• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬ್ಬಾ... ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!

By ವಿಕಾಸ್ ನಂಜಪ್ಪ
|

ಇಸ್ಲಾಂ ಪ್ರಭುಗಳು ಏನೇನು ಹೇಳಿಕೆ ನೀಡುತ್ತಾರೆ? ಕಾನೂನು ಮಾಡುತ್ತಾರೆ ಎಂಬದಕ್ಕೆ ಅರ್ಥ ಹುಡುಕಲು ಸಾಧ್ಯವಿಲ್ಲ. ಮಹಿಳೆಯರು ಜೀನ್ಸ್ ಧರಿಸಿದರೆ ಭೂಕಂಪ ಸಂಭವಿಸುತ್ತದೆ. ಪುರುಷರ ಅಂಗಸೌಷ್ಠವ ಅರಿಯಲು, ಗಂಡಸರನ್ನು ಮೀರಿಸಲು ಮಹಿಳೆಯರು ಫುಟ್ ಬಾಲ್ ಪಂದ್ಯ ವೀಕ್ಷಣೆ ಮಾಡುತ್ತಾರೆ. ಈ ರೀತಿಯ 'ಮಹಾನ್' ಹೇಳಿಕೆಗಳನ್ನು ಕೇಳಿ ಆಗಿದೆ. ಈಗ ಇಸ್ಲಾಂ ಪ್ರಭುಗಳ ದೃಷ್ಟಿ ನೆಟ್ಟಿರುವುದು ಪಾರಿವಾಳಗಳ ಮೇಲೆ.

ಇಂಥ ಬುದ್ಧಿಹೀನ ಪಟ್ಟಿಗೆ ಈಗ ಹೊಸದೊಂದು ಹೇಳಿಕೆ ಸೇರ್ಪಡೆಯಾಗಿದೆ. ಪಾರಿವಾಳಗಳನ್ನು ನಿಷೇಧ ಮಾಡಬೇಕಂತೆ. ಅರೇ, ಈ ಬಡಪಾಯಿ ಪಕ್ಷಿ ಏನು ಮಾಡಿತು ಅಂದುಕೊಂಡಿರಾ? ಭಾರತಕ್ಕೆ ಕದ್ದು ಗೂಢಚರ್ಯ ಮಾಡಲು ಪಾರಿವಾಳ ಬಿಟ್ಟಿದ್ದಕ್ಕೆ ಇಸ್ಲಾಂ ಪ್ರಭುಗಳಿಗೆ ಜ್ಞಾನೋದಯವಾಯಿತು ಅಂದುಕೊಳ್ಳಬೇಡಿ. ಕತೆ ಬೇರೆಯೇ ಇದೆ.[ಭೂಕಂಪದ ಅಸಲಿ ಕಾರಣ ಪತ್ತೆ ಹಚ್ಚಿದ ಮೌಲಾನಾ!]

ಪಾರಿವಾಳಗಳು ಹಾರಾಟ ಮಾಡುವಾಗ ಅವುಗಳ ಜನನಾಂಗ ಕಣ್ಣಿಗೆ ಬೀಳುತ್ತದೆ. ಇದು ಇಸ್ಲಾಂಗೆ ವಿರುದ್ಧವಾಗಿದ್ದು ಪಾರಿವಾಳಗಳನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂಬುದು ಅವರ ತತ್ವ. ಇರಾಕ್ ಮತ್ತು ಸಿರಿಯಾದಲ್ಲಿ ಪಾರಿವಾಳಗಳ ಹಾರಾಟ ಅಪರಾಧವಾಗಿದೆ!

ಕಳೆದ ಎರಡು ವಾರಗಳಲ್ಲಿ ಇಂಥ ಅನೇಕ ಹೇಳಿಕೆಗಳು ಜಾರಿ ಬರುತ್ತಲೇ ಇವೆ. ಇದಕ್ಕೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಕ್ಕಿಂತ ನಕ್ಕು ಸುಮ್ಮನಾಗುವುದು ಮೇಲು. ಈ ಹೇಳಿಕೆಗಳ ವ್ಯಾಖ್ಯಾನ ಮಾಡಿ ಎಂದು ಕೇಳುವ ಗೋಜಿಗೂ ಹೋಗಬಾರದು.

ಪಾರಿವಾಳಗಳ ಜನನಾಂಗ ಇಸ್ಲಾಂಗೆ ವಿರುದ್ಧ

ಪಾರಿವಾಳಗಳ ಜನನಾಂಗ ಇಸ್ಲಾಂಗೆ ವಿರುದ್ಧ

ಐಎಸ್ ಐಎಸ್ ಸಂಘಟನೆಯ ಸುಪರ್ದಿಯಲ್ಲಿರುವ ಇರಾಕ್ ಮತ್ತು ಸಿರಿಯಾ ಭಾಗದಲ್ಲಿ ಪಾರಿವಾಳಗಳ ಹಾರಾಟ ನಿಷೇಧ ಮಾಡಲು ಪಟ್ಟಭದ್ರರು ಆದೇಶ ಹೊರಡಿಸಿದ್ದಾರೆ . ಪಾರಿವಾಳ ಸಾಕಾಣಿಕೆ ಮಾಡುತ್ತಿದ್ದ 15 ಯುವಕರನ್ನು ಸಂಘಟನೆ ಚಿತ್ರಹಿಂಸೆಗೂ ಗುರಿಮಾಡಿತ್ತು.

