ಶನಿವಾರ ಸಂಜೆ ವೇಳೆಗೆ ಸುದ್ದಿ ಚಿತ್ರಗಳ ಸಂತೆಯಲ್ಲಿ..

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 27: ಒಂದು ದಿನದಲ್ಲಿ ಏನೆಲ್ಲ ಆಗುತ್ತದೆ. ಬಿಹಾರದ ರಾಜ್ ಗಿರ್ ನಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಳಂದ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಮಾಡಿದರೆ, ಸಚಿನ್ ತೆಂಡೂಲ್ಕರ್ ಬೆಂಗಳೂರಿನಲ್ಲಿ ಆಸ್ಪತ್ರೆ ಉದ್ಘಾಟಿಸಿದರೆ, ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಂಡಿರುತ್ತಾರೆ. ಮುಂಬೈಯಲ್ಲಿ ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.

ಈ ಎಲ್ಲ ಘಟನೆಗಳು ಶನಿವಾರವೇ ನಡೆದಿವೆ. ಇದರ ಜತೆಗೆ ಬೇರೆ ದೇಶದಲ್ಲಿ ನಡೆದ ಘಟನೆಗಳನ್ನೂ ಒಟ್ಟು ಮಾಡಿ, ಕಣ್ಣೆದುರಿನ ಚಿತ್ರವಾಗಿರಿಸಿದ್ದೀವಿ. ಒಪ್ಪಿಸಿಕೊಳ್ಳಿ.

ಸುಮ್ನಿರಿ, ಸಚಿನ್ ಮಾತಾಡ್ತಿದಾರೆ..

ಸುಮ್ನಿರಿ, ಸಚಿನ್ ಮಾತಾಡ್ತಿದಾರೆ..

ಮೈದಾನದಲ್ಲಿ ಸಚಿನ್ ಕ್ರಿಕೆಟ್ ಆಡುವ ಅಷ್ಟೂ ಹೊತ್ತು ಕೇಕೆ, ಖುಷಿ, ಉತ್ಸಾಹ ಎಲ್ಲ ಕೇಳಿಬರುತ್ತಿತ್ತು. ಬೆಂಗಳೂರಿಗೆ ಶನಿವಾರ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಬಂದಾಗ ಸಚಿನ್ ಮಾತನಾಡ್ತಿದ್ದಾರೆ. ಯಾರೋ ಮಾತನಾಡಿದ್ದಕ್ಕೆ ಈ ಹೆಣ್ಣುಮಗಳು ಹೇಗೆ 'ಸುಮ್ನಿರಿ' ಹೇಳ್ತಿದ್ದಾರೆ.

ತುಂಬಾ ಚೆನ್ಣಾಗಿದೆ ಅಲ್ವಾ..

ತುಂಬಾ ಚೆನ್ಣಾಗಿದೆ ಅಲ್ವಾ..

ಬಿಹಾರದ ರಾಜ್ ಗಿರ್ ಗೆ ನಳಂದ ವಿಶ್ವವಿದ್ಯಾಲಯದ ಶಂಕುಸ್ಥಾಪನೆಗೆ ತೆರಳಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ವಿ.ವಿ. ಹೇಗೆ ಕಾಣಬಹುದು ಎಂಬುದನ್ನು ಕುತೂಹಲದಿಂದ ನೋಡ್ತಿದ್ದಾರೆ.

ಕೋಳಿ..ಕೋಳಿ

ಕೋಳಿ..ಕೋಳಿ

ಈಶಾನ್ಯ ಭಾರತದ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ದಿನವಿಡೀ ನಡೆಯಿತು. ಹೆಂಗೆ ಡ್ಯಾನ್ಸ್ ಮಾಡ್ತಿದಾರೆ ನೋಡ್ರಿ...

ಅಮಿತ ಉತ್ಸಾಹ

ಅಮಿತ ಉತ್ಸಾಹ

ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಸಭೆಗೆ ಚಾಲನೆ ನೀಡಿದ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

ಬೆಳ್ಳಿ ಮೂಡಿತೋ

ಬೆಳ್ಳಿ ಮೂಡಿತೋ

ಹೈದರಾಬಾದ್ ನಲ್ಲಿರುವ ಅಕ್ಕಣ್ಣ ಮದ್ದಣ್ಣ ಮಹಾಕಾಳಿ ದೇವಸ್ಥಾನದಲ್ಲಿ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಸಿಂಧು ಪೂಜೆ ಸಲ್ಲಿಸಿದ್ದು ಹೀಗೆ.

ಏನ್ ಚಂದ ಕಾಣ್ತೀಯಲ್ಲೇ..

ಏನ್ ಚಂದ ಕಾಣ್ತೀಯಲ್ಲೇ..

ಮುಂಬೈಯಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬೆಡಗು.

 ಇವರು ನಮ್ಮೋರು, ಕೋಲಾರದವರು

ಇವರು ನಮ್ಮೋರು, ಕೋಲಾರದವರು

ಫಿಲಿಪಿನ್ಸ್ ನ ಮನಿಲಾದಲ್ಲಿ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ವಿಜೇತರು, ನಮ್ಮ ಕೋಲಾರದ ಬೆಜವಾಡ ವಿಲ್ಸನ್ ಇದ್ದಾರಲ್ಲ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every day so many events happening in the nation. We picked some of the events and presented to you, please accept.
Please Wait while comments are loading...