Payal Ghosh: ಇರ್ಫಾನ್ ಜೊತೆ ಡೇಟಿಂಗ್ ಮಾಡುವಾಗ ಗಂಭೀರ್ ಮಿಸ್ಡ್ ಕಾಲ್ ಕೊಡುತ್ತಿದ್ದರು: ನಟಿ ಪಾಯಲ್ ಘೋಷ್
ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಇದೀಗ ಟ್ವಿಟರ್‌ನಲ್ಲಿ ಎಕ್ಸ್‌ನಲ್ಲಿ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ಆರೋಪ ಮಾಡಿದ್ದಾರೆ.
ಮಾಜಿ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಮತ್ತು ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ನಿಯಮಿತವಾಗಿ ತನಗೆ ಮಿಸ್ಡ್ ಕಾಲ್ ನೀಡುತ್ತಿದ್ದರು ಎಂದು ನಟಿ ಆರೋಪಿಸಿದ್ದಾರೆ.
ಇರ್ಫಾನ್ ಪಠಾಣ್ ತನ್ನ ಫೋನ್ ಅನ್ನು ಪರಿಶೀಲಿಸಿದ್ದರು ಮತ್ತು ಗೌತಮ್ ಗಂಭೀರ್ ಮಿಸ್ ಕಾಲ್ ಕೊಡುವ ಬಗ್ಗೆ ತಿಳಿದಿದ್ದರು ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.

ಸರಣಿ ಟ್ವೀಟ್ ಮಾಡಿದ ನಟಿ
ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುವಾಗ ಗೌತಮ್ ಗಂಭೀರ್ ನೀಡುವ ಮಿಸ್ ಕಾಲ್‌ಗಳನ್ನು ಅವರಿಗೆ ತೋರಿಸುತ್ತಿದ್ದೆ. ಇರ್ಫಾನ್‌ಗೆ ಅದು ಚೆನ್ನಾಗಿ ತಿಳಿದಿತ್ತು ಮತ್ತು ಅವನು ನನ್ನ ಫೋನ್ ಕರೆಗಳನ್ನು ಪರಿಶೀಲನೆ ಮಾಡುತ್ತಿದ್ದ. ಇದರ ಬಗ್ಗೆ ತನ್ನ ಸಹೋದರ ಯೂಸುಫ್ ಪಠಾಣ್, ಹಾರ್ದಿಕ್ ಮತ್ತು ಕೃನಾಲ್ ಮುಂದೆ ಪ್ರಸ್ತಾಪಿಸಿದ್ದರು ಎಂದು ಪಾಯಲ್ ಹೇಳಿದ್ದಾರೆ.
ಪುಣೆಯಲ್ಲಿ ದೇಶೀಯ ಪಂದ್ಯದ ವೇಳೆ ಪಾಂಡ್ಯ ಅವರನ್ನು ಭೇಟಿಯಾಗಲು ಹೋದಾಗ ಅಕ್ಷಯ್ ಕುಮಾರ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಅವರು ದೊಡ್ಡ ಸ್ಟಾರ್. ಅದಕ್ಕಾಗಿ ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ ಎಂದು ಕೂಡ ಪಾಯಲ್ ಘೋಷ್ ಹೇಳಿದ್ದಾರೆ.
ಅನುರಾಗ್ ಕಶ್ಯಪ್ ಮೇಲೆ ಆರೋಪ
ಇದಕ್ಕೂ ಮುನ್ನ ಟ್ವೀಟ್‌ನಲ್ಲಿ ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪಾಯಲ್ ಘೋಷ್ ಆರೋಪ ಮಾಡಿದ್ದಾರೆ. ಆದರೆ ನಟ ಅಕ್ಷಯ್ ಕುಮಾರ್ ಅವರು ನನ್ನ ಜೊತೆ ಅನುಚಿತವಾಗಿ ನಡೆದುಕೊಂಡಿಲ್ಲ, ಅವರು ದೊಡ್ಡ ನಟ ನಾನು ಯಾವಾಗಲೂ ಅವರನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಶಮಿಗೆ ಮದುವೆ ಆಫರ್ ನೀಡಿದ್ದ ನಟಿ
ಇದಕ್ಕೂ ಮುನ್ನ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕೆ ಮನಸೋತಿದ್ದ ನಟಿ ಪಾಯಲ್ ಘೋಷ್, ಶಮಿ ಅವರನ್ನು ಮದುವೆಯಾಗಲು ಸಿದ್ದವಿದ್ದೇನೆ ಆದರೆ ಅವರು ಇಂಗ್ಲಿಷ್ ಕಲಿಯಬೇಕು ಎಂದು ಟ್ವೀಟ್ ಮಾಡುವ ಮೂಲಕ ಸುದ್ದಿ ಮಾಡಿದ್ದರು.
ಪಾಯಲ್ ಕೋಲ್ಕತ್ತಾ ಮೂಲದವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಅವರು ರಾಮದಾಸ್ ಅಠವಾಲೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದ ರಾಜಕಾರಣಿಯೂ ಹೌದು. ಅವರು ಅದರ ಮಹಿಳಾ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಘೋಷ್ ಅವರು ಶಾರ್ಪ್ಸ್ ಪೆರಿಲ್, ಪ್ರಯಾಣಂ, ಊಸರವಲ್ಲಿ, ಪಟೇಲ್ ಕಿ ಪಂಜಾಬಿ ಶಾದಿ, ಮತ್ತು ಕೋಯಿ ಜಾನೆ ನಾ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.












Click it and Unblock the Notifications