ನೋಟ್ ಬ್ಯಾನ್ 'ವಾರ್ಷಿಕೋತ್ಸವದ' ವಿರುದ್ಧ ಕಪ್ಪುಚುಕ್ಕೆ ಪ್ರತಿಭಟನೆ

Posted By:
Subscribe to Oneindia Kannada
   ಅಪನಗದೀಕರಣಕ್ಕೆ ಮೊದಲ ವಾರ್ಷಿಕೋತ್ಸವ | ಟ್ವಿಟ್ಟಿಗರು ಏನಂತಾರೆ? | Oneindia Kannada

   ನವೆಂಬರ್ 08 : ನೋಟ್ ಬ್ಯಾನ್ ವಿರೋಧಿಸುವ ನೆಟ್ಟಿಜನರು ಟ್ವಿಟ್ಟರ್ ಖಾತೆಗೆ ಕಪ್ಪು ಬಣ್ಣದ ಪ್ರೊಪೈಲ್ ಪಿಕ್ಚರ್ (ಬ್ಲಾಕ್ ಡಾಟ್) ಅಪ್ ಲೋಡ್ ಮಾಡುವ ಮೂಲಕ ನೋಟ್ ಬ್ಯಾನ್ 'ವಾರ್ಷಿಕೋತ್ಸವವನ್ನು' ಖಾರವಾಗಿ ವಿರೋಧಿಸುತ್ತಿದ್ದಾರೆ.

   ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ

   ಕಾಂಗ್ರೆಸ್ ಮುಖಂಡ ಶಶಿತರೂರ್, ಚೆನ್ನೈ ನ ಸಿ.ಆರ್.ಕೇಸವನ್, ರಾಜ್ಯಸಭಾ ಸದಸ್ಯ ಓಬ್ರಿಯನ್, ಲೋಕಸಭಾ ಸದಸ್ಯ ರಾಜೀವ್ ಗೌಡ, ಮುಂತಾದ ರಾಜಕೀಯ ಮುಖಂಡರೂ ಸಹ ಈ ಬ್ಲಾಕ್ ಡಾಟ್ ಅಭಿಯಾನಕ್ಕೆ ಸಹಮತ ಸೂಚಿಸಿದ್ದು ತಮ್ಮ ಟ್ವಿಟರ್ ಖಾತೆಯ ಪ್ರೊಪೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ತಿರುಗಿಸಿಕೊಂಡಿದ್ದಾರೆ. ಇವರ ಜೊತೆ ಸಾಮಾನ್ಯರೂ ಸಹ ತಮ್ಮ ಪ್ರೊಪೈಲ್ ಚಿತ್ರಗಳನ್ನು ತೆಗೆದು ಆ ಜಾಗಕ್ಕೆ ಕಪ್ಪುಚುಕ್ಕೆಯನ್ನು ಅಪ್ ಲೋಡ್ ಮಾಡಿ, ಬ್ಲಾಕ್ ಡೇ ಆಚರಿಸುತ್ತಿದ್ದಾರೆ.

   People uploding Black Dot in Oppose to Demonatization

   ಬಿಜೆಪಿ ಮನಿ ಲಾಂಡರಿಂಗ್ ಡೇ, (ಕಪ್ಪುಹಣ ಬಿಳಿ ಮಾಡಿಕೊಂಡ ದಿನ) ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಪನಗದೀಕರಣದ ವಿರುದ್ಧ ಟ್ವೀಟ್ ಮಾಡುತ್ತಿರುವ ನೋಟ್ ಬ್ಯಾನ್ ವಿರೋಧಿಗಳು. ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗುವಂತೆ ಮಾಡಿದ್ದಾರೆ.

   ಬಿಜೆಪಿ ಮನಿ ಲಾಂಡರಿಂಗ್ ಡೇ, ಹ್ಯಾಷ್ ಟ್ಯಾಗ್ ಅಡಿಯಲ್ಲಿ ನೋಟ್ ಬ್ಯಾನ್ ನಿಂದ ಸಾಮಾನ್ಯ ಜನರಿಗೆ ಆದ ಸಮಸ್ಯೆಗಳು, ಕಾರ್ಪೊರೇಟ್ ಕಂಪೆನಿಗಳು ನಾಟ್ ಬ್ಯಾನ್ ನಿಂದ ಪಾರಾದ ಬಗೆ, ಮೋದಿಯ ಅವರ ಆತುರದ ನಿರ್ಧಾರ, ಬಿಜೆಪಿ ಇತರ ನಾಯಕರ ನಡೆ, ಮೋದಿ ಅವರ ಸರ್ವಾಧಿಕಾರಿ ಧೊರಣೆ, ನೋಟ್ ಬ್ಯಾನ್ ನಿಂದ ತೊಂದರೆಗೊಳಗಾಗದ ಜನಾರ್ಧನ ರೆಡ್ಡಿ ಮಗಳ ಮದುವೆ ಎಲ್ಲವೂ ವ್ಯಂಗ್ಯಭರಿತ ಟೀಕೆಗೆ ಒಳಗಾಗಿದೆ.

   ನೋಟ್ ಬ್ಯಾನ್ ಅನ್ನು ರಾಷ್ಟ್ರೀಯ ಅನಾಹುತ ಎಂದು ಕರೆದಿರುವ ಕಾಂಗ್ರೆಸ್ ನವೆಂಬರ್ 8 ರಂದು ಕಪ್ಪು ದಿನ ಆಚರಸುತ್ತಿದೆ. ಕಾಂಗ್ರೆಸ್ ಜೊತೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮತ್ತು ಕೇರಳದ ಕಮ್ಯುನಿಸ್ಟ್ ಪಕ್ಷಗಳೂ ನೋಟ್ ಬ್ಯಾನ್ ಮಾಡಿ ವರ್ಷವಾದ ಹಿನ್ನೆಲೆಯಲ್ಲಿ ನವೆಂಬರ್ 08 ರಂದು ಪ್ರತಿಭಟನೆ ಮಾಡುತ್ತಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Social media people uploding black dot as Profile picture in order to protest demonatization. in twitter also trending #BJPmoneylaundaringday. under this hashtag social media users criticising Note Ban and PM Modi.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