ಅಬುಧಾಬಿಯಲ್ಲಿ ಮೊಟ್ಟ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ, ಇದರ ವಿಶೇಷತೆಗೇಳೇನು?
ಅಬುಧಾಬಿ, ಫೆಬ್ರವರಿ, 14: ಇತ್ತೀಚೆಗಷ್ಟೇ ಭಾರತದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಮಾಡಲಾಗಿತ್ತು. ಇದೀಗ ದೇಶ ಅಲ್ಲದೆ ವಿದೇಶಗಳಲ್ಲೂ ಕೂಡ ಹಿಂದೂ ದೇವಾಲಯಗಳು ತಲೆಎತ್ತುತ್ತಿವೆ. ಹಾಗೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 14) ಅಬುಧಾಬಿಯಲ್ಲಿ ಮೊಟ್ಟ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟನೆ ಮಾಡಿದ್ದು, ಇದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ.
ಇಂದು ಅಬುಧಾಬಿಯಲ್ಲಿ ಉದ್ಘಾನೆಯಾದ ಹಿಂದೂ ದೇವಾಲಯದ ವಿಶೇಷತೆ ಏನು? ಇದನ್ನು ಯಾವುದರಿಂದ ನಿರ್ಮಾರ್ಣ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪ್ರಧಾನಿ ಮೋದಿ ಅವರು 2015ರಿಂದ ಯುಎಇಗೆ 7ನೇ ಬಾರಿ ಭೇಟಿ ನೀಡುತ್ತಿದ್ದು, ಅಬುಧಾಬಿಯ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ದೇವಸ್ಥಾನವನ್ನು ಇಂದು (ಫೆಬ್ರವರಿ 14) ಉದ್ಘಾಟನೆ ಮಾಡಿದ್ದಾರೆ. ಈ ದೇವಾಲಯ ಭಕ್ತರಿಗೆ ಮಾರ್ಚ್ 1ರಿಂದ ಬಾಗಿಲು ತೆರೆದುಯುತ್ತದೆ ಎಂದು ತಿಳಿದುಬಂದಿದೆ. ಈ ದೇವಾಲಯವು ಹಿಂದೂ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅನ್ವೇಷಿಸಲು ಮತ್ತು ತಿಳಿದುಕೊಳ್ಳಲು ಎಲ್ಲಾ ಧರ್ಮಗಳ ಜನರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
2018ರಲ್ಲಿ ಪ್ರಧಾನಿ ಮೋದಿಯವರು ಯುಎಇಗೆ ಭೇಟಿ ನೀಡಿದ ವೇಳೆ ಅಬುಧಾಬಿಯಲ್ಲಿ BAPS ಹಿಂದೂ ಮಂದಿರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ದೇವಾಲಯವು ಏಳು ಶಿಖರಗಳನ್ನು ಒಳಗೊಂಡಿದೆ. ಈ ಹಿಂದೂ ಮಂದಿರವನ್ನು ಯುಎಇ ಸರ್ಕಾರವು ದಾನವಾಗಿ ನೀಡಿದ 27 ಎಕರೆ (11 ಹೆಕ್ಟೇರ್) ಜಾಗದಲ್ಲಿ ನಿರ್ಮಿಸಲಾಗಿದೆ.
ಅಬುಧಾಬಿಯಲ್ಲಿರುವ ದೇವಸ್ಥಾನವನ್ನು BAPS ಸ್ವಾಮಿನಾರಾಯಣ ಸಂಸ್ಥೆ ನಡೆಸುತ್ತಿದೆ. ಇದು ಆಧ್ಯಾತ್ಮಿಕ, ಸ್ವಯಂಸೇವಕ-ಚಾಲಿತ ಫೆಲೋಶಿಪ್ ಎಂದು ಕರೆದುಕೊಳ್ಳುತ್ತದೆ. 200 ವರ್ಷಗಳ ಇತಿಹಾಸವನ್ನು ಪ್ರತಿಪಾದಿಸುವ ಈ ಸಂಘಟನೆಯು ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.












Click it and Unblock the Notifications