ರೈತರ ಆದಾಯ ಹೆಚ್ಚಳಕ್ಕೆ ಕಿಸಾನ್ ರೈಲು ಕಾರಣ: ಮೋದಿ
ನವದೆಹಲಿ, ಡಿ. 28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ(ಡಿಸೆಂಬರ್ 28) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದ ಸಂಗೋಲ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಡುವೆ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ರೈತರ ಸಬಲೀಕರಣ, ಆದಾಯ ಗಳಿಕೆ ಹೆಚ್ಚಳಕ್ಕೆ ಕಿಸಾನ್ ರೈಲು ಕಾರಣವಾಗಿವೆ. ಕೋಲ್ಡ್ ಸ್ಟೋರೇಜ್ ಘಟಕದಂತೆ ಕಿಸಾನ್ ರೈಲು ಕಾರ್ಯ ನಿರ್ವಹಿಸುತ್ತಿದ್ದು, ಹಣ್ಣು, ತರಕಾರಿ, ಹಾಲು, ಮೀನು ಇತ್ಯಾದಿಗಳನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದೆಡೆ ಸಾಗಿಸುತ್ತಿವೆ ಎಂದು ಮೋದಿ ಅವರು ರೈಲಿಗೆ ಚಾಲನೆ ನೀಡಿ ಹೇಳಿದರು.
PM Narendra Modi flags off 100th Kisan Rail from Sangola in Maharashtra to Shalimar in West Bengal, via video conferencing. Union Ministers Narendra Singh Tomar and Piyush Goyal also present. pic.twitter.com/yx9EyJiFfc
— ANI (@ANI) December 28, 2020
ಕಳೆದ ನಾಲ್ಕು ತಿಂಗಳಲ್ಲೇ 100ನೇ ಕಿಸಾನ್ ರೈಲು ಕಾಣಲಾಗಿದೆ. ಕೊವಿಡ್ 19 ಸಂದರ್ಭದಲ್ಲೂ ದೇಶದ ಆಹಾರ ಅಗತ್ಯವನ್ನು ರೈತರು ಪೂರೈಸಿದ್ದಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಂಗೋಲ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಡುವೆ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಬಹು ಸಾಮಗ್ರಿಯ ಈ ರೈಲು ಸೇವೆಯಲ್ಲಿ ತರಕಾರಿ ಅಂದರೆ ಹೂಕೋಸು, ದೊಣ್ಣೆಮೆಣಸಿನಕಾಯಿ, ಎಲೆ ಕೋಸು, ನುಗ್ಗೆಕಾಯಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಹಣ್ಣುಗಳಾದ ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಬಾಳೆಹಣ್ಣು, ಮರಸೇಬು ಇತ್ಯಾದಿಯನ್ನು ಸಾಗಿಸಲಿದೆ. ಬೇಗ ಹಾಳಾಗುವ ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಪ್ರಮಾಣದ ಮೇಲೆ ಯಾವುದೇ ನಿರ್ಬಂಧವಿಲ್ಲದ ಎಲ್ಲಾ ನಿಲುಗಡೆಗಳಲ್ಲಿ ಅನುಮತಿಸಲಾಗುತ್ತದೆ. ಭಾರತ ಸರ್ಕಾರ, ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗೆ ಶೇ.50 ಸಹಾಯಧನವನ್ನು ವಿಸ್ತರಿಸಿದೆ.
ಪ್ರಥಮ ಕಿಸಾನ್ ರೈಲನ್ನು 2020ರ ಆಗಸ್ಟ್ 7ರಂದು ದೇವಾಲೈನಿಂದ ದನಾಪುರದವರೆಗೆ ಪರಿಚಯಿಸಲಾಯಿತು, ನಂತರ ಅದನ್ನು ಮುಜಾಫರ್ಪುರವರೆಗೆ ವಿಸ್ತರಿಸಲಾಯಿತು. ರೈತರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ರೈಲಿನ ಆವರ್ತನೆಯನ್ನು ಸಹ ವಾರಕ್ಕೊಮ್ಮೆಯ ಬದಲು ವಾರದಲ್ಲಿ ಮೂರು ದಿನಗಳಿಗೆ ಹೆಚ್ಚಿಸಲಾಗಿದೆ. ಕಿಸಾನ್ ರೈಲು ಕೃಷಿ ಉತ್ಪನ್ನಗಳನ್ನು ದೇಶದಾದ್ಯಂತ ತ್ವರಿತವಾಗಿ ಸಾಗಿಸುವುದನ್ನು ಖಾತ್ರಿಪಡಿಸುವಲ್ಲಿ ಮಹತ್ವದ್ದಾಗಿದೆ. ಇದು ಬೇಗ ನಾಶವಾಗುವ ಉತ್ಪನ್ನಗಳ ತಡೆರಹಿತ ಸಾಗಾಟದ ಸರಪಳಿ ಒದಗಿಸುತ್ತದೆ.