ಪೆಟ್ರೋಲ್ ಅಲ್ಪ ಏರಿಕೆ, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆ
ನವದೆಹಲಿ, ನವೆಂಬರ್ 30: ಪೆಟ್ರೋಲ್ ದರದಲ್ಲಿ ತುಸು ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ 13 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರಿಗೆ 12 ಪೈಸೆಯಷ್ಟು ಇಳಿಕೆಯಾಗಿದೆ. ನವೆಂಬರ್ 30ರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ನವೆಂಬರ್ 15ರಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಿತ್ತು. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.46 ರು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 1.53 ರುನಷ್ಟು ಇಳಿಕೆಯಾಗಿತ್ತು. ಡೀಲರ್ ಗಳಿಗೆ ನೀಡುವ ಕಮಿಷನ್ ದರ ಏರಿಕೆಯಾದ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ ಕಳೆದ ಬಾರಿ ಅನಿವಾರ್ಯವಾಗಿತ್ತು.[ವಾಹನ ಸವಾರರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ]

ಕಳೆದ ಕೆಲ ತಿಂಗಳುಗಳಿಂದ ಪೆಟ್ರೋಲ್ ಬಂಕ್ ಗಳಲ್ಲಿ ಮುಷ್ಕರ, ಕಾರ್ಯ ನಿರ್ವಹಣೆ ಅವಧಿ ಮಿತಿ ಕಂಡು ಬಂದಿತ್ತು. ಆದರೆ, ಇಂಡಿಯನ್ ಆಯಿಲ್ ಇಂಧನ ಬೆಲೆ ಇಳಿಕೆಯನ್ನು ಘೋಷಿಸಿತ್ತು. ಅದಕ್ಕೂ ಮುನ್ನ ಅಂದರೆ ನವೆಂಬರ್ 5ರಂದು ಪೆಟ್ರೋಲ್ ಲೀಟರಿಗೆ 89 ಪೈಸೆ, ಡೀಸೆಲ್ ಪ್ರತಿ ಲೀಟರಿಗೆ 86 ಪೈಸೆಯಷ್ಟು ಏರಿಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications