ವಾಹನ ಸವಾರರಿಗೆ ಶಾಕ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!
ನವದೆಹಲಿ, ಮೇ 31 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಈ ಬಾರಿ ಏರಿಕೆಯಾಗಿದೆ.
ಪೆಟ್ರೋಲ್ ಪ್ರತಿ ಲೀಟರ್ ಗೆ 1.23 ರು. ಡೀಸೆಲ್ ಲೀಟರ್ ಗೆ 0.89 ಪೈಸೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಇಂದು (ಮೇ 31)ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. [ಇನ್ನು 5 ವರ್ಷದಲ್ಲಿ 30 ರುಪಾಯಿಗೂ ಕಡಿಮೆ ಆಗಲಿದೆ ಲೀಟರ್ ಪೆಟ್ರೋಲ್ ಬೆಲೆ]

Petrol price increased by Rs. 1.23/litre and Diesel by Rs. 0.89/litre pic.twitter.com/a6TCDXOL14
— ANI (@ANI_news) May 31, 2017
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ. ಅದರಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಳನ್ನೂ ನಿರ್ಧರಿಸಲಾಗುತ್ತದೆ.
ಕಳೆದ ಬಾರಿ ಮೇ 15ರಂದು ಪೆಟ್ರೋಲ್ ಪ್ರತಿ ಲೀಟರ್ ಗೆ ಬರೋಬ್ಬರಿ 2.16 ರು. ಡೀಸೆಲ್ ಪ್ರತಿ ಲೀಟರ್ ಗೆ 2.10 ಇಳಿಕೆಯಾಗಿತ್ತು.












Click it and Unblock the Notifications