Video: 'ಮಹಿಳಾ ಶಕ್ತಿಗೆ ನಮಸ್ಕಾರ' ಎಂದ ನೆಟ್ಟಿಗರು; ಲೋಕಲ್ ರೈಲಿನಲ್ಲಿ ಮಹಿಳೆ ನೇತಾಡಿದ ವಿಡಿಯೋ ವೈರಲ್
ಮುಂಬೈ: ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ಮುಂಬೈ ಪೈಕಿ ಟ್ರಾಫಿಕ್ ದಟ್ಟಣೆ, ರಸ್ತೆ ಮೂಲಸೌಕರ್ಯ ಸಮಸ್ಯೆ ವಿಚಾರಕ್ಕೆ ಬಂದಾಗ ಬೆಂಗಳೂರು ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಮುಂಬೈ ನಗರದಲ್ಲಿ ಲೋಕಲ್ ಟ್ರೈನ್‌ನಲ್ಲಿ ಮಹಿಳೆ ನೇತಾಡಿಕೊಂಡು ಸಂಚಾರ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಮಹಾನಗರ ಸಾರಿಗೆ ಸೌಲಭ್ಯ, ಜನರು ನಿತ್ಯ ಪಡುತ್ತಿರುವ ಸಂಕಷ್ಟ, ಸಮಸ್ಯೆಗಳನ್ನು ಇದು ಬಿಂಬಿಸುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಮುಂಬೈನ ಜೀವನಾಡಿ ಎಂದೇ ಕರೆಯಲಾಗುವ ಲೋಕಲ್ ರೈಲು, ಜನಸಂದಣಿ ವಿಚಾರವಾಗಿ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದೆ. ಮಹಿಳೆಯೊಬ್ಬರು ಹೆಗಲಿಗೆ ಬ್ಯಾಗ್ ಹಾಕಿಕೊಂಡು ರೈಲಿನ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು ವಿಭಿನ್ನವಾಗಿ, ಮಿಶ್ರ ಪ್ರತಿಕ್ರಿಯೆ ಹೊರ ಹಾಕಿದ್ದಾರೆ. ವಿಡಿಯೋ ನೋಡುತ್ತಿದ್ದಂತೆ ಮುಂಬೈ ಮಧ್ಯಮ ವರ್ಗ, ಬಡ ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

'ಮಹಿಳಾ ಶಕ್ತಿಗೆ ನಮಸ್ಕಾರ' ಎಂದ ನೆಟ್ಟಿಗರು
ಮೇಲಿಂದ ಮೇಲೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ಖಾತೆಯಲ್ಲಿ @pallvika_ ಅನ್ನುವವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸುಮಾರು 1.70ಲಕ್ಷಕ್ಕು ಅಧಿಕ ವೀಕ್ಷಣೆ ಪಡೆದಿದೆ. 600ಕ್ಕು ಅಧಿಕ ಕಾಮೆಂಟ್‌ಗಳು ಬಂದಿವೆ. 'ಮಹಿಳಾ ಶಕ್ತಿಗೆ ನಮಸ್ಕಾರ' ನಂತಹ ಶೀರ್ಷಿಕೆಗಳು ಹಾಕಿದ್ದು, ಆನ್‌ಲೈನ್‌ನಲ್ಲಿ ಮಹಿಳೆ/ಪ್ರಯಾಣಿಕರ ಸುರಕ್ಷತೆ ಕುರಿತು ಚರ್ಚಿಸಲಾಗುತ್ತಿದೆ.
ಗಂಡಿನಂತೆ ಹೆಣ್ಣುಮಕ್ಕಳು ಸಹಿ ನಿತ್ಯ ಕೆಲಸಕ್ಕೆ ತೆರಳುತ್ತಾರೆ. ಆದರೆ ಇತರರಿಗಿಂತ ಈ ಮುಂಬೈ ಸಿಟಿ ರೈಲಿನಲ್ಲಿ ಓಡಾಡುವ ಮಹಿಳೆಯರ ಸವಾಲುಗಳು ಹೆಚ್ಚು ಎನ್ನಬಹುದು. ಕೆಲವು ಹಠಮಾರಿ ಮಹಿಳೆಯರು ರೈಲಿನ ಬಾಗಿಲಿನಲ್ಲಿ ಜೋತು ಬೀಳುವ ಸಾಹಸಕ್ಕೆ ಮುಂದಾಗುತ್ತಾರೆ. ಆದರೆ ಈ ನಡೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಸರ್ಕಾರ ಇಂತಹ ನಗರ ಸಾರಿಗೆ, ಮೂಲಸೌಕರ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ.
