ಚಿತ್ರ ಸಂಪುಟ: ಶನಿವಾರದ ಚೂರುಪಾರು ಸುದ್ದಿಗಳ ಸಂಕ್ಷಿಪ್ತ ಮಾಹಿತಿ

ಶನಿವಾರದ ಸುದ್ದಿಗಳಲ್ಲಿ ಮಿಸ್ ಆದ ಕೆಲವಾರು ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ. ಚಿತ್ರ ಸಹಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶನಿವಾರದ ಸುದ್ದಿ ಸಂತೆಯಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಮಧ್ಯಪ್ರದೇಶದ ರೈತರ ಪ್ರತಿಭಟನೆ, ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಅನ್ನ ಸತ್ಯಾಗ್ರಹಕ್ಕೆ ಕೂತಿದ್ದು ಸುದ್ದಿಯಾದವು.

ಇಲ್ಲಿ ರಾಜ್ಯದಲ್ಲಿ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಅವರು ಜೂನ್ 12ರಂದು ಕರೆಕೊಟ್ಟಿದ್ದ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ವಿರೋಧ ವ್ಯಕ್ತಪಡಿಸಿದ್ದು ಕೊಂಚ ಮಟ್ಟಿಗೆ ಸುದ್ದಿಯಾಯಿತು. ಅದಕ್ಕೆ ಹೋಲಿಸಿದರೆ ಕೊಂಚ ಸದ್ದು ಮಾಡಿದ್ದು ನಟಿ ಪಂಚಮಿ ಹಾಗೂ ಅನ್ಸಾರಿ ಪ್ರೇಮ ಪ್ರಕರಣವನ್ನು ಮಾಧ್ಯಮವೊಂದು ವರದಿ ಮಾಡಿದ್ದು.

ಇನ್ನುಳಿದಂತೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಂಥಾ ಮಹತ್ವದ ಸುದ್ದಿಗಳೇನಿರಲಿಲ್ಲ. ಅನಿಲ್ ಕುಂಬ್ಳೆ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂಬುದು, ಜೂನ್ 11ರಂದು ನಡೆಯಲಿರುವ ಭಾರತ- ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಮುನ್ನೋಟ, ಬದ್ರಿನಾಥ್ ನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಂಜಿನಿಯರ್ ಸಾವನ್ನಪ್ಪಿದ್ದು ಸುದ್ದಿಯಾಯಿತು.

ಇನ್ನುಳಿದಂತೆ, ಕೆಲವಾರು ಚೂರು ಪಾರು ಸುದ್ದಿ, ಮಾಹಿತಿಗಳ ಬಗೆಗಿನ ಚಿತ್ರ ಸಹಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಡ್ಯಾಮೇಜ್ ಕಂಟ್ರೋಲ್ ಕಸರತ್ತು?

ಡ್ಯಾಮೇಜ್ ಕಂಟ್ರೋಲ್ ಕಸರತ್ತು?

ಮಧ್ಯಪ್ರದೇಶದ ಮಂದಸೌರ್ ಗ್ರಾಮದಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾನ್ ಅವರು, ಮಂದಸೌರ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಕಾಮಾಕ್ಯ ದೇಗುಲ ದರ್ಶನ

ಕಾಮಾಕ್ಯ ದೇಗುಲ ದರ್ಶನ

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಗುವಾಹಟಿಯ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಚಿತ್ರೀಕರಣದಲ್ಲಿ ನೇಹಾ-ಪರಿಣಿತಿ

ಚಿತ್ರೀಕರಣದಲ್ಲಿ ನೇಹಾ-ಪರಿಣಿತಿ

ಬಾಲಿವುಡ್ ನಟಿಯರಾದ ಪರಿಣಿತಿ ಚೋಪ್ರಾ ಹಾಗೂ ನೇಹಾ ಧೂಪಿಯಾ ಅವರು ನೇಹಾ ಧೂಪಿಯಾ ನಡೆಸಿಕೊಡುವ ನೋ ಫಿಲ್ಟರ್ ನೇಹಾ ಸೀಸನ್ 2 ಎಂಬ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಯೋಗ ದಿನಾಚರಣೆಯ ತಯಾರಿ

ಯೋಗ ದಿನಾಚರಣೆಯ ತಯಾರಿ

ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಕಲಾವಿದನೊಬ್ಬ ಯೋಗ ಚಿತ್ರಗಳನ್ನು ರಚಿಸುತ್ತಿರುವುದು.

ಸ್ವಚ್ಛ ಶೌಚ ಅಭಿಯಾನದಲ್ಲಿ ಭಾಗಿ

ಸ್ವಚ್ಛ ಶೌಚ ಅಭಿಯಾನದಲ್ಲಿ ಭಾಗಿ

ಬಾಲಿವುಡ್ ನಟ ಸಲ್ಮಾನ್ ಖಾನ್, ಮುಂಬೈ ಮಹಾ ನಗರ ಪಾಲಿಕೆಯ ಸ್ವಚ್ಛ ಶೌಚ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+