ಕಳ್ಳಸಾಗಣೆ ಸತ್ಯವೇ?

ಕಳ್ಳಸಾಗಣೆ ಸತ್ಯವೇ?

ಪಾರಿವಾಳಗಳ ಹಾರಾಟ ಜನರಿಗೆ ಅಡ್ಡಿ ಉಂಟುಮಾಡುತ್ತದೆ ಎಂಬ ಅರ್ಥವಿಲ್ಲದ ಕಾರಣವನ್ನು ಜೀಹಾದಿಗಳು ನೀಡಿದ್ದಾರೆ. ಅಮಲು ಪದಾರ್ಥಗಳ ಕಳ್ಳ ಸಾಗಾಟದಲ್ಲಿ ಪಾರಿವಾಳ ಬಳಸಿಕೊಳ್ಳಲಾಗುತ್ತದೆ ಎಂಬ ಆರೋಪವಿದ್ದರೂ ಅದರ ಪ್ರಮಾಣ ತುಂಬಾ ಕಡಿಮೆ.

ಭೂಕಂಪದ ಕಾರಣ ಪತ್ತೆ

ಭೂಕಂಪದ ಕಾರಣ ಪತ್ತೆ

ಪಾಕಿಸ್ತಾನದ ಜಾಮಾತೆ ಉಲೆಮಾ -ಇ- ಇಸ್ಲಾಮಿ ಫಜ್ಲ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹ್ಮಾನ್ ಭೂ ಕಂಪದ ಕಾರಣ ಪತ್ತೆಹಚ್ಚಿದ್ದರು. ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸುವುದರಿಂದ ಭೂಕಂಪ, ಹಣದುಬ್ಬರ ಸೇರಿದಂತೆ ಅನೇಕ ಅನಾಹುತಗಳು ಸಂಭವಿಸುತ್ತಿದೆ. ಇಂಥ ಮಹಿಳೆಯರನ್ನು ಹುಡುಕಿ ಕೊಲ್ಲಬೇಕು, ಸೈನಿಕ ಕಾರ್ಯಾಚರಣೆಯಲ್ಲಿ ಎಲ್ಲರನ್ನು ಮುಗಿಸಬೇಕು ಎಂದು ಹೇಳಿಕೆ ನೀಡಿ ಜಗತ್ತಿನಲ್ಲಿ ನಗೆಪಾಟಲಿಗೆ ಗುರಿಯಾಗಿದ್ದರು.

ಮಹಿಳೆಯರು ಫುಟ್ ಬಾಲ್ ನೋಡಲ್ಲ!

ಮಹಿಳೆಯರು ಫುಟ್ ಬಾಲ್ ನೋಡಲ್ಲ!

ಸೌದಿ ಅರೇಬಿಯಾದ ಮಹಿಳೆಯರು ಫುಟ್ ಬಾಲ್ ಪಂದ್ಯ ವೀಕ್ಷಿಸುವುದು ಬೇರೆಯದೇ ಕಾರಣಕ್ಕಂತೆ. ಅವರಿಗೆ ಪಂದ್ಯದ ಮೇಲೆ ಯಾವುದೇ ಆಸಕ್ತಿ ಇರಲ್ಲ. ಪುರುಷರ ಅಂಗಸೌಷ್ಠವ ನೋಡಲು ಪಂದ್ಯ ವೀಕ್ಷಣೆ ಮಾಡುತ್ತಾರಂತೆ. ಹೆಚ್ಚಾಗಿ ಅವರ ದೃಷ್ಟಿ 'ಅಲ್ಲಿಯೇ' ಇರುತ್ತದೆಯಂತೆ.

ಗಂಡ ಹೆಂಡತಿ ಫುಟ್ ಬಾಲ್ ಪ್ರೀತಿ

ಗಂಡ ಹೆಂಡತಿ ಫುಟ್ ಬಾಲ್ ಪ್ರೀತಿ

ಸೌದಿ ಅರೆಬೀಯಾದ ಬಹುತೇಕ ದಂಪತಿಗಳು ಪುಟ್ಬಾಲ್ ಪ್ರೇಮಿಗಳು. ಇದಕ್ಕೆ ಕಾರಣ ಅವರ ಕಾಮನೆಗಳು! ಎಂಬುದು ಜೀಹಾದಿಗಳ ವಾದ. ಅವಿವಾಹಿತ ಮಹಿಳೆಯರಂತೂ ಪುಟ್ಬಾಲ್ ಪಂದ್ಯದ ಕಡೆ ಮುಖ ಹಾಕುವಂತೆ ಇಲ್ಲ. ಸಲ್ಲದ ಕಾರಣ ನೀಡಿ ಮಹಿಳೆಯರನ್ನು ಗುಲಾಮಗಿರಿಗೆ ತಳ್ಳುವುದು ಅಂದರೆ ಇದೇನಾ?

English summary
Women in tight jeans cause earthquakes. Women watch football games to stare at men's thighs. Stop breeding pigeons as their genitals offend Islam. Yes you heard it right and the first question that comes to mind is what were these men who said these golden words smoking when they actually said these words? The latest on the list of mindless fatwas has come from the dreaded ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X