• search

ಪ್ರಧಾನಿ ಮೋದಿ ಜನಪ್ರಿಯತೆ: PEW ಲೇಟೆಸ್ಟ್ ಸರ್ವೇ ಫಲಿತಾಂಶ ಪ್ರಕಟ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಮೋದಿ ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿ | PEW ತಾಜಾ ಸರ್ವೇ ರಿಸಲ್ಟ್ | Oneindia Kannada

    ಉಪಚುನಾವಣೆಗಳ ಫಲಿತಾಂಶ ಹೊರತು ಪಡಿಸಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆಯೋ, ಕುಗ್ಗುತ್ತಿದೆಯೋ?

    ಅಮೆರಿಕಾದ ವಾಷಿಂಗ್ಟನ್ ನಿಂದ ಕಾರ್ಯನಿರ್ವಹಿಸುವ PEW ರಿಸರ್ಚ್ ಸೆಂಟರ್, ಗುರುವಾರ (ಮಾ 15) ಬಿಡುಗಡೆ ಮಾಡಿರುವ ತಾಜಾ ಸರ್ವೇ ಫಲಿತಾಂಶದ ಪ್ರಕಾರ, ಮೋದಿಯವರ ಜನಪ್ರಿಯತೆಗೆ ಯಾವುದೇ ಧಕ್ಕೆಯಾಗದೇ ನಿರಾಂತಕವಾಗಿ ಸಾಗುತ್ತಿದೆ.

    ಸಮೀಕ್ಷೆ: ಮೋದಿ ಸರ್ಕಾರದ 'ಜಿಎಸ್‌ಟಿ' ಬಗ್ಗೆ ಜನರಲ್ಲಿದೆ ಆಕ್ರೋಶ

    ಫೆಬ್ರವರಿ 21ರಿಂದ ಮಾರ್ಚ್ 10ರ ಅವಧಿಯಲ್ಲಿ 2,464 ಜನರನ್ನು ಸಂಪರ್ಕಿಸಿ ಸಿದ್ದ ಪಡಿಸಿರುವ ಈ ಸರ್ವೇ ಪ್ರಕಾರ, ಭಾರತದಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಅರವಿಂದ್ ಕೇಜ್ರಿವಾಲ್ ಅವರಿಗಿಂತ ಮೋದಿ ತುಂಬಾ ಮುಂದಿದ್ದಾರೆ.

    ದೇಶವನ್ನು ಮೋದಿ ಮುನ್ನಡೆಸುತ್ತಿರುವ ರೀತಿ, ಸುಧಾರಿಸಿಕೊಳ್ಳುತ್ತಿರುವ ಆರ್ಥಿಕತೆ, ಉದ್ಯೋಗ ಸೃಷ್ಟಿ, ಬಡವರ ಮೇಲಿನ ಕಾಳಜಿ, ವಾಯು ಮಾಲಿನ್ಯ, ಉಗ್ರರನ್ನು ಹೆಡೆಮುರಿ ಕಟ್ಟುವುದು, ಹಣದುಬ್ಬರ, ಕೋಮು ಸೌಹಾರ್ದತೆ ಮತ್ತು ಕಾಶ್ಮೀರದ ವಿಚಾರವನ್ನು ಮುಂದಿಟ್ಟುಕೊಂಡು ಸರ್ವೇ ನಡೆಸಲಾಗಿದೆ.

    ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

    ಇನ್ನು ಮೋದಿ ದೇಶದ ಯಾವ ಭಾಗದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ, ಮೇಲೆ ಹೇಳಿದ ವಿಚಾರಗಳಲ್ಲಿ ಬಿಜೆಪಿ ಬೆಟರೋ ಕಾಂಗ್ರೆಸ್ ಉತ್ತಮವೋ ಎನ್ನುವ ಸಮೀಕ್ಷೆಯನ್ನೂ PEW ನಡೆಸಿದೆ. ಸರ್ವೇಯ ಆಯ್ದ ಭಾಗಗಳಿಗಾಗಿ ಮುಂದೆ ಓದಿ..

