ರಾಜಪಥದಲ್ಲಿ ದೇಶದ ಏಕತೆ, ಸಂಸ್ಕೃತಿ, ಶಕ್ತಿ ಅನಾವರಣ
ನವದೆಹಲಿ, ಜ.26: ಭಾರತದ ಗಣರಾಜ್ಯೋತ್ಸವ ದಿನದಂದು ರಾಜಪಥದಲ್ಲಿ 'ಶಕ್ತಿ' ಸಂಚಲನವಾಗಿದೆ. ದೇಶದ ವೈವಿಧ್ಯತೆಯಲ್ಲಿ ಏಕತೆ ಸಂಕೇತ ಸಾರುವ ವಿವಿಧ ಸ್ತಬ್ದ ಚಿತ್ರಗಳು, ದೇಶ ಕಾಯುವ ಯೋಧರ ಶಕ್ತಿ ಪ್ರದರ್ಶನ ಕಣ್ಮನ ಸೆಳೆದಿದೆ. ಇನ್ನೂ ಬಣ್ಣ ಬಣ್ಣ ದಿರಿಸು ತೊಟ್ಟು ನರ್ತಿಸುವ ಚಿಣ್ಣರನ್ನು ನೋಡುವುದೇ ಕಣ್ಣಿಗೆ ಹಬ್ಬ. 65ನೇ ಗಣತಂತ್ರ ದಿನಕ್ಕೆ ನವದೆಹಲಿ ಸೇರಿದಂತೆ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
65ನೇ ಗಣತಂತ್ರ ದಿನಾಚರಣೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ ಅಕಿ ಅಬೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಜಪಾನ್ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಮಾತುಕತೆಗೂ ಇದರ ಬೆನ್ನಲ್ಲೇ ಚಾಲನೆ ಸಿಗಲಿದೆ. ಪರೇಡ್ ನೋಡಲು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತರಿದ್ದಾರೆ.. ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದ್ದು, ದೆಹಲಿ ಐಜಿಐ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ಸ್ಟೇಷನ್, ಬಸ್ ಡಿಪೋ ಗಳಲ್ಲಿ ಕಮಾಂಡೋ ಪಡೆ ಗಸ್ತು ತಿರುಗುತ್ತಿದ್ದಾರೆ.
ಎಲ್ಲಾ ಭದ್ರತೆ, ಆತಂಕದ ನಡುವೆ ಕೊರೆಯುವ ಚಳಿಯಲ್ಲಿ ತಾಲೀಮು ನಡೆಸಿದ್ದ ದೇಶದ ವಿವಿಧೆಡೆಗಳಿಂದ ಬಂದಿರುವ ಶಾಲಾ ಮಕ್ಕಳು ಆಬಾಲವೃದ್ಧರಾದಿಯಾಗಿ ಎಲ್ಲರನ್ನು ರಂಜಿಸುತ್ತಾ ರಾಜಪಥದಲ್ಲಿ ಹೆಮ್ಮೆಯಿಂದ ಸಾಗಿದ್ದಾರೆ. ಗಣತಂತ್ರದಿನದ ಪಥ ಸಂಚಲನ, ಸ್ತಬ್ದ ಚಿತ್ರಗಳು, ಸಾಂಸ್ಕೃತಿಕ ನೃತ್ಯಗಳ ಚಿತ್ರ ದರ್ಶನ ನಿಮ್ಮ ಮುಂದಿದೆ.

65ನೇ ಗಣತಂತ್ರ ದಿನದಂದು ಆಕರ್ಷಕ ಪಥ ಸಂಚಲನ
ಭಾರತದ ಗಣರಾಜ್ಯೋತ್ಸವ ದಿನದಂದು ರಾಜಪಥದಲ್ಲಿ 'ಶಕ್ತಿ' ಸಂಚಲನ ಗಡಿ ಭದ್ರತಾ ಪಡೆಯಿಂದ ಆಕರ್ಷಕ ಪ್ರದರ್ಶನ

ರಾಜಪಥದಲ್ಲಿ ಉಪಗ್ರಹ ಟರ್ಮಿನಲ್
ದೆಹಲಿಯ ರಾಜಪಥದಲ್ಲಿ ಸಾಗುತ್ತಿರುವ Transportable Satellite Terminal

ರಾಜಪಥದಲ್ಲಿ ಬ್ರಹ್ಮೋಸ್ ಕ್ಷಿಪಣಿ ಅನಾವರಣ
ದೆಹಲಿಯ ರಾಜಪಥದಲ್ಲಿ ಸಾಗುತ್ತಿರುವ Brahmos WPN System

