ಮೋದಿ ಆಡಳಿತಕ್ಕೆ ಡೊನಾಲ್ಡ್ ಟ್ರಂಪ್ ಮೆಚ್ಚುಗೆ

Subscribe to Oneindia Kannada

ಡಾ ನಾಂಗ್ (ವಿಯೆಟ್ನಾಂ), ನವೆಂಬರ್ 10: ಭಾರತದ ಬೆಳವಣಿಗೆ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶಾಲ ದೇಶ ಮತ್ತು ದೇಶದ ಜನರನ್ನು ಒಟ್ಟುಗೂಡಿಸುಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಟ್ರಂಪ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಗೆಲುವಿನ ವರ್ಷಾಚರಣೆ ಸಂಭ್ರಮದ ಮಧ್ಯೆ ಚೀನಾದಲ್ಲಿ ಡೊನಾಲ್ಡ್ ಟ್ರಂಪ್

ವಾರ್ಷಿಕ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗ ಸಭೆ (ಅಪೆಕ್) ಯ ಹಿನ್ನಲೆಯಲ್ಲಿ ಆಯೋಜನೆಯಾಗಿದ್ದ ಸಿಇಒ ಸಭೆಯಲ್ಲಿ ಟ್ರಂಪ್ ಈ ಮಾತುಗಳನ್ನಾಡಿದ್ದಾರೆ.

PM Modi brought Indian people together as one: Donald Trump

ಭಾರತ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದನ್ನು ಉಲ್ಲೇಖಿಸಿದ ಟ್ರಂಪ್, "130 ಕೋಟಿ ಜನ ಸಂಖ್ಯೆ ಇರುವ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಸಾರ್ವಭೌಮ ಗಣರಾಜ್ಯವಾಗಿದೆ," ಎಂದು ಹೇಳಿದ್ದಾರೆ.

"ಭಾರತ ಮುಕ್ತ ಆರ್ಥಿಕತೆಗೆ ತೆರೆದುಕೊಂಡ ನಂತರ ಭಾರೀ ಪ್ರಗತಿ ಸಾಧಿಸಿದೆ. ಇಲ್ಲಿಯ ಮಧ್ಯಮ ವರ್ಗದ ಜನರಿಗೆ ಹೊಸ ಜಗತ್ತಿನ ಅವಕಾಶಗಳು ತೆರೆದುಕೊಂಡಿವೆ," ಎಂದು ವಿಶ್ಲೇಷಿಸಿದ್ದಾರೆ.

ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಭಾನುವಾರ ವಿಯೆಟ್ನಾಂಗೆ ಪ್ರಯಾಣ ಬೆಳೆಸಲಿದ್ದಾರೆ. ಇದೇ ವೇಳೆ ಪೂರ್ವ ಏಷ್ಯಾ ದೇಶಗಳ ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದಾರೆ.

ತಮ್ಮ ಭಾಷಣದ ವೇಳೆ ಟ್ರಂಪ್ ಇಂಡೋನೇಷ್ಯಾ, ಥಾಯ್ಲಾಂಡ್, ಫಿಲಿಪ್ಪೀನ್ಸ್, ಮಲೇಷ್ಯಾ ಮತ್ತು ಜಪಾನ್ ದೇಶಗಳ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi brought the people of India together as one, the United States President Donald Trump said. Trump also stated that India was achieving astounding growth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