ನಾನಂತೂ ಯೋಗ ಮಾಡ್ತಾ ಇದ್ದೀನಿ, ನೀವು?

Written By:
Subscribe to Oneindia Kannada

ನವದೆಹಲಿ, ಜೂನ್ , 2೦: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ಪ್ರಪಂಚವೇ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಸಚಿವರು ದೇಶದ ವಿವಿಧೆಡೆ ಯೋಗ ದಿನದಲ್ಲಿ ಭಾಗವಹಿಸಲಿದ್ದಾರೆ.

ನರೇಂದ್ರ ಮೋದಿ ಈ ಸಾರಿ ಚಂಡೀಗಢದಲ್ಲಿ ಯೋಗಾಸನ ಮಾಡಲಿದ್ದಾರೆ. ಗೃಹ ಸಚಿವ ರಾಜನಾಥ ಸಿಂಗ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ದೇಶದ ವಿವಿಧೆಡೆ ಯೋಗ ದಿನದ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.[ಯೋಗಗುರು ಬಿಕೆಎಸ್ ಐಯ್ಯಂಗಾರ್‌ ಜೀವನ ಚಿತ್ರ]

yoga

2 ನೇ ಯೋಗ ದಿನಾಚರಣೆ
ವಿಶ್ವಸಂಸ್ಥೆ ಜೂನ್ 21 ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದ ಮೇಲೆ ಇದು ಎರಡನೇ ವರ್ಷದ ಆಚರಣೆ. ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಮೋದಿ ಯೋಗ ದಿನಕ್ಕೆ ಕಂಡುಬರುತ್ತಿರುವ ಉತ್ಸಾಹವನ್ನು ಕಂಡು ಸಂತಸವಾಗಿದೆ ಎಂದು ಹೇಳಿದ್ದಾರೆ.

ಪೂರ್ವಾಭ್ಯಾಸ
ಜೂ.21ರ೦ದು ನಡೆಯುವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ರಾಜಪಥ ಮತ್ತು ಚ೦ಡೀಗಢದಲ್ಲಿ ಭಾನುವಾರ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಸ೦ಜೆ ದೆಹಲಿಯ ರಾಜಪಥದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 35,000 ಜನ ಪಾಲ್ಗೊ೦ಡಿದ್ದರು. ಯೋಗಾಭ್ಯಾಸದ ಮು೦ದಾಳತ್ವವನ್ನು ಬಾಬಾ ರಾಮದೇವ್ ವಹಿಸಿಕೊ೦ಡಿದ್ದರು. ಕೇ೦ದ್ರ ಸಚಿವ ವೆ೦ಕಯ್ಯ ನಾಯ್ಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.[ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ ಯೋಗ]

-
-
-
-
-
-
-
-
-
-
-
-
-
-


ಹೊರದೇಶಗಳ್ಲೂ ಯೋಗಕ್ಕೆ ತಲೆಬಾಗಿದ ನಾಗರಿಕರು
ಅಮೆರಿಕ, ಇಂಗ್ಲೆಂಡ್ , ಬ್ರಸೆಲ್ಸ್, ಮೆಕ್ಸಿಕೋ, ಬೀಜಿ೦ಗ್, ತೈವಾನ್ ನಲ್ಲಿ ನಡೆದ ಯೋಗ ದಿನದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as 57 Union ministers will spread across the country on Tuesday for the 2nd International Yoga Day programmes, with Prime Minister Narendra Modi performing the ancient Indian physical exercise in Chandigarh. The Ministers will be leading various programmes hosted by the government across the country during the mega event, including ten of them concentrating in poll-bound Uttar Pradesh to participate in these events.
Please Wait while comments are loading...