ನೆಟ್ಟಿಗರು ಹೇಳಿದ್ದೇನು?
ನೆಟ್ಟಿಗರು ವಿಡಿಯೋ ನೋಡಿ ' ಇದು ಮುಂಬೈ ಮಹಿಳೆಯರ ಸ್ಪಿರಿಟ್' ಎಂದು ಕರೆದಿದ್ದಾರೆ. ಕೆಲವರು 'ಮಹಿಳೆಯರಿಗೆ ನಮಸ್ಕಾರ' ಅಂತಲೂ ಹೇಳಿದ್ದಾರೆ. 'ಪ್ರಯಾಣಿಕರು ತಮ್ಮ ಜೀವಗಳನ್ನು ಪಣಕ್ಕಿಡುವ ದುಸ್ಸಾಹಸ ಮಾಡಬಾರದು'. ಇಂತಹ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ' ಎಂದು ಮೂರನೇಯವರು ತಿಳಿಸಿದ್ದಾರೆ.
ಮತ್ತೊಬ್ಬರು, 'ಇಂತಹ ಘಟನೆಗಳನ್ನು ಬೆಂಬಲಿಸುವ ಬದಲು ಎಚ್ಚರಿಕೆ, ಜಾಗೃತಿಯಿಂದ ಇರುವಂತೆ ತಿಳಿಸಬೇಕು. ಮುಂಬೈನ ರೈಲ್ವೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಅವಶ್ಯತೆ ಮೇಲೆ ಬೆಳಕು ಚೆಲ್ಲಬೇಕು. ಪ್ರಯಾಣಿಕರ ಸುರಕ್ಷಿತೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕು. ಈ ಬಗ್ಗೆ ಧ್ವನಿ ಎತ್ತಬೇಕು' ಎಂದು ಹೇಳಿದ್ದಾರೆ.
'ಒಂದು ರೈಲು ಹೋದರೆ ಇನ್ನೊಂದು ರೈಲು ಹತ್ತಬಹುದು, ಆದರೆ ಜೀವ ಹೋದರೆ ಮತ್ತೆ ನಮಗೆ ಜೀವ ಸಿಗುವುದಿಲ್ಲ. ಜೀವ ಪಣಕ್ಕಿಟ್ಟು ಈ ರೀತಿಯ ರೈಲು ಏರಬೇಡಿ' ಎಂದು ಮತ್ತೊಬ್ಬ ಸಾಮಾಜಿಕ ಬಳಕೆದಾರ ಸಾಮಾಜಿಕ ಕಳಕಳಿಯ ಮಾತುಗಳನ್ನಾಡಿದ್ದಾರೆ. ಲಕ್ಷಾಂತರ ಮುಂಬೈ ನಿವಾಸಿಗಳಿಗೆ, ಸ್ಥಳೀಯ ರೈಲುಗಳು ದೈನಂದಿನ ಜೀವನದ ಭಾಗವಾಗಿವೆ. ಕೆಲಸ, ಶಿಕ್ಷಣ ಮತ್ತು ಇತರ ಕಾರಣಗಳಿಗಾಗಿ ನಿತ್ಯ ಸಾವಿರಾರು ವಲಸಿಗರು ಒಂದು ಕಡೆಯಿಂತೆ ಬೇರೆ ಕಡೆಗೆ ತುಂಬಿದ ರೈಲುಗಳಲ್ಲಿ ಹೀಗೆ ಸಾಗುತ್ತಾರೆ. ಈ ಕಾರಣದಿಂದಲೇ ಮುಂಬೈ ಮತ್ತೆ ಸುದ್ದಿಯಲ್ಲಿದೆ.
नारी शक्ति को नमन 🙏🏻 pic.twitter.com/YGG6BM8h9M
— pallavi (@pallvika_) August 23, 2026


Click it and Unblock the Notifications