300 ಎಂಎಂ ಮಲ್ಟಿ ರಾಕೇಶ್ ಲಾಂಚರ್
Smerch 300 MM Multi Rocket Launcher System ಹೊತ್ತ ವಾಹನ ರಾಜಪಥದಲ್ಲಿ ಸಾಗಿದ್ದು ಹೀಗೆ

OSA- AK ಅಯುಧ ವ್ಯವಸ್ಥೆ ಅನಾವರಣ
ಗಣತಂತ್ರದಿನದಂದು ರಾಜಪಥದಲ್ಲಿ ಸಾಗಿದ OSA- AK ಅಯುಧ ವ್ಯವಸ್ಥೆ ಹೊತ್ತ ವಾಹನ

ಭಾರತೀಯ ವಾಯುಸೇನೆಯ ಸ್ತಬ್ದಚಿತ್ರ
ಗಣತಂತ್ರದಿನದಂದು ರಾಜಪಥದಲ್ಲಿ ಸಾಗಿದ ಭಾರತೀಯ ವಾಯುಸೇನೆಯ ಸ್ತಬ್ದಚಿತ್ರ

ಭಾರತೀಯ ಜಲಸೇನೆಯ ಸ್ತಬ್ದಚಿತ್ರ
ಗಣತಂತ್ರದಿನದಂದು ರಾಜಪಥದಲ್ಲಿ ಸಾಗಿದ ಭಾರತೀಯ ಜಲಸೇನೆಯ ಸ್ತಬ್ದಚಿತ್ರ

ಡಿಆರ್ ಡಿಒ ಸಂಸ್ಥೆಯ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ಡಿಆರ್ ಡಿಒ ಸಂಸ್ಥೆಯ ಸ್ತಬ್ದಚಿತ್ರ

ರಕ್ಷಣಾ ಇಲಾಖೆಯ ಸುಂದರ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ರಕ್ಷಣಾ ಇಲಾಖೆಯ ಸುಂದರ ಸ್ತಬ್ದಚಿತ್ರ

ಐಟಿಬಿಪಿ ಸಂಸ್ಥೆ ಆಕರ್ಷಕ ಪಥಸಂಚಲನ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ಐಟಿಬಿಪಿ ಸಂಸ್ಥೆ ಆಕರ್ಷಕ ಪಥಸಂಚಲನ

ಕೋಸ್ಟಲ್ ಗಾರ್ಡ್ ಯೋಧರಿಂದ ಪಥ ಸಂಚಲನ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ಕೋಸ್ಟಲ್ ಗಾರ್ಡ್ ಯೋಧರಿಂದ ಪಥ ಸಂಚಲನ

ಸಿಆರ್ ಪಿಎಫ್ ಸಿಬ್ಬಂದಿಯಿಂದ ಪಥಸಂಚಲನ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ಸಿಆರ್ ಪಿಎಫ್ ಸಿಬ್ಬಂದಿಯಿಂದ ಪಥಸಂಚಲನ

ಎನ್ ಸಿಸಿ ತಂಡದಿಂದ ಪಥ ಸಂಚಲನ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಎನ್ ಸಿಸಿ ತಂಡದಿಂದ ಪಥ ಸಂಚಲನ

ಉತ್ತರ ಪ್ರದೇಶ ರಾಜ್ಯದ ಆಕರ್ಷಕ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸಾಗಿದ ಉತ್ತರ ಪ್ರದೇಶ ರಾಜ್ಯದ ಆಕರ್ಷಕ ಸ್ತಬ್ದಚಿತ್ರ ಶಹನಾಯಿ ವಾದನದ ಅನಾವರಣ

ಕೋಸ್ಟಲ್ ಗಾರ್ಡ್ ಯೋಧರಿಂದ ಪಥ ಸಂಚಲನ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಗುಡ್ದಗಾಡಿನ ರಾಜ್ಯ ಮೇಘಾಲಯದ ಸ್ತಬ್ದಚಿತ್ರ

ಅರುಣಾಚಲ ಪ್ರದೇಶ ರಾಜ್ಯದ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಅರುಣಾಚಲ ಪ್ರದೇಶ ರಾಜ್ಯದ ಸಾಂಸ್ಕೃತಿಕತೆ ಬಿಂಬಿಸುವ ಸ್ತಬ್ದಚಿತ್ರ

