TV9 Exit Poll Result 2024: ಗದ್ದುಗೆ ಸನಿಹದಲ್ಲಿ ನರೇಂದ್ರ ಮೋದಿ? ಬಿಜೆಪಿ, ಕಾಂಗ್ರೆಸ್‌ ಪಡೆಯುವ ಸೀಟ್‌ ಎಷ್ಟು?

ದೇಶದಲ್ಲಿ ಏಳು ಹಂತದ ಚುನಾವಣೆಗಳು ಮುಗಿದಿವೆ. ಜೂನ್‌ 4 ರಂದು ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಇದಕ್ಕೂ ಮುನ್ನ ಹಲವು ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗವಾಗಿದೆ. ಈ ವರದಿಯಲ್ಲಿ ಯಾರು ಗದ್ದುಗೆಗೆ ಏರಬಹುದು ಎಂಬ ಬಗ್ಗೆ ಸಣ್ಣ ಚಿತ್ರಣವಂತೂ ಸಿಕ್ಕಿದೆ.

ಭಾರತದಲ್ಲಿ ಏಳು ಹಂತದ ಚುನಾವಣೆಗಳು ಮುಗಿದಿವೆ. ಈಗ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯ ವರದಿಗಳು ಬಹಿರಂಗವಾಗಿದೆ. ಪೀಪಲ್‌ ಇನ್‌ಸೈಟ್ಸ್‌, ಪೋಲ್‌ಸ್ಟಾರ್ಟ್‌ ಹಾಗೂ ಟಿವಿ9 ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಲ್ಲದೆ, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸುಲಭವಾಗಿ ಮ್ಯಾಜಿಕ್ ನಂಬರ್ ದಾಟುತ್ತದೆ ಎಂದು ತಿಳಿಸಿದೆ.

People insights polstrat amp amp TV9 Lok sabha 2024 Exit poll result for India

ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು?

543 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 305 ಸ್ಥಾನಗಳನ್ನು ಗೆಲ್ಲಬಹುದು ಎಂದು ಪೀಪಲ್‌ ಇನ್‌ಸೈಟ್ಸ್‌, ಪೋಲ್‌ಸ್ಟಾರ್ಟ್‌ ಹಾಗೂ ಟಿವಿ9 ಸಮೀಕ್ಷೆಯಲ್ಲಿ ಬಹಿರಂಗ ಪಡಿಸಿದೆ. ಅಲ್ಲದೆ ಎನ್‌ಡಿಎ ಮೈತ್ರಿ ಕೂಟ ಒಟ್ಟು 340 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್‌ ಈ ಬಾರಿ ಚೇತರಿಸಿಕೊಂಡಿದೆ ಎಂದು ಸಮೀಕ್ಷೆಗಳು ಬಹಿರಂಗ ಪಡಿಸಿವೆ.

ಕಾಂಗ್ರೆಸ್‌ ಎಷ್ಟು ಸ್ಥಾನದಲ್ಲಿ ಗೆಲುವು?

ಕಾಂಗ್ರೆಸ್‌ ಒಟ್ಟಾರೆ 65 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇನ್ನು ಇಂಡಿಯಾ ಮೈತ್ರಿ ಕೂಟ 167 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

ಐದು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್‌

ಟಿವಿ9 ಸಮೀಕ್ಷೆಯ ಪ್ರಕಾರ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ, ಹಾಗೂ ದೆಹಲಿಯಲ್ಲಿ ಬಿಜೆಪಿ ಕ್ಲೀಸ್‌ ಸ್ವೀಪ್ ಮಾಡುವ ಸಾಧ್ಯತೆ ಇದೆ.

2014, 2019 ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಬಿಜೆಪಿ ಮತ್ತೊಂದು ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೆ ಒಲವು ತೋರಿದ್ದಾನೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹಿರಂಗವಾಗಲಿದೆ. ಇನ್ನು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಹಾಗೂ ಎನ್‌ಡಿಎ ಮೈತ್ರಿ ಕೂಟ 353 ಸೀಟ್‌ಗಳನ್ನು ಪಡೆದಿತ್ತು. ಇನ್ನು ಯಪಿಎ ಅಲೈನ್ಸ್‌ 90 ಸ್ಥಾನಗಳಿಗೆ ಕುಸಿದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+