46 ವರ್ಷ ಪೈಲಟ್ ಆಗಿ ತಂದೆ ಸೇವೆ, ಕೊನೆಯ ಹಾರಾಟದಲ್ಲಿ ಮಗಳ ಭಾವುಕ ವಿದಾಯ! Viral

ಸುಮಾರು ನಾಲ್ಕೂವರೆ ದಶಕಗಳ ಕಾಲ ವಿಮಾನ ಸೇವೆಯಲ್ಲಿ ನಿರತರಾಗಿದ್ದ ಪೈಲಟ್ ಒಬ್ಬರಿಗೆ ಕೊನೆಯ ವಿಮಾನ ಹಾರಾಟದಲ್ಲಿ ಅವರಿಗೆ ಭಾವುಕ ವಿದಾಯ ಹೇಳಲಾಗಿದೆ. ಕ್ಯಾಪ್ಟನ್ ಸಂದೀಪ್ ಪುರಿ ಅನ್ನುವವರು ತಮ್ಮ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರು ಪೈಲಟ್ ಆಗಿದ್ದ ವಿಮಾನದ ಕೊನೆಯ ಹಾರಾಟವನ್ನು ಅವರ ಜೀವನದ ಅತ್ಯಂತ ಸ್ಮರಣೀಯವಾಗಿ ಮಾಡಲಾಗಿದ್ದು, ಈ ವಿಚಾರ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಕ್ಯಾಪ್ಟನ್ ಸಂದೀಪ್ ಪುರಿ 46 ವರ್ಷಗಳ ಕಾಲ ಆಕಾಶದಲ್ಲೇ ಸೇವೆ ನೀಡಿದ್ದಾರೆ. ಅಂದರೆ ಪೈಲಟ್ ಆಗಿ ಸಾವಿರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮುಟ್ಟಿಸಿದ್ದಾರೆ. ಇವರ ಪ್ರಯಾಣ ಮೊದಲಿಗೆ ಭಾರತೀಯ ವಾಯುಪಡೆಯಲ್ಲಿ ಪ್ರಾರಂಭವಾಯಿತು. ಅಲ್ಲೂ ಕೆಲ ಕಾಲ ಸೇವೆ ನೀಡಿದ ಬಳಿಕ ಅವರು ಇಂಡಿಗೋದಲ್ಲಿ ವಾಣಿಜ್ಯ ಪೈಲಟ್ ಆಗಿ ಸೇವೆಯನ್ನು ಮುಂದುವರೆಸಿದರು. ಇದೀಗ ಅವರು ಪೈಲಟ್ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರ ಕೊನೆಯ ವಿಮಾನ ಹಾರಾಟ ವೇಳೆ ಅವರಿಗೆ ಕೋ ಪೈಲಟ್ ಆಗಿ ಬಂದ ಅವರ ಮಗಳು ತಂದೆಗೆ ಭಾವುಕ ವಿದಾಯ ತಿಳಿಸಿದ್ದಾರೆ. ಇದಕ್ಕೆ ಪ್ರಯಾಣಿಕರು, ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Pilot Retires

ವಿಮಾನ ಟೇಕ್‌ ಆಫ್ ಮುನ್ನ ಮಗಳು ಘೋಷಣೆ

ಸದ್ಯ ಈ ವಿಷಯ ಸಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ಒಬ್ಬ ತಂದೆಯ ತ್ಯಾಗ, ಸೇವೆ ಅಸಾಧಾರಣವಾಗಿದೆ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಇದಕ್ಕು ಮೊದಲು ಕೊನೆಯ ವಿಮಾನ ಹಾರಾಟಕ್ಕೂ ಮುನ್ನ ಕೋ ಪೈಲಟ್ (ಮಗಳು) ತಂದೆಯ ಸುದೀರ್ಘ ಪೈಲಟ್ ಸೇವೆಯಲ್ಲಿ ಇದು ಅವರ ಕೊನೆಯ ಹಾರಾಟವಾಗಿದೆ. ಟೇಕ್ ಆಫ್ ಆಗುವ ಮೊದಲು ಮಗಳು ಈ ರೀತಿ ಘೊಷಿಸಿದರು. ಈ ಮೂಲಕ ತಮ್ಮ ತಂದೆಗೆ ಭಾವನಾತ್ಮಕ ಗೌರವ ಸಲ್ಲಿಸಿದರು.

"ನನ್ನ ತಂದೆ ಅನುಭವಿಸಿದ ಪ್ರತಿಯೊಂದು ಹೋರಾಟಕ್ಕೂ ನಾನು ವಂದಿಸುತ್ತೇನೆ ಎನ್ನುತ್ತಿದ್ದಂತೆ ಕ್ಯಾಬಿನ್ ನಲ್ಲಿ ಒಂದು ಕ್ಷಣ ಮೌನ ಆವರಿಸಿತು. ಬಳಿಕ ಪ್ರಯಾಣಿಕರು ಚಪ್ಪಾಳೆ ತಟ್ಟಿದರು. ಕೆಲವರ ಕಣ್ಣಾಲಿಯಲ್ಲಿ ನೀರು ಜಿನುಗಿತು.

ವೃತ್ತಿ ಜೀವನಕ್ಕೆ ಮಾತ್ರವೇ ಕೊನೆ ಇದೆ

ದಶಕಗಳ ಕಾಲ ತಂದೆಯ ಶಿಸ್ತು, ತ್ಯಾಗ, ಮನೆಯಿಂದ ಲೆಕ್ಕವಿಲ್ಲದಷ್ಟು ಗಂಟೆಗಳ ದೂರ ಪ್ರಯಾಣ. ಅವರ ಬದುಕೇ ದೊಡ್ಡ ಸಾಧನೆಯಾಗಿದೆ. ಅವರ ಸೇವೆಯ ನಂತರವು ಅವರ ಮುಂದಿನ ಪೀಳಿಗೆಯನ್ನು ವಿಮಾನ ಸೇವೆಯಲ್ಲಿ ತೊಡಗಿದೆ. ಇವರದ್ದು ಕೇವಲ ನಿವೃತ್ತಿಲ್ಲ. ವೃತ್ತಿ ಜೀವನಕ್ಕೆ ಕೊನೆ ಇದೆ. ಆದರೆ ಅವರ ಸಾಧನೆ, ಬಿರುದುಗಳಿಗೆ ಅಲ್ಲ ಎಂದು ಲಿಂಕ್ಡ್ ಇನ್‌ನಲ್ಲಿ ಅನೇಕರು ಪೋಸ್ಟ್‌ಗೆ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿಮ್ಮ ವೃತ್ತಿಜೀವನ ಅನೇಕರಿಗೆ ಸ್ಪೂರ್ತಿ

ನೀವು ನಿಮ್ಮ ಮಕ್ಕಳಿಗೆ ಅತ್ಯುತ್ತಮ ಮೌಲ್ಯಗಳನ್ನು ಕಲಿಸಿದ್ದೀರಿ. ಹೀಗಾಗಿ ನೀವು ನಿವೃತ್ತಿಯಾದರೂ ಶಾಶ್ವತವಾಗಿ ಹಾರುತ್ತಲೇ ಇರುತ್ತೀರಿ. ಜೀವನದಲ್ಲಿ ದೊಡ್ಡ ಯಶಸ್ಸು ನೀವು ಎಷ್ಟು ಎತ್ತರಕ್ಕೆ ಏರುತ್ತೀರಿ ಎಂಬುದರಲ್ಲ. ನಿಮ್ಮಿಂದಾಗಿ ಯಾರು ಏನಾಗುತ್ತಾರೆ. ಅವರ ಬದುಕು ಬದಲಾಯಿತಾ? ಎಂಬುದು ಮುಖ್ಯವಾಗಿರುತ್ತದೆ.️ ಒಂದು ವೃತ್ತಿಜೀವನವು ಸಾವಿರಾರು ಜನರಿಗೆ ಸ್ಫೂರ್ತಿ ನೀಡಬಹುದು. ಒಂದು ಪರಂಪರೆಯು ಪೀಳಿಗೆಗೆ ಸ್ಫೂರ್ತಿ ನೀಡಬಹುದು. ಪ್ರತಿ ಪೋಷಕರ ಕಠಿಣ ಪರಿಶ್ರಮವು ಅವರ ಮಕ್ಕಳ ಸುಂದರ, ಮೌಲ್ಯಯುತ ಜೀವನ ನಡೆಸಲು ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+