ವೈರಸ್‌ನಿಂದ ಮೃತರಾದ ಪತ್ರಕರ್ತರನ್ನು ಕೋವಿಡ್ ವಾರಿಯರ್‌ಗಳೆಂದು ಪರಿಗಣಿಸಿ: ಪಿಸಿಐ
ನವದೆಹಲಿ, ಡಿಸೆಂಬರ್ 3: ಕೊರೊನಾ ವೈರಸ್ ಸೋಂಕಿನಿಂದ ಮರಣ ಹೊಂದಿದ ಪತ್ರಕರ್ತರನ್ನು ಕೂಡ ವೈದ್ಯರು ಹಾಗೂ ಇತರೆ ಅಗತ್ಯ ಆರೋಗ್ಯ ಸಿಬ್ಬಂದಿಯಂತೆ 'ಕೋವಿಡ್ ವಾರಿಯರ್'ಗಳೆಂದು ಪರಿಗಣಿಸಿ ಅದರ ಅಡಿಯಲ್ಲಿ ಸವಲತ್ತುಗಳನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಮನವಿ ಮಾಡಿದೆ.
ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಪಿಸಿಐ, ಹರಿಯಾಣ ಸರ್ಕಾರ ಈಗಾಗಲೇ ಜಾರಿಗೆ ಮಾಡಿರುವಂತಹ ಪತ್ರಕರ್ತರಿಗೆ ಗ್ರೂಪ್ ಇನ್ಶೂರೆನ್ಸ್ ಅನ್ನು ರೂಪಿಸಿ ಜಾರಿಗೆ ತರುವಂತೆ ಕೂಡ ಕೋರಿದೆ.
'ಸರ್ವಾನುಮತದ ನಿರ್ಣಯದಂತೆ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸು ಮಾಡಿದ್ದು, ಹರಿಯಾಣ ಸರ್ಕಾರ ರೂಪಿಸಿರುವ ಪಾಲಿಸಿ ಮಾದರಿಗೆ ಅನುಗುಣವಾಗಿ ಪ್ರತ್ರಕರ್ತರಿಗೆ ಗ್ರೂಪ್ ಇನ್ಶೂರೆನ್ಸ್ ಯೋಜನೆಯನ್ನು ರಚಿಸಿ ಅನುಷ್ಠಾನಕ್ಕೆ ತರುವಂತೆ ಮನವಿ ಮಾಡಲಾಗಿದೆ' ಎಂದು ಪಿಸಿಐ ತಿಳಿಸಿದೆ.

'ಕೋವಿಡ್ 19ರಿಂದ ಮೃತಪಟ್ಟ ಪತ್ರಕರ್ತರನ್ನು ಕೂಡ ವೈದ್ಯರು ಮತ್ತು ಇತರರಂತೆ ಕೋವಿಡ್ ವಾರಿಯರ್‌ಗಳೆಂದು ಪರಿಗಣಿಸಿ ಅದೇ ರೀತಿಯ ಸವಲತ್ತುಗಳನ್ನು ಒದಗಿಸಬೇಕು ಎಂದು ಕೂಡ ಶಿಫಾರಸು ಮಾಡಿದೆ' ಎಂದು ಹೇಳಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳಿಗೆ ಪಿಸಿಐ ಪತ್ರಗಳನ್ನು ರವಾನಿಸಿದೆ.












Click it and Unblock the Notifications