    ನಮ್ಮ ದಕ್ಷಿಣ ಭಾರತದಲ್ಲಿ ಪ್ರಧಾನಿ ಜನಪ್ರಿಯರು

    ನಮ್ಮ ದಕ್ಷಿಣ ಭಾರತದಲ್ಲಿ ಪ್ರಧಾನಿ ಜನಪ್ರಿಯರು

    ದಕ್ಷಿಣ, ಪಶ್ಚಿಮ, ಉತ್ತರ ಮತ್ತು ಪೂರ್ವ ಭಾರತದಲ್ಲಿ ಮೋದಿಯ ಬಗ್ಗೆ ಜನ ಏನು ಹೇಳುತ್ತಾರೆ ಎನ್ನುವುದರ ಬಗ್ಗೆ PEW ನಡೆಸಿದ ಸರ್ವೇ ಫಲಿತಾಂಶ ಹೀಗಿದೆ..

    ದಕ್ಷಿಣ - ಉತ್ತಮ : ಶೇ. 95, ಕಳಪೆ: ಶೇ. 4, ನೋ ಕಮೆಂಟ್ - ಶೇ. 1
    ಪಶ್ಚಿಮ- ಉತ್ತಮ : ಶೇ. 92, ಕಳಪೆ: ಶೇ. 7, ನೋ ಕಮೆಂಟ್ - ಶೇ. 1
    ಉತ್ತರ - ಉತ್ತಮ : ಶೇ. 84, ಕಳಪೆ: ಶೇ. 14, ನೋ ಕಮೆಂಟ್ - ಶೇ. 2
    ಪೂರ್ವ - ಉತ್ತಮ : ಶೇ. 85, ಕಳಪೆ: ಶೇ. 10, ನೋ ಕಮೆಂಟ್ - ಶೇ. 5

    ದೇಶದ ಪಾಪ್ಯೂಲರ್ ಮುಖಂಡರು ಯಾರು?

    ದೇಶದ ಪಾಪ್ಯೂಲರ್ ಮುಖಂಡರು ಯಾರು?

    ಸರ್ವೇಯಲ್ಲಿ ಕೇಳಿದ ಇನ್ನೊಂದು ಪ್ರಶ್ನೆ, ದೇಶದ ಸದ್ಯದ ಜನಪ್ರಿಯ ಮುಖಂಡರು ಯಾರು ಎನ್ನುವ ಪ್ರಶ್ನೆಗೆ ಪ್ರಮುಖವಾಗಿ ನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಲಲಾಗಿತ್ತು. ಸರ್ವೇಯ ಫಲಿತಾಂಶ ಏನನ್ನುತ್ತೆ?

    1. ನರೇಂದ್ರ ಮೋದಿ - ಶೇ. 88
    2. ರಾಹುಲ್ ಗಾಂಧಿ - ಶೇ. 58
    3. ಸೋನಿಯಾ ಗಾಂಧಿ - ಶೇ. 57
    4. ಅರವಿಂದ್ ಕೇಜ್ರಿವಾಲ್ - ಶೇ. 39

    ಅಧ್ಯಕ್ಷರಾಗಿ ರಾಹುಲ್ ಗಾಂಧಿ 'ಅಪ್ರೆಂಟಿಸ್‌ಶಿಪ್' ಅವಧಿ ಇನ್ನೂ ಮುಗಿದಿಲ್ವಾ?

    ಆರ್ಥಿಕವಾಗಿ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?

    ಆರ್ಥಿಕವಾಗಿ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?

    ಮೋದಿ ಪಿಎಂ ಆದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂದು 2013-2017ರ (ಮಾರ್ಚ್) ವರೆಗೆ ನಡೆಸಿದ ಸರ್ವೇ ಫಲಿತಾಂಶ ಹೀಗೆ ಹೇಳುತ್ತೆ..

