ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕಿಸಾನ್: ಡಿಸೆಂಬರ್ 25ರಂದು ರೈತರಿಗೆ ಏಳನೇ ಕಂತು ಹಣ ಬಿಡುಗಡೆ: 18,000 ಕೋಟಿ ರೂ.

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಪಿಎಂ ಕಿಸಾನ್ ಸಮ್ಮನ್ ಯೋಜನೆಯಡಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರವು 6000 ರೂ. ಹಣವನ್ನು ಮೂರು ಕಂತುಗಳಲ್ಲಿ ನೀಡುತ್ತದೆ. ಈ ರೀತಿಯಾಗಿ ಪ್ರತಿ ಕಂತುಗಳಲ್ಲಿ ನೀಡುವ ಹಣವನ್ನು ಈ ಬಾರಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಜಮಾ ಮಾಡಲಿದ್ದು, ದಿನಾಂಕವನ್ನು ಘೋಷಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಕಂತಿನ ಹಣವನ್ನು ದೇಶಾದ್ಯಂತ ಕೋಟ್ಯಾಂತರ ಫಲಾನುಭವಿ ರೈತರಿಗೆ ಬಿಡುಗಡೆ ಮಾಡಲಿದ್ದಾರೆ. ಏಳನೇ ಕಂತುಗಾಗಿ ಕಾಯುತ್ತಿರುವ ಕೋಟ್ಯಂತರ ರೈತರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಿಸೆಂಬರ್ 25 ರಂದು ಪಿಎಂ ಮೋದಿ ಈ ಯೋಜನೆಯ ಆರ್ಥಿಕ ಲಾಭಗಳನ್ನು ನೀಡಲಿದ್ದಾರೆ.

ಭಾರತದ ಸರದಿ ಇನ್ನೂ ಯಾವಾಗ ಮೋದಿ ಜೀ?; ರಾಹುಲ್ ಗಾಂಧಿ ಟ್ವೀಟ್ಭಾರತದ ಸರದಿ ಇನ್ನೂ ಯಾವಾಗ ಮೋದಿ ಜೀ?; ರಾಹುಲ್ ಗಾಂಧಿ ಟ್ವೀಟ್

ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆಯು 30ನೇ ದಿನಕ್ಕೆ ಕಾಲಿಡುತ್ತಿದ್ದು, ಮತ್ತೊಂದೆಡೆ ರೈತರಿಗೆ ಹಣ ಜಮಾವಣೆಯಾಗುವುದಾಗಿ ಪ್ರಕಟಣೆಯಾಗಿದೆ. ಇದು ಪಿಎಂ ಕಿಸಾನ್ ಸಮ್ಮನ್ ನಿಧಿಯ ಏಳನೇ ಕಂತು ಆಗಿದ್ದು, ಈ ಹಿಂದೆ 12,000 ರೂಪಾಯಿಗಳನ್ನು 6 ಕಂತುಗಳ ರೂಪದಲ್ಲಿ ರೈತರ ಖಾತೆಗೆ ಕಳುಹಿಸಲಾಗಿದೆ.

PM KISAN 7th Instalment: Govt To Release Rs 18000 Crore On Dec 25

ಪಿಎಂಒ ನೀಡಿದ ಮಾಹಿತಿಯ ಪ್ರಕಾರ, ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ 9 ಕೋಟಿಗೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ 18,000 ಕೋಟಿ ರೂ. ಜಮಾ ಮಾಡಲಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ 6 ರಾಜ್ಯಗಳ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ. ರೈತ ಕಲ್ಯಾಣಕ್ಕಾಗಿ ಸರ್ಕಾರ ನಡೆಸುತ್ತಿರುವ ಇತರ ಯೋಜನೆಗಳ ಬಗ್ಗೆ ರೈತರು ತಮ್ಮ ಅನುಭವಗಳನ್ನು ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗಿಯಾಗಲಿದ್ದಾರೆ.

English summary
PM Narendra Modi will release the next installment of financial benefit amounting of Rs 18,000 Crore under PM Kisan samman Nidhi on Dec 25
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X