ಚಳಿಗಾಲಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿ

ನವದೆಹಲಿ, ನವೆಂಬರ್, 16: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ತೈಲ ದರವನ್ನು ಕೊಂಚ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್ ದರದಲ್ಲಿ 87 ಪೈಸೆ ಏರಿಕೆ ಮಾಡಲಾಗಿದೆ.

ತೈಲ ದರ ಪರಿಷ್ಕರಣೆಯಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ದರವು 60.70 ರೂ.ನಿಂದ 61.06 ರೂ.ಗೇರಲಿದೆ. ಅದೇ ರೀತಿ ಡೀಸೆಲ್ ದರವು ಲೀಟರ್‌ಗೆ 45.93 ರೂ.ನಿಂದ 46.80 ರೂ.ಗೇರಲಿದೆ.[ಬ್ಯಾರಲ್ ಕಚ್ಚಾ ತೈಲಕ್ಕೆ ಕೇವಲ 39 ಡಾಲರ್]

petrol

ಕಳೆದ ಬಾರಿಯ ಪರಿಷ್ಕರಣೆಯಲ್ಲಿ ಪೆಟ್ರೋಲ್ ದರವನ್ನು 50 ಪೈಸೆ ಕಡಿತಗೊಳಿಸಲಾಗಿತ್ತು. ಆದರೆ ಡೀಸೆಲ್ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಆದರೆ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಎರಡರ ದರದಲ್ಲೂ ಕೊಂಚ ಏರಿಕೆ ಮಾಡಲಾಗಿದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

ಬೆಂಗಳೂರಿಗರು ಎಷ್ಟು ನೀಡಬೇಕು?
ಹೊಸ ದರ ಪರಿಷ್ಕರಣೆ ಅನ್ವಯ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 64.51 ರು. ಮತ್ತು ಡೀಸೆಲ್ ಗೆ 49.50 ರು ನೀಡಬೇಕಾಗುತ್ತದೆ. ಜುಲೈ 16ರಂದು ಕೊನೆಯ ಬಾರಿಗೆ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 32 ಪೈಸೆ ಹೆಚ್ಚಳವಾಗಿತ್ತು. ಆನಂತರ ನಾಲ್ಕು ಬಾರಿ ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+