    ಸದ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ
    2013 - ಶೇ. 57, : 2014 - ಶೇ. 64, : 2015 - ಶೇ. 74, : 2016 - ಶೇ. 80 : 2017 - ಶೇ. 83

    ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?
    2013 - ಶೇ. 29: 2014 - ಶೇ. 36 : 2015 - ಶೇ. 56: 2016 - ಶೇ. 65: 2017 - ಶೇ. 70

    ಪ್ರಧಾನಿ ಮೋದಿಯ ಸಾಧನೆಯ ಬಗ್ಗೆ ತೃಪ್ತಿ ಇದೆಯಾ?

    ಪ್ರಧಾನಿ ಮೋದಿಯ ಸಾಧನೆಯ ಬಗ್ಗೆ ತೃಪ್ತಿ ಇದೆಯಾ?

    ನಿರುದ್ಯೋಗ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ಯಾರು ಉತ್ತಮ?
    ಕಾಂಗ್ರೆಸ್ ಅವಧಿಯಲ್ಲಿ- ಶೇ. 46
    ಬಿಜೆಪಿ ಅವಧಿಯಲ್ಲಿ - ಶೇ. 81

    ಭ್ರಷ್ಟಾಚಾರ ಕಡಿಮೆ ಮಾಡುವಲ್ಲಿ ಯಾರು ಬೆಸ್ಟ್?
    ಕಾಂಗ್ರೆಸ್ - ಶೇ. 45
    ಬಿಜೆಪಿ - ಶೇ. 78

    ಬಡವರ ಪಾಲಿಗೂ ನರೇಂದ್ರ ಮೋದಿ ಬೆಸ್ಟ್

    ಬಡವರ ಪಾಲಿಗೂ ನರೇಂದ್ರ ಮೋದಿ ಬೆಸ್ಟ್

    ಬಡವರ ಪಾಲಿಗೆ ಆಶಾಕಿರಣ ಯಾರು?
    ಕಾಂಗ್ರೆಸ್ - ಶೇ. 48
    ಬಿಜೆಪಿ - ಶೇ. 81

    ಉಗ್ರರನ್ನು ನಿಗ್ರಹಿಸುವಲ್ಲಿ ಯಾವ ಸರಕಾರ ಉತ್ತಮ
    ಕಾಂಗ್ರೆಸ್ - ಶೇ. 51
    ಬಿಜೆಪಿ - ಶೇ. 78

    ಕಾಶ್ಮೀರ, ಹಣದುಬ್ಬರ ಮತ್ತು ಕೋಮು ಸೌಹಾರ್ದತೆ

    ಕಾಶ್ಮೀರ, ಹಣದುಬ್ಬರ ಮತ್ತು ಕೋಮು ಸೌಹಾರ್ದತೆ

    ಕಾಶ್ಮೀರ ಯಾರ ಅವಧಿಯಲ್ಲಿ ಶಾಂತಿಯಿಂದ ಕೂಡಿದೆ
    ಕಾಂಗ್ರೆಸ್ - ಶೇ. 40
    ಬಿಜೆಪಿ - ಶೇ. 65

    ಹಣದುಬ್ಬರ ಯಾರ ಅವಧಿಯಲ್ಲಿ ನಿಯಂತ್ರಣಕ್ಕೆ ಬಂದಿದೆ
    ಕಾಂಗ್ರೆಸ್ - ಶೇ. 35
    ಬಿಜೆಪಿ - ಶೇ. 62

    ಕೋಮು ಸೌಹಾರ್ದತೆ ಯಾರ ಅವಧಿಯಲ್ಲಿ ಉತ್ತಮವಾಗಿದೆ
    ಕಾಂಗ್ರೆಸ್ - ಶೇ. 29
    ಬಿಜೆಪಿ - ಶೇ. 55

    'ಮೂಡ್ ಆಫ್ ದಿ ನೇಷನ್' ಸಮೀಕ್ಷೆ: ಕುಸಿಯುತ್ತಿದೆಯಾ ಬಿಜೆಪಿ ಜನಪ್ರಿಯತೆ?

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    PEW (Pew Research Center) survey: Indian Prime Minister Narendra Modi is the most popular figure against Rahul, Sonia Gandi and Arvind Kejriwal. In the latest PEW survey 2,464 people are respondent and this survey is conducted between February 21 and March 10 of this year.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more