ಮೋದಿ ಪಿಎಂ ಆದ ನಂತರ ಹಾಕಿದ ರಜೆ ಎಷ್ಟು, ಆರ್ಟಿಐನಲ್ಲಿ ಬಹಿರಂಗ

Written By:
Subscribe to Oneindia Kannada

ನವದೆಹಲಿ, ಅ 12: ಪ್ರಧಾನಮಂತ್ರಿ ಮತ್ತು ಕ್ಯಾಬಿನೆಟ್ ಸೆಕ್ರೆಟರಿಗೆ ಇರುವ 'ಲೀವ್ ಪಾಲಿಸಿ' ಏನು, ಅವರು ಇದುವರೆಗೆ ಹಾಕಿರುವ ರಜೆ ಎಷ್ಟು ಎನ್ನುವ ಆರ್ಟಿಐ ಮುಖಾಂತರ ಬಂದ ಅರ್ಜಿಯೊಂದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ಉತ್ತರಿಸಿದೆ.

ಪ್ರಧಾನಮಂತ್ರಿ ಕಾರ್ಯಾಲಯ ನೀಡಿದ ಮಾಹಿತಿ ಎಲ್ಲರನ್ನೂ ಹುಬ್ಬೇರಿಸುವುಂತೆ ಮಾಡಿದೆ. ಪ್ರಧಾನಿ ಮೋದಿ ಈ ರೀತಿ ಕೆಲಸ ಮಾಡುತ್ತಿದ್ದಾರಾ.. ಶಿವನೇ ಎನ್ನುವಂತೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ (ಅ 5ಕ್ಕೆ ಅನ್ವಯವಾಗುವಂತೆ) ಒಂದು ದಿನವೂ ರಜೆ ಹಾಕದೇ ನಮ್ಮ ಪ್ರಧಾನಮಂತ್ರಿಗಳು ಕೆಲಸ ಮಾಡಿದ್ದಾರೆ.

PM Modi always on duty: PMO response to RTI applicant

ಅಂದರೆ ಒಟ್ಟಾರೆಯಾಗಿ 860 (ಪಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು 26.05.2014ರಲ್ಲಿ) ದಿನ ಪ್ರಧಾನಿಗಳು ಸತತವಾಗಿ ಕೆಲಸ ಮಾಡಿದ್ದಾರೆ. ಆರ್ಟಿಐ ಅರ್ಜಿಗೆ ಉತ್ತರಿಸುತ್ತಾ ಪ್ರಧಾನಮಂತ್ರಿ ಕಾರ್ಯಾಲಯ ಈ ಮಾಹಿತಿ ನೀಡಿದೆ.

ಅರ್ಜಿದಾರ ಮೋದಿ ಜೊತೆ ಹಿಂದಿನ ಪ್ರಧಾನಿಗಳಾದ ವಾಜಪೇಯಿ, ಮನಮೋಹನ್ ಸಿಂಗ್, ದೇವೇಗೌಡ, ಐ ಕೆ ಗುಜ್ರಾಲ್, ಪಿ ವಿ ನರಸಿಂಹ ರಾವ್, ವಿ ಪಿ ಸಿಂಗ್, ಚಂದ್ರಶೇಖರ್ ಮತ್ತು ರಾಜೀವ್ ಗಾಂಧಿಯವರ ಬಗ್ಗೆಯೂ ಮಾಹಿತಿಯನ್ನು ಕೇಳಿದ್ದರು.

ಹಿಂದಿನ ಪ್ರಧಾನಿಗಳ ರೆಕಾರ್ಡ್ಸ್ ನಮ್ಮಲಿಲ್ಲ ಎಂದು ಪಿಎಂಓ, ಹಾಲೀ ಪ್ರಧಾನಿಯವರ ಮಾಹಿತಿಯನ್ನು ಮಾತ್ರ ನೀಡಿದೆ.

ಕೊನೇ ಮಾತು: ಪ್ರಧಾನಮಂತ್ರಿ ಕಾರ್ಯಶೈಲಿಯಿಂದ ಪ್ರೇರಣೆಗೊಂಡು, ಎಲ್ಲರೂ ಮೋದಿಯಂತೆ ರಜೆ ಹಾಕದೇ ಕೆಲಸ ಮಾಡಿ ಎಂದು ಅವರವರ ಸಂಸ್ಥೆಯ ಯಜಮಾನ ಫರ್ಮಾನು ಹೊರಡಿಸಿದರೆ? ಕಷ್ಟ.. ಕಷ್ಟ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No holiday for Narendra Modi: Prime Minister of India is always on duty, PMO's response to RTI applicant.
Please Wait while comments are loading...