಿಮಪಾತದಲ್ಲಿ ಹನುಮಂತಪ್ಪ ಕೊಪ್ಪದ್ ಸೇರಿದಂತೆ 10ಮಂದಿ ಯೋಧ ಸಿಲುಕಿದ್ದರು. ಈ ಪೈಕಿ 9 ಜನ ಈ ಮೊದಲೇ ಹುತಾತ್ಮರಾಗಿದ್ದರು. ಬದುಕುಳಿದಿದ್ದ ಹನುಮಂತಪ್ಪ ಅವರು ದೇಶದ ಪಾಲಿಗೆ ಉಳಿಯಲಿಲ್ಲ. ['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಸಿಯಾಚಿನ್ ಪ್ರದೇಶದಲ್ಲಿ ಉಂಟಾದ ಹಿಮಪಾತದಲ್ಲಿ ಮದ್ರಾಸ್ ರೆಜಿಮೆಂಟ್ ಗೆ ಸೇರಿದ ದೇಶದ ಹೆಮ್ಮೆಯ 10 ಯೋಧರು ಪ್ರಾಣಾರ್ಪಣೆ ಮಾಡಿದ್ದಾರೆ. ಈ ಪೈಕಿ ಮೂವರು ಕನ್ನಡಿಗ ಯೋಧರುಗಳಿದ್ದರು. ಹುತಾತ್ಮರಾದ ದೇಶಭಕ್ತ ಯೋಧರಿಗೆ ಅಂತಿಮ ನಮನ ಸಲ್ಲಿಸುವ ಟ್ವೀಟ್ ಗಳ ಸಂಗ್ರಹ ಮುಂದಿದೆ ಓದಿ...

ದೇಶಭಕ್ತ ವೀರಯೋಧರೆಲ್ಲರಿಗೂ ಅಂತಿಮ ನಮನ

ದೇಶಭಕ್ತ ವೀರಯೋಧರೆಲ್ಲರಿಗೂ ಅಂತಿಮ ನಮನ

ಧಾರವಾಡ ಜಿಲ್ಲೆಯ ಕುಂದಗೋಳದ ಬೆಟದೂರಿನ ಹನುಮಂತ ಕೊಪ್ಪದ್, ಹಾಸನ ಜಿಲ್ಲೆಯ ತೇಜೂರಿನ ಸುಬೇದಾರ್ ನಾಗೇಶ್, ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸಿಪಾಯಿ ಮಹೇಶ್ ಅವರು ಹುತಾತ್ಮರಾಗಿದ್ದಾರೆ. ಇವರ ಜೊತೆಗೆ ಸಿಯಾಚಿನ್ ನಲ್ಲಿ ಹುತಾತ್ಮರಾದ ಇತರೆ ಯೋಧರಿಗೂ ಅಂತಿಮ ನಮನ ಸಲ್ಲಿಸಲಾಗುತ್ತಿದೆ.

ಹನುಮಂತಪ್ಪ ಅವರ ಕುಟುಂಬಕ್ಕೆ ಆಘಾತ

ಹನುಮಂತಪ್ಪ ಅವರ ಕುಟುಂಬಕ್ಕೆ ಆಘಾತ

ಹನುಮಂತಪ್ಪ ಕೊಪ್ಪದ್ ಅವರು 19ನೇ ಮದ್ರಾಸ್ ರೆಜಿಮೆಂಟ್ ಗೆ ಸೇರಿದವರು. ಫೆಬ್ರವರಿ 03 ರಂದು ಹಿಮಪಾತಕ್ಕೆ ಸಿಲುಕಿ 30 ಅಡಿ ಆಳದ ಹಿಮರಾಶಿಯಲ್ಲಿಹುದುಗಿ ಹೋಗಿದ್ದರು. ಫೆ. 9 ರಂದು ರಕ್ಷಣೆ ಮಾಡಲಾಯಿತು. ಬದುಕಿ ಉಳಿಯುವ ಆಸೆ ಜೀವಂತಗೊಳಿಸಿದ್ದರು. ಹನುಮಂತಪ್ಪ ಅವರ ತಾಯಿ ಬಸಮ್ಮ, ಪತ್ನಿ ಮಹಾದೇವಿ, ಒಂದೂವರೆ ವರ್ಷ ಹೆಣ್ಣುಮಗು ಹಾಗೂ ಕೆಲ ಸಂಬಂಧಿಕರು ದೆಹಲಿಗೆ ತೆರಳಿದ್ದರು. ಆದರೆ, ಈಗ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.

ಕುಹಕಿಗಳಿಂದ ಸಂಕುಚಿತ ಮನೋಭಾವದ ಟ್ವೀಟ್

ತಮಿಳುನಾಡಿನ ಕುಹಕಿಗಳಿಂದ ಸಂಕುಚಿತ ಮನೋಭಾವದ ಟ್ವೀಟ್, ಆತ ಕನ್ನಡಿಗ ಆತನಿಗೆ ನಮ್ಮ ಗೌರವ ಸಲ್ಲಬೇಕಾಗಿಲ್ಲ ಎಂದು ಬರೆಯಲಾಗಿದೆ.

ಬೆಂಗಳೂರು ನಗರ ಪೊಲೀಸರಿಂದ ನಮನ

ಬೆಂಗಳೂರು ನಗರ ಪೊಲೀಸರಿಂದ ವೀರ ಯೋಧ ಹನುಮಂತಪ್ಪ ಅವರಿಗೆ ಅಂತಿಮ ನಮನ.

ಸಿಎಂ ಸಿದ್ದರಾಮಯ್ಯ ಅವರಿಂದ ಸಂತಾಪ ಸಂದೇಶ

ಯೋಧ ಹನುಮಂತಪ್ಪ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಸಂತಾಪ ಸಂದೇಶ

ವೀರ ಕನ್ನಡಿಗ ಹನುಮಂತಪ್ಪ ಆತ್ಮಕ್ಕೆ ಶಾಂತಿ ದೊರೆಯಲಿ

ವೀರ ಕನ್ನಡಿಗ ಹನುಮಂತಪ್ಪ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕನ್ನಡಿಗರ ಸಂತಾಪ.

ಹೃದಯಮಂದಿರದಲ್ಲಿ ಲೀನವಾದ ಕೆಚ್ಚೆದಯ ಕನ್ನಡಿಗ

ಕುಲಕೋಟಿ ಭಾರತೀಯರ ಹೃದಯಮಂದಿರದಲ್ಲಿ ಲೀನವಾದ ಕೆಚ್ಚೆದಯ ಕನ್ನಡಿಗ ಹನುಮಂತಪ್ಪ

ಕರ್ನಾಟಕ ಭವನದಲ್ಲಿ ಹನುಮಂತಪ್ಪ ಕುಟುಂಬಕ್ಕೆ ವ್ಯವಸ್ಥೆ

ಕರ್ನಾಟಕ ಭವನದಲ್ಲಿ ಹನುಮಂತಪ್ಪ ಕುಟುಂಬಕ್ಕೆ ವ್ಯವಸ್ಥೆ ಮಾಡಲಾಗಿದೆ. ದೆಹಲಿ ಪೆರೇಡ್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಪಾರ್ಥೀವ ಶರೀರವನ್ನು ಹನುಮಂತಪ್ಪ ಅವರ ಊರು ಬೆಟದೂರಿಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.

ಹನುಮಂತಪ್ಪ ನೀವು ನಿಜವಾದ ವೀರ ಯೋಧ

ಹನುಮಂತಪ್ಪ ನೀವು ನಿಜವಾದ ವೀರ ಯೋಧ, ನಿಮ್ಮೊಳಗಿನ ಯೋಧ ಎಂದಿಗೂ ಸಾಯುವುದಿಲ್ಲ ಅಮರವಾಗಿರುತ್ತಾನೆ.

English summary
After a miraculous survive, Lance Naik Hanumanthappa gave up the tough battle for life on Thursday, Feb 11. As the tragic news of his death spread, tributes started pouring in from all across the country and politicians. Here are some Twitter reactions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X