ಕೇಂದ್ರ ಬಜೆಟ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಆಯ್ತು ದುಬಾರಿ

ನವದೆಹಲಿ, ಜುಲೈ 6: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶನಿವಾರ ಏರಿಕೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ 2019-20ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಸುಂಕವನ್ನು ಸೆಸ್ ಅನ್ನು 1 ರೂಪಾಯಿ ಹೆಚ್ಚಿಸಿದ್ದರು. ಇದರಿಂದ ಒಟ್ಟಾರೆ 2 ರೂಪಾಯಿ ಅಧಿಕ ಹೊರೆ ಹಾಕಲಾಗಿತ್ತು.

ಈ ಹೆಚ್ಚುವರಿ ಹೊರೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ಗೆ 3 ರೂಪಾಯಿವರೆಗೂ ತುಟ್ಟಿಯಾಗುವ ನಿರೀಕ್ಷೆ ಹುಟ್ಟಿಸಿತ್ತು. ಅದರಂತೆ ಮರುದಿನವೇ ತೈಲ ಬೆಲೆ ದುಬಾರಿಯಾಗಿದೆ.

ಪೆಟ್ರೋಲ್ ದರವು ಲೀಟರ್‌ಗೆ 2.45 ರೂಪಾಯಿ ಹೆಚ್ಚಳವಾಗಿದೆ. ಡೀಸೆಲ್ ಬೆಲೆ ಕೂಡ ಲೀಟರ್‌ಗೆ 2.36 ರೂಪಾಯಿ ಅಧಿಕವಾಗಿದೆ.

ತೈಲ ಬೆಲೆ ಏರಿಕೆಯಿಂದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ತೈಲ ಬೆಲೆ ಪ್ರತಿದಿನ ಪರಿಷ್ಕರಣೆಯಾಗುತ್ತಿದ್ದು, ಕೆಲವು ಪೈಸೆಗಳ ದರದಲ್ಲಿ ಏರಿಳಿತವಾಗುತ್ತಿದ್ದರಿಂದ ಬೆಲೆ ಏರಿಕೆ ಪರಿಣಾಮ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಆದರೆ, ಈಗ ಏಕಾಏಕಿ 2 ರೂಪಾಯಿಗೂ ಅಧಿಕ ಹೆಚ್ಚಳವಾಗಿರುವುದರಿಂದ ಜನಸಾಮಾನ್ಯರ ಮೇಲೆ ಅಧಿಕ ಹೊರೆಯಾಗಿದೆ.

ಪ್ರಸಕ್ತ ವರ್ಷದ ಜಿಡಿಪಿಯಲ್ಲಿ ಶೇ 3.3ರ ವಿತ್ತೀಯ ಕೊರತೆಯನ್ನು ಸಾಧಿಸಲು ಎದುರು ನೋಡುತ್ತಿರುವ ಸರ್ಕಾರವು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸುಂಕ ಮತ್ತು ಸೆಸ್‌ನಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ರಾಜಧಾನಿ ದೆಹಲಿಯಲ್ಲಿ ತೈಲ ದರ

ರಾಜಧಾನಿ ದೆಹಲಿಯಲ್ಲಿ ತೈಲ ದರ

ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 72.96ಕ್ಕೆ ತಲುಪಿದೆ. ಡೀಸೆಲ್ ದರವು 66.69 ರೂಪಾಯಿ ಪ್ರತಿ ಲೀಟರ್‌ಗೆ ತಲುಪಿದೆ. ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 70.51 ರೂಪಾಯಿ ಇತ್ತು. ಡೀಸೆಲ್ ದರವು 64.33 ರೂಪಾಯಿ ಪ್ರತಿ ಲೀಟರ್‌ಗೆ ಮಾರಾಟವಾಗಿತ್ತು.

ಕೋಲ್ಕತಾದಲ್ಲಿ ಪೆಟ್ರೋಲ್ 2.40 ರೂ ತುಟ್ಟಿ

ಕೋಲ್ಕತಾದಲ್ಲಿ ಪೆಟ್ರೋಲ್ 2.40 ರೂ ತುಟ್ಟಿ

ಕೋಲ್ಕತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 75.15 ರೂಪಾಯಿ ತಲುಪಿದೆ. ಇಲ್ಲಿ ಪೆಟ್ರೋಲ್ ಬೆಲೆ 2.40 ರೂಪಾಯಿ ಹೆಚ್ಚಳವಾಗಿದೆ. ಶುಕ್ರವಾರ ಇಲ್ಲಿ ಪೆಟ್ರೋಲ್ 72.75 ರೂಪಾಯಿಯಂತೆ ಮಾರಾಟವಾಗಿತ್ತು. ಡೀಸೆಲ್ ಬೆಲೆ 2.36 ರೂಪಾಯಿ ಏರಿಕೆಯಾಗಿದ್ದು, ಶುಕ್ರವಾರದ 66.23 ರೂಪಾಯಿಯಿಂದ ಲೀಟರ್‌ಗೆ 68.59 ರೂಪಾಯಿಗೆ ತಲುಪಿದೆ.

