Exit Poll: ಆಪ್ ಅಟ್ಟರ್ ಫ್ಲಾಪ್, ಬಿಜೆಪಿಗೆ ಬಂಪರ್... ದೆಹಲಿ ಗೆದ್ದು ಬೀಗಲಿದೆ ಬಿಜೆಪಿ!
ರಾಷ್ಟ್ರ ರಾಜಧಾನಿ ದೆಹಲಿ ಗೆದ್ದು ಬೀಗುವ ಬಿಜೆಪಿ ಕನಸು ಅಂತೂ ನನಸಾಗುತ್ತಿದೆ. ಇಷ್ಟು ದಿನಗಳ ಕಾಲ ಗೆದ್ದೇ ಗೆಲ್ಲಬೇಕು ಅನ್ನೋ ಒನ್‌ಲೈನ್ ಅಜೆಂಡಾ ಜೊತೆಗೆ ಹೋರಾಡಿದ್ದರು ಬಿಜೆಪಿ ನಾಯಕರು. ಸತತ ಸರ್ಕಾರ ರಚಿಸಿದ್ದ ಆಮ್ ಆದ್ಮಿ ಪಾರ್ಟಿ 3ನೇ ಬಾರಿಗೆ ಪೂರ್ಣ ಬಹುಮತ ಪಡೆಯುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಎಕ್ಸಿಟ್ ಪೋಲ್ ಭವಿಷ್ಯದ ಪ್ರಕಾರ ಆಮ್ ಆದ್ಮಿ ಪಕ್ಷದ ನಾಯಕರ ನಿರೀಕ್ಷೆಗಳು ನುಚ್ಚುನೂರಾಗಿವೆ!
ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 30 ವರ್ಷವೇ ಕಳೆದು ಹೋಗಿದೆ. 1993 ರಲ್ಲಿ BJP ಮದನ್ ಲಾಲ್ ಖುರಾನ ಅವರ ಸಾರಥ್ಯದಲ್ಲಿ ಬರೋಬ್ಬರಿ 49 ಸ್ಥಾನಗಳನ್ನು ಗೆದ್ದು ಬೀಗಿತ್ತು. ಈ ಮೂಲಕ ಪೂರ್ಣ ಪ್ರಮಾಣದ ಸರ್ಕಾರ ರಚಿಸಿತ್ತು. ಆದರೆ 1993ರ ನಂತರ ಬಿಜೆಪಿ ಪಕ್ಷ ಮತ್ತೆ ದೆಹಲಿಯಲ್ಲಿ ಅಧಿಕಾರಕ್ಕೆ ಬರಲೇ ಇಲ್ಲ.

ಆದರೆ ಇದೀಗ ಬರೋಬ್ಬರಿ 30 ವರ್ಷಗಳ ನಂತರ ಬಿಜೆಪಿ ನಾಯಕರ ಕನಸು ನನಸಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಬಾವುಟ ಹಾರುವುದು ಗ್ಯಾರಂಟಿ ಆಗಿದೆ. ಇದೀಗ 'ಪೀಪಲ್ಸ್ ಇನ್‌ಸೈಟ್' ನೀಡಿರುವ ಎಕ್ಸಿಟ್ ಪೋಲ್ ರಿಸಲ್ಟ್ ಇದನ್ನೇ ಒತ್ತಿ ಹೇಳುತ್ತಿದೆ. ಕೇಂದ್ರದಲ್ಲೂ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷಕ್ಕೆ ದೆಹಲಿ ಗದ್ದುಗೆ ಕೂಡ ಸಿಗುವುದು ಬಹುತೇಕ ಕನ್ಫರ್ಮ್ ಆಗುತ್ತಿದೆ.
ಬಿಜೆಪಿಗೆ ಸಿಗಲಿದೆಯಂತೆ 40-44 ಸ್ಥಾನ!
'ಪೀಪಲ್ಸ್ ಇನ್‌ಸೈಟ್' ನೀಡಿರುವ ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಾರ ಬಿಜೆಪಿ ಪಕ್ಷ ಬರೋಬ್ಬರಿ 40 ರಿಂದ 44 ಸ್ಥಾನ ಗೆಲ್ಲಲಿದೆಯಂತೆ. ಇದೀಗ ಆಡಳಿತದಲ್ಲಿ ಇರುವ ಆಮ್ ಆದ್ಮಿ ಪಾರ್ಟಿ 2ನೇ ಸ್ಥಾನಕ್ಕೆ ಕುಸಿಯಲಿದ್ದು ಕೇವಲ 25 ರಿಂದ 29 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸ್ಥಿತಿ ಈ ಚುನಾವಣೆಯಲ್ಲಿ ಕೂಡ ಹೀನಾಯವಾಗಲಿದ್ದು, ಕೈ ಪಡೆ ಈ ಬಾರಿ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು 'ಪೀಪಲ್ಸ್ ಇನ್‌ಸೈಟ್' ನೀಡಿರುವ ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಹೇಳುತ್ತಿದೆ.












Click it and Unblock the Notifications