ಪೆಟ್ರೋಲ್ ದರದಲ್ಲಿ ಏರಿಕೆ, ಡೀಸೆಲ್ ದರದಲ್ಲಿ ಇಳಿಕೆ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 30 : ಪ್ರತಿ ಹದಿನೈದು ದಿನಗಳಿಗೊಮ್ಮೆ ಏರಿಳಿತ ಕಾಣುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸೆ.30ರಂದು ಮತ್ತೆ ಪರಿಷ್ಕೃತವಾಗಿವೆ.

ಪೆಟ್ರೋಲ್ ದರ ಪ್ರತಿ ಲೀಟರಿಗೆ 28 ಪೈಸೆಯಷ್ಟು ಏರಿಕೆ ಕಂಡಿದ್ದರೆ, ಡೀಸೆಲ್ ದರ ಪ್ರತಿ ಲೀಟರಿಗೆ 6 ಪೈಸೆಯಷ್ಟು ಇಳಿಕೆ ಕಂಡಿದೆ. ಪರಿಷ್ಕೃತ ದರಗಳು ಸೆಪ್ಟೆಂಬರ್ 30ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. [ಗಲ್ಫ್‌ನಲ್ಲಿ ತೈಲ ಬೆಲೆ ಇಳಿಕೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಲ್ಲಣ]

Petrol price hiked by 28 paise per litre

ಈ ಪರಿಷ್ಕೃತ ದರದಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 69.21 ರು. (68.93 ರು.) ಆಗಲಿದೆ ಮತ್ತು ಡೀಸೆಲ್ ದರ ಪ್ರತಿ ಲೀಟರಿಗೆ 56.91 ರು. (56.31 ರು.) ಆಗಲಿದೆ.

ಹದಿನೈದು ದಿನಗಳ ಹಿಂದೆ ಸೆಪ್ಟೆಂಬರ್ 16ರಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಳಿಕೆ ಕಂಡಿದ್ದವು. ಪೆಟ್ರೋಲ್ ದರ 58 ಪೈಸೆಯಷ್ಟು ಏರಿಕೆ ಕಂಡಿತ್ತು ಮತ್ತು ಡೀಸೆಲ್ 31 ಪೈಸೆಯಷ್ಟು ಇಳಿಕೆ ಕಂಡಿತ್ತು. [ಸೆಪ್ಟೆಂಬರ್ 16ರ ಪೆಟ್ರೋಲ್, ಡೀಸೆಲ್ ಪರಿಷ್ಕೃತ ದರಗಳು]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪ್ರಚಲಿತ ದರ ಮತ್ತು ರುಪಾಯಿ-ಡಾಲರ್ ವಿನಿಮಯ ದರದ ಆಧಾರದ ಮೇಲೆ ತೈಲೋತ್ಪನ್ನಗಳ ಬೆಲೆಗಳನ್ನು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಏರಿಳಿಸುತ್ತಿರುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Petrol price hiked by 28 paise per litre and diesel price cut by 6 paise a litre.
Please Wait while comments are loading...