ಮೋದಿ ಮನವಿಗೆ ಸ್ಪಂದಿಸಿ, ಅಪನಗದೀಕರಣ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ನವದೆಹಲಿ, ನವೆಂಬರ್ 08: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಪನಗದೀಕರಣ ಯೋಜನೆ ಜಾರಿ ತಂದ ವರ್ಷಾಚರಣೆ ಸಂಭ್ರಮದಲ್ಲಿದೆ. ವರ್ಷ ಕಳೆದರೂ ನೋಟ್ ಬ್ಯಾನ್, ಅಪನಗದೀಕರಣದ ಬಗ್ಗೆ ಗೊಂದಲ, ಕುತೂಹಲ ಮುಂದುವರೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಂದು ಅಪನಗದೀಕರಣದ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗುತ್ತಿದ್ದು, ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಭ್ರಷ್ಟಾಚಾರ ಹಾಗೂ ಕಾಳಧನದ ಮೇಲೆ ನಿಯಂತ್ರಣ, ನಿರ್ಮೂಲನೆ ಮಾಡಲು ನಮ್ಮ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೈಗೊಂಡ ಅನೇಕ ಆರ್ಥಿಕ ಯೋಜನೆಗಳ ಪೈಕಿ ಅಪನಗದೀಕರಣ ಯೋಜನೆ ಅಥವಾ ಭಾರಿ ಮೌಲ್ಯದ ನೋಟುಗಳ ಮೇಲಿನ ನಿಷೇಧ ಪ್ರಮುಖವಾಗಿದೆ ಎಂದು ಮೋದಿ ಹೇಳಿದ್ದಾರೆ.
What do you feel about the efforts to uproot corruption & black money. Tell me through this survey. https://t.co/TYuxNNJfIf pic.twitter.com/eZB4tI9EmS
— Narendra Modi (@narendramodi) November 8, 2017
ನರೇಂದ್ರ ಮೋದಿ ಅವರ ಹೆಸರಿನ ಮೊಬೈಲ್ ಅಪ್ಲಿಕೇಷನ್ ಮೂಲಕ ಈ ಸಮೀಕ್ಷೆಗೆ ಉತ್ತರಿಸಬಹುದು. ನಿಮ್ಮ ಪ್ರತಿಕ್ರಿಯೆ ನೀಡಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications