ಜನರ ಜೀವ ಕಸಿಯುತ್ತಿದೆ ಜಮ್ಮು-ಕಾಶ್ಮೀರದ ಹಿಮ ಕುಸಿತ!

Posted By:
Subscribe to Oneindia Kannada

ಇಡೀ ಉತ್ತರ ಭಾರತದಲ್ಲಿ ಮಂಜಿನ ಹೊಡೆತ. ಅದರಲ್ಲೂ ಜಮ್ಮು-ಕಾಶ್ಮೀರದಲ್ಲಿ ಸ್ಥಿತಿ ಭಯಾನಕವಾಗಿದೆ. ಭಾರತೀಯೆ ಸೇನೆಯ ಯೋಧರು ಹಿಮಕುಸಿತದಿಂದ ಹುತಾತ್ಮರಾಗಿದ್ದಾರೆ. ಒಟ್ಟಾರೆ ಕಣಿವೆ ರಾಜ್ಯದಲ್ಲಿ ಎಲ್ಲೆಲ್ಲೂ ಹತ್ತಿ ಚೆಲ್ಲಿದಂತೆ ಕಾಣುವ ಬಿಳಿಬಿಳಿ ಹಿಮ. ಮರ-ಗಿಡ, ಬೆಟ್ಟ ಸಾಲುಗಳ ಮೇಲೆ ಮೈ ತುಂಬ ಬಟ್ಟೆ ಹಾಕಿದರೂ ನಡುಗುತ್ತಾ ಸಾಗುವ ಜನರು ವಿರಳವಾಗಿ ಕಾಣಸಿಗುತ್ತಾರೆ.

ಸಂಚಾರ, ಜನಜೀವನ, ಪ್ರವಾಸೋದ್ಯಮ, ನಿತ್ಯ ಬದುಕು ಎಲ್ಲಕ್ಕೂ ಹೊಡೆತ ಬಿದ್ದಿದೆ. ಹಿಮಪಾತ ದಿನದ ಸಹಜ ವಿದ್ಯಮಾನ ಎಂಬಂತಾಗಿದೆ. ಇದರ ಜೊತೆಗೆ ಹಿಮಕುಸಿತ ಜೀವಾಂತಕವಾಗಿದೆ. ಜತೆಗೆ ಹಿಮಕುಸಿತದಿಂದ ಆಗುವ ತೊಂದರೆಗಳ ನಿವಾರಣೆಯಲ್ಲಿ ಭಾರತೀಯ ಯೋಧರು ನಿರತರಾಗಿದ್ದಾರೆ.[ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ, ಜವಾನ ಸೇರಿ 5 ಸಾವು]

ಜೀವವನ್ನು ಪಣಕ್ಕಿಟ್ಟು ನಮ್ಮ ಯೋಧರು ಶ್ರಮಿಸುತ್ತಿದ್ದಾರೆ. ಇನ್ನು ಕಣಿವೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಹೇಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಒಂದಷ್ಟು ಚಿತ್ರಗಳು ಇಲ್ಲಿವೆ. ತಣ್ಣೀರಿನಲ್ಲಿ ಕೈ ಇಟ್ಟರೆ ಬೊಬ್ಬೆ ಹೊಡೆಯುವ ನಮ್ಮಂಥವರಿಗೆ ಈ ಚಿತ್ರಗಳನ್ನು ನೋಡುವುದಕ್ಕೆ ಹೊದಿಕೆ ಬೇಕಾಗಬಹುದೇನೋ![ಈ ಫೋಟೋ ತೆಗೆದ ಫೋಟೋಗ್ರಾಫರ್ ಗೆ ಒಂದು ಸಲಾಂ!]

ಗುಲ್ ಮಾರ್ಗ್ ನಲ್ಲಿ ಮಂಜು ತೆರವು

ಗುಲ್ ಮಾರ್ಗ್ ನಲ್ಲಿ ಮಂಜು ತೆರವು

ಜಮ್ಮು-ಕಾಶ್ಮೀರದ ಶ್ರೀನಗರ ಗುಲ್ ಮಾರ್ಗ್ ನಲ್ಲಿ ಸೇನೆಯ ಯೋಧರು ವಾಹನಗಳ ಆವರಿಸಿದ್ದ ಮಂಜನ್ನು ಶುಕ್ರವಾರ ತೆರವು ಮಾಡಿದರು.

ಹಿಮ ಕುಸಿತ

ಹಿಮ ಕುಸಿತ

ಜಮ್ಮು-ಕಾಶ್ಮೀರದ ಗುರೇಜ್ ವಲಯದಲ್ಲಿ ಹಿಮಕುಸಿತದ ಪರಿಣಾಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಪರಿಹಾರ ಕಾರ್ಯಾಚರಣೆ

ಪರಿಹಾರ ಕಾರ್ಯಾಚರಣೆ

ಹಿಮಕುಸಿತವಾದ ಜಮ್ಮು-ಕಾಶ್ಮೀರದ ಗುರೇಜ್ ವಲಯದಲ್ಲಿ ಸೈನಿಕರಿಂದ ಪರಿಹಾರ ಕಾರ್ಯಾಚರಣೆ ನಡೆಯಿತು.

ಪರಿಸ್ಥಿತಿ ಗಂಭೀರ

ಪರಿಸ್ಥಿತಿ ಗಂಭೀರ

ತೀವ್ರ ಹಿಮಕುಸಿತವಾದ ಜಮ್ಮು-ಕಾಶ್ಮೀರದ ಗುರೇಜ್ ವಲಯದ ಚಿತ್ರವಿದು.

ಯೋಧರ ಕಾರ್ಯಾಚರಣೆ

ಯೋಧರ ಕಾರ್ಯಾಚರಣೆ

ತೀವ್ರ ಹಿಮಕುಸಿತವಾದ ಜಮ್ಮು-ಕಾಶ್ಮೀರದ ಗುರೇಜ್ ವಲಯದಲ್ಲಿ ಭಾರತೀಯ ಸೇನೆ ಯೋಧರಿಂದ ಪರಿಹಾರ ಕಾರ್ಯಾಚರಣೆ ನಡೆಯಿತು.

ಮಂಜು ಅವರಿಸಿದ ಬೆಟ್ಟ

ಮಂಜು ಅವರಿಸಿದ ಬೆಟ್ಟ

ಶ್ರೀನಗರ ಹೊರವಲಯದಲ್ಲಿ ಮಂಜು ಅವರಿಸಿದ ಬೆಟ್ಟದ ಮೇಲೆ ನದೆದು ಹೋಗುತ್ತಿದ್ದ ಬಾಲಕ ಕಂಡು ಬಂದಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
PTI photo feature about Jammu and Kashmir Avalanche.
Please Wait while comments are loading...