ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕಡಿತ

Posted By:
Subscribe to Oneindia Kannada

ನವದೆಹಲಿ, ಜುಲೈ 31: ಸರ್ಕಾರಿ ಸ್ವಾಮ್ಯದ ಪ್ರಮುಖ ತೈಲ ಕಂಪನಿಗಳು ಜುಲೈ ತಿಂಗಳ ಕೊನೆ ದಿನದಂದು ವಾಹನ ಸವಾರರಿಗೆ ಶುಭ ಸುದ್ದಿ ನೀಡಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದ್ದು, ಭಾನುವಾರ(ಜುಲೈ 31) ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬರಲಿದೆ.

ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಪ್ರತಿ ಲೀಟರ್ ಗೆ 1.42 ರು. ಕಡಿಮೆಯಾಗಿದ್ದರೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ 2.01 ರು ಪೈಸೆ ಕಡಿತ ಮಾಡಲಾಗಿದೆ. [ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಇಳಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಎರಡು ತಿಂಗಳಿನಿಂದ ತೈಲ ದರ ಏರಿಕೆಯ ಹಾದಿಯಲ್ಲೇ ಸಾಗಿತ್ತು. ಜುಲೈ ಆರಂಭದಲ್ಲಿ ಹಾಗೂ ಮಧ್ಯ ಭಾಗದಲ್ಲಿ ಇಂಧನ ಬೆಲೆ ಕೊಂಚ ತಗ್ಗಿಸಲಾಗಿತ್ತು. [ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

Petrol price cut by Rs 1.42/litre, diesel by Rs 2.01 a litre

ಹೊಸ ದರ ಪಟ್ಟಿಯಂತೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 61.09ರು ನೀಡಬೇಕಾಗುತ್ತದೆ. ಸಯ್ದ 62.51 ರು ನಷ್ಟಿದೆ. ಅದೇ ರೀತಿ ಡೀಸೆಲ್ ಬೆಲೆ 52.27ರು ಪ್ರತಿ ಲೀಟರ್ ಗೆ ಇಳಿಯಲಿದೆ. ಈಗ 54.28 ರು ನಷ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ. [ಈ ನಗರದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 300 ರು!]

ಬೆಂಗಳೂರಲ್ಲಿ ಎಷ್ಟು ನೀಡಬೇಕು? : ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ನಂತರ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಗೆ 65.89 ರು. ನೀಡಬೇಕು ಮತ್ತು ಡೀಸೆಲ್ ಗೆ 56.08 ರು. ನೀಡಬೇಕಾಗಿದೆ.

ಜುಲೈ ತಿಂಗಳಿನಲ್ಲಿ ಮೂರು ಬಾರಿ ಬೆಲೆ ಇಳಿಕೆ ಮಾಡಲಾಗಿದೆ. ಜುಲೈ 15ರಂದು ಪೆಟ್ರೋಲ್ ದರ 2.25ರು ಪ್ರತಿ ಲೀಟರ್ ಹಾಗೂ ಡೀಸೆಲ್ ದರದಲ್ಲಿ 42 ಪೈಸೆ ಇಳಿಕೆಯಾಗಿತ್ತು. ಇದಕ್ಕೂ ಮುನ್ನ ಜುಲೈ 1 ರಂದು ಪೆಟ್ರೋಲ್ ದರದಲ್ಲಿ 89ಪೈಸೆ ಹಾಗೂ ಡೀಸೆಲ್ ದರದಲ್ಲಿ 49 ಪೈಸೆ ಇಳಿಕೆಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Petrol price was today(July 31) cut by Rs 1.42 a litre and diesel by Rs 2.01 per litre, the third reduction in rates this month on global cues.
Please Wait while comments are loading...