ಮುಂಬೈನಲ್ಲಿ 2.42 ರೂ ಹೆಚ್ಚಳ

ಮುಂಬೈನಲ್ಲಿ 2.42 ರೂ ಹೆಚ್ಚಳ

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 78.57 ರೂಪಾಯಿ ಮುಟ್ಟಿದೆ. ಶುಕ್ರವಾರ ಇದರ ಬೆಲೆ ಲೀಟರ್‌ಗೆ 76.15 ರೂಪಾಯಿ ಇತ್ತು. ಅಂದರೆ, 2.42 ರೂಪಾಯಿ ಪ್ರತಿ ಲೀಟರ್‌ಗೆ ಏರಿಕೆ ಕಂಡಿದೆ. ಡೀಸೆಲ್ ದರವು ಲೀಟರ್‌ ಮೇಲೆ 2.50 ರೂಪಾಯಿ ತುಟ್ಟಿಯಾಗಿದ್ದು, 69.90 ರೂಪಾಯಿಗೆ ಮುಟ್ಟಿದೆ. ಶುಕ್ರವಾರ ಈ ದರ 67.40 ರೂಪಾಯಿ ಇತ್ತು.

ಚೆನ್ನೈನಲ್ಲಿ ಅತ್ಯಧಿಕ ಬೆಲೆ

ಚೆನ್ನೈನಲ್ಲಿ ಅತ್ಯಧಿಕ ಬೆಲೆ

ಮೆಟ್ರೊಪಾಲಿಟನ್ ನಗರಗಳ ಪೈಕಿ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅತ್ಯಧಿಕ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 2.57ರಷ್ಟು ದುಬಾರಿಯಾಗಿದ್ದು, ಹಿಂದಿನ 72.75 ರೂಪಾಯಿಯಿಂದ ಏಕಾಏಕಿ 75.15 ರೂಪಾಯಿಗೆ ಹೆಚ್ಚಿದೆ. ಇನ್ನು ಡೀಸೆಲ್ ದರ 2.52 ರೂಪಾಯಿಯಷ್ಟು ಹೆಚ್ಚಾಗಿದೆ. ಶುಕ್ರವಾರ ಡೀಸೆಲ್ ಪ್ರತಿ ಲೀಟರ್‌ಗೆ 67.96 ರೂಪಾಯಿ ಇತ್ತು. ಶನಿವಾರ ಲೀಟರ್‌ಗೆ 70.48 ರೂಪಾಯಿಗೆ ತಲುಪಿದೆ.

ಸಿಲಿಕಾನ್ ಸಿಟಿಯಲ್ಲಿಬೆಂಗಳೂರಿನಲ್ಲಿ ತೈಲ ಬೆಲೆ

ಸಿಲಿಕಾನ್ ಸಿಟಿಯಲ್ಲಿಬೆಂಗಳೂರಿನಲ್ಲಿ ತೈಲ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 75.37ಕ್ಕೆ ತಲುಪಿದ್ದು, ಶುಕ್ರವಾರ 72.83 ರೂಪಾಯಿಗೆ ಮಾರಾಟವಾಗಿತ್ತು. ಒಂದು ದಿನದಲ್ಲಿ ಪೆಟ್ರೋಲ್ ಬೆಲೆಯು 2.54 ರೂಪಾಯಿಯಷ್ಟು ಹೆಚ್ಚಳವಾಗಿದೆ. ಇನ್ನು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 68.88 ರೂಪಾಯಿಗೆ ತಲುಪಿದೆ. ಶುಕ್ರವಾರ ಇದರ ಬೆಲೆ ಲೀಟರ್‌ಗೆ 66.45 ರೂಪಾಯಿ ಇತ್ತು. ಅಂದರೆ ಪ್ರತಿ ಲೀಟರ್‌ ಡೀಸೆಲ್‌ಗೆ 2.43 ರೂಪಾಯಿ ದುಬಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+