ಉತ್ತರಾಖಂಡ್ ರಾಜ್ಯದ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಸುಂದರ ಹೂಗಳು, ಗುಡ್ದಗಾಡಿನ ಪ್ರದೇಶ ಹೊಂದಿರುವ ಉತ್ತರಾಖಂಡ್ ರಾಜ್ಯದ ಸ್ತಬ್ದಚಿತ್ರ

ಮಹಾರಾಷ್ಟ್ರ ರಾಜ್ಯದ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಮಹಾರಾಷ್ಟ್ರ ರಾಜ್ಯದ ಕರಾವಳಿ ಬದುಕಿನ ಚಿತ್ರಣ ನೀಡುವ ಸ್ತಬ್ದಚಿತ್ರ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ತಬ್ದಚಿತ್ರ
ಗಣತಂತ್ರದಿನದ ಅಂಗವಾಗಿ ರಾಜಪಥದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬೌದ್ಧ ಸ್ತೂಪ, ಜನತೆಯ ಸಾಮರಸ್ಯದ ಚಿತ್ರಣ ನೀಡುವ ಸ್ತಬ್ದಚಿತ್ರ

ರಾಜಸ್ಥಾನ ರಾಜ್ಯದ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ರಾಜಸ್ಥಾನ ರಾಜ್ಯದ ಕಲೆಯ ಅನಾವರಣ

ಕರ್ನಾಟಕದ ಟಿಪ್ಪು ಸುಲ್ತಾನ್ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಕರ್ನಾಟಕ ರಾಜ್ಯದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಅಪ್ರತಿಮ ದೇಶಭಕ್ತ ಎಂಬು ಬಿಂಬಿಸುವ ಸ್ತಬ್ದಚಿತ್ರ

ಚತ್ತೀಸ್ ಗಢ ರಾಜ್ಯದ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಚತ್ತೀಸ್ ಗಢ ರಾಜ್ಯದ ಬುಡಕಟ್ಟು ಜನಾಂಗದ ಜನ ಜೀವನ ಚಿತ್ರಣ ನೀಡುವ ಸ್ತಬ್ದಚಿತ್ರ

ಪಶ್ಚಿಮ ಬಂಗಾಳ ರಾಜ್ಯ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ದೇವತೆ ಕಾಳಿ ಮಾತೆಯ ಚಿತ್ರವುಳ್ಳ ಸ್ತಬ್ದಚಿತ್ರ

ತಮಿಳುನಾಡು ರಾಜ್ಯದ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ತಮಿಳುನಾಡಿನ ಸ್ತಬ್ದಚಿತ್ರದಲ್ಲಿ ಪೊಂಗಲ್ ಸಂಭ್ರಮ ಪ್ರದರ್ಶನ

ಅಸ್ಸಾಂ ರಾಜ್ಯದ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಅಸ್ಸಾಂ ರಾಜ್ಯದ ಸ್ತಬ್ದಚಿತ್ರದಲ್ಲಿ ಜನಪ್ರಿಯ ಜಾನಪದ ಗಾಯಕ ಭೂಪೇನ್ ಹಜಾರಿಕಾ ಚಿತ್ರ

ಚಂದೀಗಢ ರಾಜ್ಯದ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಚಂದೀಗಢ ರಾಜ್ಯದ ಕಲೆಯ ಅನಾವರಣ ತೋರಿಸುವ ಸ್ತಬ್ದಚಿತ್ರ

ಭಾರತೀಯ ರೈಲ್ವೆ ಇಲಾಖೆ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಸುರಂಗದೊಡನೆ ಸಾಗಿದ ಭಾರತೀಯ ರೈಲ್ವೆ ಇಲಾಖೆ ಸ್ತಬ್ದಚಿತ್ರ

ಕೃಷಿ ಇಲಾಖೆ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಕೃಷಿ ಇಲಾಖೆ ಸ್ತಬ್ದಚಿತ್ರ

ಭೂ ವಿಜ್ಞಾನ ಇಲಾಖೆ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಭೂ ವಿಜ್ಞಾನ ಇಲಾಖೆ ಸ್ತಬ್ದಚಿತ್ರ

ಜನಜಾತೀಯ ಕಾರ್ಯ ಸಚಿವಾಲಯ ಸ್ತಬ್ದಚಿತ್ರ
ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಾಜಪಥದಲ್ಲಿ ಬುಡಕಟ್ಟು ಜನಾಂಗ ಜನಜಾತೀಯ ಕಾರ್ಯ ಸಚಿವಾಲಯ ಸ್ತಬ್ದಚಿತ್ರ
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications